ಸೂಫಿ ಸಂತ ಕಾಳೆ ಖಾನ್ ಹೆಸರಿನ ಡೆಲ್ಲಿಯ ಚೌಕಕ್ಕೆ ಬಿರ್ಸಾ ಮುಂಡಾ ಹೆಸರು ಮರು ನಾಮಕರಣ
2021ರಿಂದ ಕೇಂದ್ರ ಸರ್ಕಾರವು ಬಿರ್ಸಾ ಮುಂಡಾ ಅವರ ಜನ್ಮ ದಿನಾಚರಣೆಯನ್ನು 'ಜಂಜತಿಯಾ ಗೌರವ್ ದಿವಸ್' ಎಂದು ಆಚರಿಸುತ್ತಿದೆ. ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಮನೋಹರ್ ಲಾಲ್ ಖಟ್ಟರ್ ಶುಕ್ರವಾರ (ನವೆಂಬರ್ 15) ಮರು ನಾಮಕರಣ ಮಾಡಿದ್ದಾರೆ.;
14ನೇ ಶತಮಾನದ ಸೂಫಿ ಸಂತ ಕಾಳೆ ಖಾನ್ ಹೆಸರಿದ್ದ ಡೆಲ್ಲಿಯ ಪ್ರಮುಖ ಚೌಕಕ್ಕೆ (ಸರೈ ಕಾಳೆ ಖಾನ್) ಈಗ ಜಾರ್ಖಂಡ್‌ನ ಸ್ವಾತಂತ್ರ್ಯ ಹೋರಾಟಗಾರ ಬುಡಕಟ್ಟು ನಾಯಕ ಬಿರ್ಸಾ ಮುಂಡಾ ಅವರ ಹೆಸರನ್ನು ಇಡಲಾಗಿದೆ. ಬಿರ್ಸಾ ಮುಂಡಾ ಅವರ 150ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ನವದೆಹಲಿಯ ಸರೈ ಕಾಳೆ ಖಾನ್ ಚೌಕ್ ಅನ್ನು ಈಗ ಬಿರ್ಸಾ ಮುಂಡಾ ಚೌಕ್ ಎಂದು ಮರು ನಾಮಕರಣ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
2021ರಿಂದ ಕೇಂದ್ರ ಸರ್ಕಾರವು ಬಿರ್ಸಾ ಮುಂಡಾ ಅವರ ಜನ್ಮ ದಿನಾಚರಣೆಯನ್ನು 'ಜಂಜತಿಯಾ ಗೌರವ್ ದಿವಸ್' ಎಂದು ಆಚರಿಸುತ್ತಿದೆ. ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಮನೋಹರ್ ಲಾಲ್ ಖಟ್ಟರ್ ಶುಕ್ರವಾರ (ನವೆಂಬರ್ 15) ಮರು ನಾಮಕರಣವನ್ನು ಘೋಷಿಸಿದೆ.
1875ರಲ್ಲಿ ಜಾರ್ಖಂಡ್‌ನಲ್ಲಿ ಜನಿಸಿದ ಬಿರ್ಸಾ ಮುಂಡಾ ಅವರು ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ತಮ್ಮ ಪ್ರದೇಶದ ಬುಡಕಟ್ಟು ಜನರನ್ನು ಒಟ್ಟುಗೂಡಿಸಿ ಹೋರಾಡಿದ್ದರು. ಅವರು ತಮ್ಮ 25ನೇ ವಯಸ್ಸಿನಲ್ಲಿ ಬ್ರಿಟಿಷ್ ಸೆರೆಯಲ್ಲಿ ನಿಧನ ಹೊಂದಿದ್ದರು.
"ಇಲ್ಲಿನ ಐಎಸ್‌ಬಿಟಿ ಬಸ್ ನಿಲ್ದಾಣದ ಹೊರಗಿನ ದೊಡ್ಡ ಚೌಕಕ್ಕೆ ಭಗವಾನ್ ಬಿರ್ಸಾ ಮುಂಡಾ ಅವರ ಹೆಸರನ್ನು ಇಡಲಾಗುವುದು. ಈ ಪ್ರತಿಮೆ ಮತ್ತು ಆ ಚೌಕದ ಹೆಸರನ್ನು ನೋಡಿದಾಗ, ದೆಹಲಿಯ ನಾಗರಿಕರು ಮಾತ್ರವಲ್ಲದೆ ಬಸ್ ನಿಲ್ದಾಣಕ್ಕೆ ಭೇಟಿ ನೀಡುವ ಜನರು ಖಂಡಿತವಾಗಿಯೂ ಅವರ ಮುಂಡಾ ಅವರ ಜೀವನದಿಂದ ಸ್ಫೂರ್ತಿ ಪಡೆಯುತ್ತಾರೆ " ಎಂದು ಮನೋಹರ್ ಲಾಲ್ ಖಟ್ಟರ್ ಹೇಳಿದರು.
ವಿಶೇಷವೆಂದರೆ, ಜಾರ್ಖಂಡ್ ವಿಧಾನಸಭಾ ಚುನಾವಣೆಯ ನಡೆಯುತ್ತಿರುವ ನಡುವೆ ಮತದಾನ ನಡೆದಿದೆ., ಮೊದಲ ಹಂತದ ಚುನಾವಣೆ ನವೆಂಬರ್ 13ರಂದು ನಡೆದಿದ್ದು, ಎರಡನೇ ಹಂತದ ಚುನಾವಣೆ ನವೆಂಬರ್ 20 ರಂದು ನಡೆಯಲಿದೆ.
ಬಿರ್ಸಾ ಮುಂಡಾ ಪ್ರತಿಮೆ ಅನಾವರಣ
ಇದಕ್ಕೂ ಮುನ್ನ ಕೇಂದ್ರ ಗೃಹ ಸಚಿವ ಅಮಿತ್ ಶಾ, ಖಟ್ಟರ್ ಮತ್ತು ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಅವರೊಂದಿಗೆ ರಾಷ್ಟ್ರ ರಾಜಧಾನಿಯಲ್ಲಿ ಭಗವಾನ್ ಬಿರ್ಸಾ ಮುಂಡಾ ಅವರ ಪ್ರತಿಮೆ ಅನಾವರಣ ಮಾಡಲಾಯಿತು .
"ಭಗವಾನ್ ಬಿರ್ಸಾ ಮುಂಡಾ ಅವರ ಜೀವನವನ್ನು ಎರಡು ಭಾಗಗಳಾಗಿ ವಿಂಗಡಿಸುವ ಮೂಲಕ ನಾವು ನೋಡಬಹುದು. ಒಂದು ಬುಡಕಟ್ಟು ಸಂಸ್ಕೃತಿಯನ್ನು ರಕ್ಷಿಸುವುದು ಮತ್ತು ಇನ್ನೊಂದು ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಮಾಡುವ ಮನೋಭಾವ. 25ನೇ ವಯಸ್ಸಿನಲ್ಲಿ, ಅವರು ಮಾಡಿದ ಸಾಹಸ ಮತ್ತು ತ್ಯಾಗ 150 ವರ್ಷಗಳ ನಂತರವೂ ನೆನಪಿನಲ್ಲಿ ಉಳಿಯುತ್ತದೆ" ಎಂದು ಅವರು ಹೇಳಿದರು.
ಯೋಜನೆಗಳನ್ನು ಉದ್ಘಾಟಿಸಿದ ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ ಅವರು ಬಿಹಾರದ ಜಮುಯಿಯಲ್ಲಿ ನಡೆದ ಜಂಜತೀಯ ಗೌರವ್ ದಿವಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಈ ಪ್ರದೇಶದಲ್ಲಿ ಹಲವಾರು ಯೋಜನೆಗಳನ್ನು ಉದ್ಘಾಟಿಸಿದರು.
ಮುಂಡಾ ಅವರ ಗೌರವಾರ್ಥ ಪ್ರಧಾನಿ ಮೋದಿ ಸ್ಮರಣಾರ್ಥ ನಾಣ್ಯ ಮತ್ತು ಅಂಚೆ ಚೀಟಿ ಅನಾವರಣಗೊಳಿಸಿದರು.
ಛೋಟಾನಾಗ್ಪುರ ಪ್ರಸ್ಥಭೂಮಿಯ ಮುಂಡಾ ಬುಡಕಟ್ಟು ಜನಾಂಗಕ್ಕೆ ಸೇರಿದ ಬಿರ್ಸಾ ಮುಂಡಾ, ಛೋಟಾನಾಗ್ಪುರ ಪ್ರದೇಶದ ಬುಡಕಟ್ಟು ಸಮುದಾಯವನ್ನು ತಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಡಲು ಪ್ರೇರೇಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರು ಬ್ರಿಟಿಷ್ ಆಳ್ವಿಕೆಯ ವಿರುದ್ಧ "ಉಲ್ಗುಲನ್" (ದಂಗೆ) ಎಂದು ಕರೆಯಲ್ಪಡುವ ಸಶಸ್ತ್ರ ಕ್ರಾಂತಿ ಮುನ್ನಡೆಸಿದ್ದರು.
ಕಾಳೆ ಖಾನ್ ಯಾರು?
ಕಾಳೆ ಖಾನ್ 14 ಶತಮಾನದಲ್ಲಿದ್ದ ಸೂಫಿ ಸಂತ. ಅವರು ಲೋಧಿ ವಂಶಜರ ಆಳ್ವಿಕೆಯಲ್ಲಿ ಬಹ್ಲೋಲ್ ಲೋಧಿಯ ಆಸ್ಥಾನ ಕವಿಯಾಗಿದ್ದ ಎಂಬುದು ಶಾಸನಗಳಲ್ಲಿ ಪತ್ತೆಯಾಗಿವೆ. ಸರೈ ಎಂಬುದು ಮೊಘಲ್ ಸಾಮ್ರಾಜ್ಯದಲ್ಲಿ ತಂಗುದಾಣ ಎಂಬ ಹೆಸರು ಹೊಂದಿತ್ತು. ಕಾಳೆ ಖಾನ್ ತಂಗುತ್ತಿದ್ದ ಜಾಗವನ್ನು ಸರೈ ಕಾಳೆ ಖಾನ್ ಎಂದು ಕರೆಯಲಾಗುತ್ತಿತ್ತು. ಹೀಗಾಗಿ ಈ ಪ್ರದೇಶವು ಮೊಘಲ್ ಸಾಮ್ರಾಜ್ಯದ ಇತಿಹಾಸ ಹೊಂದಿತ್ತು.