Weather Updates | ಇಂದು ಪುದುಚೆರಿಗೆ ಅಪ್ಪಳಿಸಲಿದೆ ಫೆಂಗಲ್ ಚಂಡಮಾರುತ
ಪುದುಚೆರಿಯ ಎಲ್ಲಾ ಶಾಲೆಗಳು ಮತ್ತು ಕಾಲೇಜುಗಳಿಗೆ ಶನಿವಾರ ರಜೆ ಘೋಷಿಸಲಾಗಿದೆ. ಚಂಡಮಾರುತವು ಪುದುಚೇರಿಯ ಬಳಿ ಗಂಟೆಗೆ 90 ಕಿ.ಮೀ ವೇಗದಲ್ಲಿ ಗಾಳಿಯೊಂದಿಗೆ ಅಪ್ಪಳಿಸಲಿದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ಶುಕ್ರವಾರ ತಿಳಿಸಿದೆ.;
ಶನಿವಾರ ಮಧ್ಯಾಹ್ನ (ನವೆಂಬರ್ 30) ಪುದುಚೇರಿ ಬಳಿ ಫೆಂಗಲ್ ಚಂಡಮಾರುತ ಅಪ್ಪಳಿಸಲಿದೆ. ಹೀಗಾಗಿ ನಿವಾಸಿಗಳನ್ನು ಮನೆಯೊಳಗೆ ಇರುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ತಮಿಳುನಾಡಿನ ಹಲವಾರು ಉತ್ತರ ಭಾಗಗಳಲ್ಲಿ ಜೋರು ಗಾಳಿಯೊಂದಿಗೆ ಭಾರಿ ಮಳೆಯಾಗುತ್ತಿದೆ. ಜನಜೀವನದ ಮೇಲೆ ಪರಿಣಾಮ ಬೀರಿದೆ.
ಪುದುಚೆರಿಯ ಎಲ್ಲಾ ಶಾಲೆಗಳು ಮತ್ತು ಕಾಲೇಜುಗಳಿಗೆ ಶನಿವಾರ ರಜೆ ಘೋಷಿಸಲಾಗಿದೆ. ಚಂಡಮಾರುತವು ಪುದುಚೇರಿಯ ಬಳಿ ಗಂಟೆಗೆ 90 ಕಿ.ಮೀ ವೇಗದಲ್ಲಿ ಗಾಳಿಯೊಂದಿಗೆ ಅಪ್ಪಳಿಸಲಿದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ಶುಕ್ರವಾರ ತಿಳಿಸಿದೆ.
ಜಿಲ್ಲಾಧಿಕಾರಿ ಎ.ಕುಲೋತುಂಗನ್ ಅವರು ಲೋಕೋಪಯೋಗಿ ಇಲಾಖೆ, ಸ್ಥಳೀಯ ಆಡಳಿತ, ಪೊಲೀಸ್ ಮತ್ತು ಇತರ ಸಂಬಂಧಿತ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಪರಿಸ್ಥಿತಿಯನ್ನು ಪರಿಶೀಲಿಸಿದರು.
ಕಂದಾಯ ಮತ್ತು ವಿಪತ್ತು ನಿರ್ವಹಣಾ ಇಲಾಖೆಯು ಸಾರ್ವಜನಿಕರಿಂದ ವೀಪತ್ತು ಕರೆಗಳನ್ನು ಸ್ವೀಕರಿಸಲು ಟೋಲ್ ಫ್ರೀ ಸಂಖ್ಯೆ 112 ಮತ್ತು 1077 ಅನ್ನು ಸ್ಥಾಪಿಸಿದೆ. ಜನರು ವಾಟ್ಸಾಪ್ ಸಂಖ್ಯೆ 9488981070 ಮೂಲಕವೂ ಸಹಾಯ ಪಡೆಯಬಹುದು ಎಂದು ಕೋರಿದೆ.
ಸಲಹೆಯನ್ನು ಅನುಸರಿಸಿ, 4,153 ದೋಣಿಗಳು ದಡಕ್ಕೆ ಮರಳಿವೆ ಮತ್ತು ಅಗತ್ಯವಿದ್ದರೆ 2,229 ಪರಿಹಾರ ಶಿಬಿರಗಳು ಬಳಕೆಗೆ ಸಿದ್ಧವಾಗಿವೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.
ಪರಿಹಾರ ಶಿಬಿರ ಸಿದ್ಧ
ತಿರುವರೂರು ಮತ್ತು ನಾಗಪಟ್ಟಣಂ ಜಿಲ್ಲೆಗಳ ಆರು ಪರಿಹಾರ ಕೇಂದ್ರಗಳಲ್ಲಿ 164 ಕುಟುಂಬಗಳಿಗೆ ಸೇರಿದ ಒಟ್ಟು 471 ಜನರಿಗೆ ವಸತಿ ಕಲ್ಪಿಸಲಾಗಿದೆ. ಜಿಲ್ಲೆಗಳಲ್ಲಿ ದೋಣಿಗಳು, ಜನರೇಟರ್‌ಗಳು, ಮೋಟಾರು ಪಂಪ್‌ಗಳು ಮತ್ತು ಇತರ ಎಲ್ಲಾ ಅಗತ್ಯ ಯಂತ್ರೋಪಕರಣಗಳು ಮತ್ತು ಉಪಕರಣಗಳು ಸಿದ್ಧಗೊಂಡಿವೆ. ನಾಗಪಟ್ಟಣಂ, ಮಯಿಲಾಡುತುರೈ, ತಿರುವರೂರು, ಕಡಲೂರು, ತಂಜಾವೂರು, ಚೆಂಗಲ್ಪೇಟ್ ಮತ್ತು ಚೆನ್ನೈ ಸೇರಿದಂತೆ ಅಗತ್ಯವಿರುವಲ್ಲಿ ಎನ್ಡಿಆರ್‌ಎಎಫ್ ಮತ್ತು ರಾಜ್ಯ ತಂಡಗಳನ್ನು ನಿಯೋಜಿಸಲಾಗಿದೆ.
ಅಧಿಕಾರಿಗಳೊಂದಿಗೆ ಮೇಲ್ವಿಚಾರಣೆ ಮತ್ತು ಸಮನ್ವಯಕ್ಕಾಗಿ ಆಯಾ ಜಿಲ್ಲೆಗಳಲ್ಲಿ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.