PM Modi: ಸುಸ್ವಾಗತ ಸುನಿತಾ ವಿಲಿಯಮ್ಸ್‌; ಪ್ರಧಾನಿ ಮೋದಿ ಶುಭಹಾರೈಕೆ

ಎದುರಾಗಿರುವ ಅನಿಶ್ಚಿತತೆಯ ನಡುವೆಯೂ ಅವರ ಅಚಲ ಧೈರ್ಯ ಮತ್ತು ದೃಢ ನಿಶ್ಚಯ ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡುತ್ತದೆ" ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.;

Update: 2025-03-19 06:32 GMT

ಬಾಹ್ಯಾಕಾಶದಲ್ಲಿ 9 ತಿಂಗಳ ಕಾಲ ಸಂಶೋಧನೆ ನಡೆಸಿದ ನಂತರ ಭೂಮಿಗೆ ಮರಳಿದ ಭಾರತೀಯ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಮತ್ತು ಕ್ರ್ಯೂ-9 ಗಗನಯಾತ್ರಿಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಟ್ವಿಟರ್ ಮೂಲಕ ಸ್ವಾಗತಿಸಿದ್ದಾರೆ. "ಸುಸ್ವಾಗತ, #Crew9! ಭೂಮಿಯು ನಿಮ್ಮನ್ನು ಬಹಳವಾಗಿ ಮಿಸ್ ಮಾಡಿಕೊಂಡಿತ್ತು" ಎಂದು ಅವರು ಟ್ವಿಟರ್‌ನಲ್ಲಿ ಬರೆದಿದ್ದಾರೆ.


"ಅವರ ಧೈರ್ಯ, ದಿಟ್ಟತನ ಮತ್ತು ಮಾನವ ಚೈತನ್ಯದ ಅನಂತ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ. ಸುನಿತಾ ವಿಲಿಯಮ್ಸ್ ಮತ್ತು ಕ್ರ್ಯೂ-9 ಗಗನಯಾತ್ರಿಗಳು ಪರಿಶ್ರಮ ಎಂದರೇನು ಎಂಬುದನ್ನು ಮತ್ತೊಮ್ಮೆ ತೋರಿಸಿಕೊಟ್ಟಿದ್ದಾರೆ. ಅಜ್ಞಾತದ ಮಧ್ಯೆಯೂ ಅವರ ಅಚಲ ಧೈರ್ಯ ಮತ್ತು ದೃಢ ನಿಶ್ಚಯ ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡುತ್ತದೆ" ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

"ಮಾನವ ಸಾಮರ್ಥ್ಯದ ಮಿತಿಗಳನ್ನು ಮೀರುವುದು, ಕನಸು ಕಾಣಲು ಧೈರ್ಯ ಮಾಡುವುದು ಮತ್ತು ಆ ಕನಸುಗಳನ್ನು ನನಸಾಗಿಸುವ ಧೈರ್ಯ ಹೊಂದುವುದೇ ಬಾಹ್ಯಾಕಾಶ ಪರಿಶೋಧನೆಯಾಗಿದೆ. ಜಗತ್ತಿನ ಕಣ್ಮಣಿಯಾಗಿರುವ ಸುನಿತಾ ವಿಲಿಯಮ್ಸ್ ತಮ್ಮ ವೃತ್ತಿಜೀವನದುದ್ದಕ್ಕೂ ಈ ಸ್ಫೂರ್ತಿಗೆ ಉದಾಹರಣೆಯಾಗಿದ್ದಾರೆ. ಗಗನಯಾತ್ರಿಗಳನ್ನು ಸುರಕ್ಷಿತವಾಗಿ ಕರೆತರುವಲ್ಲಿ ದಣಿವರಿಯದೆ ಕೆಲಸ ಮಾಡಿದ ಎಲ್ಲರ ಬಗ್ಗೆಯೂ ನಾವು ಹೆಮ್ಮೆಪಡುತ್ತೇವೆ" ಎಂದೂ ಮೋದಿ ಅವರು ಹೇಳಿದ್ದಾರೆ.

ಭೂಮಿಗೆ ಮರಳಿದ ಸುನಿತಾ

ಸತತ 9 ತಿಂಗಳ ಕಾಲ ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ (ISS) ಸಿಲುಕಿದ್ದ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರನ್ನು ಕರೆತಂದ ಸ್ಪೇಸ್‌ಎಕ್ಸ್‌ನ ಕ್ಯಾಪ್ಸ್ಯೂಲ್ ಬುಧವಾರ ಬೆಳಿಗ್ಗೆ 3:27 ಕ್ಕೆ (ಭಾರತೀಯ ಕಾಲಮಾನ) ಫ್ಲೋರಿಡಾ ಕರಾವಳಿಯಲ್ಲಿ ಇಳಿದಿದೆ.

Tags:    

Similar News