Starlink: ಮಣಿಪುರದಲ್ಲಿ ಮೈತೇಯಿ ಗುಂಪಿನಿಂದ ಎಲಾನ್ ಮಸ್ಕ್ ಕಂಪನಿಯ ಸ್ಟಾರ್ಲಿಂಕ್ ಇಂಟರ್ನೆಟ್ ಅಕ್ರಮ ಬಳಕೆ?
Starlink: ಮಣಿಪುರದಲ್ಲಿ ಪೊಲೀಸರು ನಡೆಸಿದ ದಾಳಿಯಲ್ಲಿ ಮೈತೇಯಿ ದಂಗೆಕೋರರಿಂದ ಹಲವಾರು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅವುಗಳಲ್ಲಿ ಮಸ್ಕ್ ಒಡೆತನ ಸ್ಟಾರ್ ಲಿಂಕ್ ಕೂಡ ಇದೆ ಎಂದು ನೆಟ್ಟಿಗರೊಬ್ಬರು ಪತ್ತೆ ಹಚ್ಚಿದ್ದಾರೆ.;
ಮಣಿಪುರದ ನಡೆಯುತ್ತಿರುವ ದಂಗೆಯಲ್ಲಿ ಬುಡಕಟ್ಟು ಕುಕಿಗಳ ವಿರುದ್ಧ ತಿರುಗಿ ಬಿದ್ದಿರುವ ಮೈತೇಯಿ ಗುಂಪು ಎಲಾನ್ ಮಸ್ಕ್ ಒಡೆತನದ ಸ್ಟಾರ್ಲಿಂಕ್ ಇಂಟರ್ನೆಟ್ ಬಳಸುತ್ತಿದ್ದರು ಎಂಬ ಆತಂಕಕಾರಿ ಮಾಹಿತಿ ಹೊರಗೆ ಬಿದ್ದಿದೆ. ಈ ಇಂಟರ್ನೆಟ್ ಬಳಕೆಗೆ ಭಾರತದಲ್ಲಿ ಅವಕಾಶ ಇಲ್ಲ. ಆದಾಗ್ಯೂ ಆ ಕಂಪನಿಗೆ ಸೇರಿದ ರೌಟರ್, ಡಿಶ್ ಮತ್ತಿತರರ ಡಿವೈಸ್ಗಳು ಬಂದಿದ್ದು ಹೇಗೆ ಎಂಬ ಚರ್ಚೆ ಶುರವಾಗಿದೆ. ಈ ಬಗ್ಗೆ ನೆಟ್ಟಿಗರೊಬ್ಬರು ಕೇಳಿದ ಪ್ರಶ್ನೆಗೆ ಸ್ವತಃ ಎಲಾನ್ ಮಸ್ಕ್ ಉತ್ತರ ನೀಡಿದ್ದು ಭಾರತದಲ್ಲಿ ಅದು ಬಳಕೆಯಲ್ಲಿ ಇಲ್ಲ ಎಂದು ಹೇಳಿದ್ದಾರೆ.
ಗಲಭೆ ಪೀಡಿತ ಪ್ರದೇಶಗಳಲ್ಲಿ ಕೇಂದ್ರ ಸರ್ಕಾರ ಇಂಟರ್ನೆಟ್ ಸೇವೆಗಳನ್ನು ಸ್ಥಗಿತ ಮಾಡಿದೆ. ಆದಾಗ್ಯೂ ಈ ಗುಂಪು ಅದ್ಹೇಗೆ ಬಳಸಿಕೊಂಡಿದೆ ಎಂಬ ಅನುಮಾನ ವ್ಯಕ್ತವಾಗಿದೆ. ಸ್ಟಾರ್ಲಿಂಕ್ ಸಾಧನಗಳನ್ನು ದಾಳಿಗಳನ್ನು ಸಂಘಟಿಸಲು ಮತ್ತು ಯುದ್ಧತಂತ್ರದ ಮಾಹಿತಿ ಸಂವಹನ ಮಾಡಲು ಬಳಸುತ್ತಿದ್ದರು ಎನ್ನಲಾಗಿದೆ.
ಬಿಲಿಯನೇರ್ ಎಲಾನ್ ಮಸ್ಕ್ ಅವರ ಏರೋಸ್ಪೇಸ್ ಕಂಪನಿ ಸ್ಪೇಸ್ಎಕ್ಸ್ ಒಡೆತನದ ಸ್ಟಾರ್ಲಿಂಗ್, ಭೂಮಿಯ ಕೆಳ ಕಕ್ಷೆ ಬಳಸಿಕೊಂಡು ವಿಶ್ವದ ಯಾವುದೇ ಭಾಗದಲ್ಲಿ ಬ್ರಾಡ್ಬಾಂಡ್ ಬಳಸಲು ಅನುವು ಮಾಡುತ್ತದೆ. ಇದು ವಿಶ್ವದ ಅತ್ಯಂತ ದೊಡ್ಡ ಇಂಟರ್ನೆಟ್ ನೆಟ್ವರ್ಕ್ ಆಗಿದೆ. ಅಮೆರಿಕಾದ ಕಂಪನಿಯು ಭಾರತದಲ್ಲಿ ಇದರ ಪ್ರಸರಣಕ್ಕೆ ಅನುಮತಿ ಕೋರಿದೆ. ಆದರೆ ಅವಕಾಶ ಸಿಕ್ಕಿಲ್ಲ.
ಎಲಾನ್ ಮಸ್ಕ್ ಉತ್ತರವೇನು?
ಸ್ಟಾರ್ ಲಿಂಕ್ ಭಾರತದಲ್ಲಿ ಕಾರ್ಯನಿರ್ವಹಿಸುವುದಿಲ್ಲ ಎಂದು ಎಲಾನ್ ಮಸ್ಕ್ ಎಕ್ಸ್ ನಲ್ಲಿ ಪೋಸ್ಟ್ ನಲ್ಲಿ ತಿಳಿಸಿದ್ದಾರೆ. "ಇದು ಸುಳ್ಳು. ಸ್ಟಾರ್ಲಿಂಗ್ ಉಪಗ್ರಹ ಸೇವೆಗಳನ್ನು ಭಾರತದಲ್ಲಿ ಸ್ಥಗತಿ ಮಾಡಲಾಗಿದೆ" ಎಂದು ಅವರು ಹೇಳಿದ್ದಾರೆ.
ಭದ್ರತಾ ಪಡೆಗಳ ಜಂಟಿ ತಂಡವು ಡಿಸೆಂಬರ್ 13 ರಂದು ಇಂಫಾಲ್ ಪೂರ್ವ ಜಿಲ್ಲೆಯ ಖುನೌನಿಂದ ಸ್ಟಾರ್ಲಿಂಕ್ ಡಿಶ್ ಮತ್ತು ರೂಟರ್ ಜೊತೆಗೆ ಎಂಎ 4 ಅಸಾಲ್ಟ್ ರೈಫಲ್, ಗ್ರೆನೇಡ್ಗಳನ್ನು ಗುಂಡುಗಳನ್ನು ವಶಪಡಿಸಿಕೊಂಡಿದ್ದವು.
ಆರಂಭದಲ್ಲಿ ಪೊಲೀಸರಿಗೆ ಇದು ಏನು ಎಂಬುದು ಗೊತ್ತಾಗಿರಲಿಲ್ಲ. ಅವರು ಸಾಧನವನ್ನು "ಇಂಟರ್ನೆಟ್ ಉಪಗ್ರಹ ಆಂಟೆನಾ ಮತ್ತು ರೂಟರ್" ಎಂದು ದಾಖಲಿಸಿದ್ದರು. ಆದರೆ, ನೆಟ್ಟಿಗರೊಬ್ಬರು ಪೊಲೀಸರು ಪ್ರಕಟಿಸಿದ ಚಿತ್ರಗಳನ್ನು ಹತ್ತಿರದಿಂದ ಗಮನಿಸಿದ ಎಲಾನ್ ಮಸ್ಕ್ ಗಮನ ಸೆಳೆದಿದ್ದಾರೆ. ನಿಮ್ಮ ಇಂಟರ್ನಟ್ ದುರುಪಯೋಗವಾಗದಂತೆ ತಡೆಯಬೇಕು ಎಂದು ಮವನಿ ಮಾಡಿದ್ದರು. ಅದಕ್ಕೆ ಮಸ್ಕ್ ಪ್ರತಿಕ್ರಿಯೆ ನೀಡಿದ್ದಾರೆ.
ಚುರಾಚಂದ್ಪುರ, ಚಂದೇಲ್, ಇಂಫಾಲ್ ಪೂರ್ವ ಮತ್ತು ಕಾಂಗ್ಪೋಕ್ಪಿಯ ಬೆಟ್ಟ ಮತ್ತು ಕಣಿವೆ ಪ್ರದೇಶಗಳಲ್ಲಿ ಈ ಸಾಧನಗಳು ಪತ್ತೆಯಾಗಿದ್ದವು.