ELECTORAL BOND | ಸುಪ್ರೀಂಕೋರ್ಟಿಗೆ ಅಫಿಡವಿಟ್ ಸಲ್ಲಿಸಿದ ಎಸ್ ಬಿ ಐ
By : The Federal
Update: 2024-03-21 11:24 GMT
ಚುನಾವಣಾ ಬಾಂಡ್ ಕುರಿತಂತೆ ಸರ್ವೋಚ್ಛ ನ್ಯಾಯಾಲಯಕ್ಕೆ ಗುರುವಾರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅನುಸರಣಾ ಶಪಥಪತ್ರ (compliance affidavit) ಸಲ್ಲಿಸಿದೆ.
ವಿಶಿಷ್ಟ ಅಕ್ಷರಸಂಖ್ಯಾಯುಕ್ತ (alphanumeric) ವಿವರಗಳೂ ಸೇರಿದಂತೆ ಚುನಾವಣಾ ಬಾಂಡ್ ಗೆ ಸಂಬಂಧಿಸಿದ ಎಲ್ಲ ವಿವರಗಳನ್ನೂ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವುದಾಗಿ ತನ್ನ ಅಫಿಡವಿಟ್ ನಲ್ಲಿ ತಿಳಿಸಿದೆ.
ಅಫಿಡವಿಟ್ ಪ್ರಕಾರ ಯಾವುದೇ ವಿವರವನ್ನೂ ತಡೆಹಿಡಿಯದೆ, ನ್ಯಾಯಾಲಯ ಸೂಚಿಸಿದ ಎಲ್ಲ ವಿವರಗಳನ್ನು ಚುನವಣಾ ಆಯೋಗಕ್ಕೆ ಸಲ್ಲಿಸಿರುವುದಾಗಿ ಎಸ್ ಬಿ ಐ ತಿಳಿಸಿದೆ.
ಸರ್ವೋಚ್ಛ ನ್ಯಾಯಾಲಯವು ಚುನಾವಣಾ ಬಾಂಡ್ ಗೆ ಸಂಬಂಧಿಸಿದಂತೆ ವಿಶಿಷ್ಟ ಅಕ್ಷರಸಂಖ್ಯಾಯುಕ್ತ ವಿವರಗಳೂ ಸೇರಿದಂತೆ ಎಲ್ಲ ಮಾಹಿತಿಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸುವಂತೆ ಕಳೆದ ಸೋಮವಾರ ಬ್ಯಾಂಕಿಗೆ ಆದೇಶಿಸಿತ್ತು. ಈ ಆದೇಶವನ್ನು ಯಥಾವತ್ತಾಗಿ ಪಾಲಿಸಿರುವುದಾಗಿ ಎಸ್ ಬಿ ಐ ನ್ಯಾಯಾಲಯಕ್ಕೆ ಸಲ್ಲಿಸಿದ ಅಫಿಡವಿಟ್ ನಲ್ಲಿ ತಿಳಿಸಿದೆ.