ಬಾಂಗ್ಲಾದಲ್ಲಿ ಇಸ್ಕಾನ್‌ ಸಂತ ಚಿನ್ಮಯ್ ಕೃಷ್ಣ ದಾಸ್ ಬಂಧನ, ಭುಗಿಲೆದ್ದ ಪ್ರತಿಭಟನೆ

ಡಿಟೆಕ್ಟಿವ್ ಬ್ರಾಂಚ್‌ನ ಹೆಚ್ಚುವರಿ ಆಯುಕ್ತ ರೆಜೌಲ್ ಕರೀಮ್ ಮಲ್ಲಿಕ್ ದಾಸ್ ಬಂಧನವನ್ನು ದೃಢಪಡಿಸಿದ್ದಾರೆ. ಇದು ದೂರಿಗೆ ಸಂಬಂಧಿಸಿದ ಕೋರಿಕೆಯ ಆಧಾರದ ಮೇಲೆ ಬಂಧನ ಎಂದು ಢಾಕಾ ಟ್ರಿಬ್ಯೂನ್ ವರದಿ ಮಾಡಿದೆ.;

Update: 2024-11-26 06:04 GMT
Krishnadas

ಬಾಂಗ್ಲಾದೇಶದಲ್ಲಿ ಹಿಂದೂಗಳ  ಮೇಲಿನದ ದೌರ್ಜನ್ಯದ ವಿರುದ್ದದ ಪ್ರತಿಭಟನೆಗಳ ನೇತೃತ್ವ ವಹಿಸಿದ್ದ ಪ್ರಮುಖ ಸಂತ ಮತ್ತು ಬಾಂಗ್ಲಾದೇಶದ ಇಂಟರ್‌ನ್ಯಾಷನಲ್‌ ಸೊಸೈಟಿ ಫಾರ್ ಕೃಷ್ಣ ಕಾನ್ಷಿಯಸ್‌ (ಇಸ್ಕಾನ್) ನಾಯಕ ಚಿನ್ಮಯ್ ಕೃಷ್ಣ ದಾಸ್ ಅವರನ್ನು ಢಾಕಾ ಮೆಟ್ರೋಪಾಲಿಟನ್ ಪೊಲೀಸರ ಡಿಟೆಕ್ಟಿವ್ ಶಾಖೆ ಸೋಮವಾರ ಸಂಜೆ (ನವೆಂಬರ್‌ 25) ಬಂಧಿಸಿದೆ. ಢಾಕಾದ ಹಜರತ್ ಶಹಜಲಾಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅವರನ್ನು ಬಂಧಿಸಲಾಗಿದೆ.

ಡಿಟೆಕ್ಟಿವ್ ಬ್ರಾಂಚ್‌ನ ಹೆಚ್ಚುವರಿ ಆಯುಕ್ತ ರೆಜೌಲ್ ಕರೀಮ್ ಮಲ್ಲಿಕ್ ದಾಸ್ ಬಂಧನವನ್ನು ದೃಢಪಡಿಸಿದ್ದಾರೆ. ಇದು ದೂರಿಗೆ ಸಂಬಂಧಿಸಿದ ಕೋರಿಕೆಯ ಆಧಾರದ ಮೇಲೆ ಬಂಧನ ಎಂದು ಢಾಕಾ ಟ್ರಿಬ್ಯೂನ್ ವರದಿ ಮಾಡಿದೆ. ಬಂಧನಕ್ಕೆ ನಿರ್ದಿಷ್ಟ ಕಾರಣ ಬಹಿರಂಗ ಮಾಡಿಲ್ಲ. ಬಂಧನದ ನಂತರ ಢಾಕಾ ಮತ್ತು ಚಿತ್ತಗಾಂಗ್‌ನಲ್ಲಿ ಪ್ರತಿಭಟನೆಗಳು ಭುಗಿಲೆದ್ದಿವೆ. ಹಿಂದೂ ಸಂತನನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಲಾಯಿತು.

ದ್ವೇಷ ದಾಳಿಗಳ ಕಟು ಟೀಕಾಕಾರ

ಚಿನ್ಮಯ್ ಕೃಷ್ಣ ದಾಸ್ ಬ್ರಹ್ಮಚಾರಿ ಪ್ರಸಿದ್ಧ ವೈಷ್ಣವ ಮಠವಾದ ಚಿತ್ತಗಾಂಗ್‌ನಲಿರುವ ಪುಂಡರಿಕ್ ಧಾಮದ ಮುಖ್ಯಸ್ಥ. ಅವರು ಬಾಂಗ್ಲಾದೇಶದ ಸನಾತನ ಜಾಗರಣ ಮಂಚ್‌ ವಕ್ತಾರರೂ ಆಗಿದ್ದಾರೆ.

ಶೇಖ್ ಹಸೀನಾ ಸರ್ಕಾರದ ಪತನದ ನಂತರ ಬಾಂಗ್ಲಾದೇಶದಲ್ಲಿ ಹಿಂದೂ ಹಕ್ಕುಗಳನ್ನು ಪ್ರತಿಪಾದಿಸವುದಲ್ಲಿ ಮುಂಚೂಣಿಯಲ್ಲಿದ್ದಾರೆ. ಬಾಂಗ್ಲಾದೇಶದಲ್ಲಿ ಉದ್ದೇಶಿತ ದ್ವೇಷ ದಾಳಿಗಳು ಮತ್ತು ಧಾರ್ಮಿಕ ತಾರತಮ್ಯದ ಕಟು ಟೀಕಾಕಾರರು. ಹಿಂದೂಗಳ ದೌರ್ಜನ್ಯ ಖಂಡಿಸಿ ಅವರು ದೇಶದಲ್ಲಿ ಹಲವಾರು ರ್ಯಾಲಿಗಳನ್ನು ಆಯೋಜಿಸಿದ್ದರು.

ಇಸ್ಕಾನ್ ವಕ್ತಾರ ರಾಧಾರಾಮ್ ದಾಸ್ ಅವರು ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ಢಾಕಾದಲ್ಲಿನ ಭಾರತೀಯ ಹೈಕಮಿಷನ್ ಅನ್ನು ಟ್ಯಾಗ್ ಮಾಡಿ, "ಈ ಕಷ್ಟದ ಸಮಯದಲ್ಲಿ ಬಾಂಗ್ಲಾದೇಶದ ಅಲ್ಪಸಂಖ್ಯಾತರ ಮುಖ ಮತ್ತು ನಾಯಕ ಚಿನ್ಮಯ್ ಕೃಷ್ಣ ದಾಸ್ ಬ್ರಹ್ಮಚಾರಿ ಅವರನ್ನು ಢಾಕಾ ಪೊಲೀಸರು ಬಂಧಿಸಿ ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ ಎಂಬ ಆಘಾತಕಾರಿ ಸುದ್ದಿ ನನಗೆ ಬಂದಿದೆ. ದಯವಿಟ್ಟು ಗಮನ ಹರಿಸಿ ಎಂದು ಭಾರತದ ವಿದೇಶಾಂಗ ಸಚಿವ ಜೈಶಂಕರ್‌ ಅವರಿಗೆ ಟ್ವೀಟ್‌ ಮಾಡಿದ್ದಾರೆ.

ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಕೂಡ ಚಿನ್ಮಯ್ ದಾಸ್ ಬಂಧನದ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ "ಪ್ರಸಿದ್ಧ ಫೈರ್ ಬ್ರಾಂಡ್ ಹಿಂದೂ ನಾಯಕ ಶ್ರೀ ಚಿನ್ಮಯ್ ಕೃಷ್ಣ ದಾಸ್ ಪ್ರಭು ಅವರನ್ನು ಬಾಂಗ್ಲಾದೇಶದ ಢಾಕಾ ವಿಮಾನ ನಿಲ್ದಾಣದಲ್ಲಿ ಡಿಟೆಕ್ಟಿವ್ ಬ್ರಾಂಚ್ ಅಪಹರಿಸಿದೆ. ಅವರು ಬಾಂಗ್ಲಾದೇಶದ ಹಿಂದೂ ಅಲ್ಪಸಂಖ್ಯಾತರ ಉಳಿವು ಮತ್ತು ಘನತೆಗಾಗಿ ಹೋರಾಟವನ್ನು ಮುನ್ನಡೆಸುತ್ತಿದ್ದಾರೆ. ಮೊಹಮ್ಮದ್ ಯೂನುಸ್ ಅವರ ತೀವ್ರಗಾಮಿ ಆಡಳಿತವು ಯಾವುದೇ ಮಟ್ಟಕ್ಕೆ ಇಳಿಯಬಹುದು ಎಂಬುದಕ್ಕೆ ಇದು ಉದಾಹರಣೆ. ದಯವಿಟ್ಟು ಈ ವಿಷಯವನ್ನು ಗಮನಿಸಿ ತುರ್ತು ಕ್ರಮಗಳನ್ನು ತೆಗೆದುಕೊಳ್ಳುವಂತೆ ನಾನು ಜೈಶಂಕರ್‌ ಅವರಿಗೆ ಒತ್ತಾಯಿಸುತ್ತೇನೆ. ಬಾಂಗ್ಲಾದೇಶ ಸರ್ಕಾರವು ಅವರ ವಿರುದ್ಧ ದೇಶದ್ರೋಹದ ಪ್ರಕರಣವನ್ನು ದಾಖಲಿಸಿದೆ ಎಂದು ಬರೆದುಕೊಂಡಿದ್ದಾರೆ.

ಬಾಂಗ್ಲಾದೇಶದ ಜನಸಂಖ್ಯೆಯಲ್ಲಿ ಹಿಂದೂಗಳು ಸುಮಾರು 8ಪ್ರತಿಶತದಷ್ಟು ಇದ್ದಾರೆ. ಅವರ ಸಮುದಾಯದ ಮೇಲೆ ದಾಳಿಗಳನ್ನು ಎದುರಿಸುತ್ತಿದ್ದಾರೆ. ಮೊಹಮ್ಮದ್ ಯೂನುಸ್ ನೇತೃತ್ವದ ಮಧ್ಯಂತರ ಸರ್ಕಾರವು ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಹಿತಾಸಕ್ತಿಗಳನ್ನು ರಕ್ಷಿಸಲು ಸಾಕಷ್ಟು ಕೆಲಸ ಮಾಡಿಲ್ಲ ಎಂದು ಟೀಕಿಸಿದ್ದಾರೆ. 

Tags:    

Similar News