Sharbat Jihad: ಬಾಬಾ ರಾಮದೇವ್‌ "ಶರಬತ್‌ ಜಿಹಾದ್"‌ ಹೇಳಿಕೆಗೆ ಕೋರ್ಟ್‌ ಛೀಮಾರಿ

ಯೋಗಗುರು ಬಾಬ ರಾಮದೇವ್‌ ಅವರ ಶರಬತ್‌ ಜಿಹಾದ್‌ ಹೇಳಿಕೆಯ ಪ್ರಕರಣ ಮಂಗಳವಾರ (ಏಪ್ರಿಲ್ 22) ವಿಚಾರಣೆಗೆ ಬಂದಿದ್ದು ದೆಹಲಿ ಹೈಕೋರ್ಟ್‌ ಬಾಬ ರಾಮದೇವ್‌ ಅವರಿಗೆ ಛಿಮಾರಿ ಹಾಕಿದೆ.;

Update: 2025-04-22 11:04 GMT

ಯೋಗ ಗುರು ಬಾಬ ರಾಮದೇವ್‌ 

ಯೋಗಗುರು ಬಾಬಾ ರಾಮದೇವ್‌ ನೀಡಿರುವ ವಿವಾದಾತ್ಮಕ 'ಶರಬತ್‌ ಜಿಹಾದ್‌' ಹೇಳಿಕೆ ಬಗ್ಗೆ ದೆಹಲಿ ಹೈಕೋರ್ಟ್​ ಬೇಸರ ವ್ಯಕ್ತಪಡಿಸಿದ್ದು, ಇದು 'ಆತ್ಮ ಸಾಕ್ಷಿಯನ್ನು ಕಲಕುವಂತಿದೆ' ಎಂದು ಅಭಿಪ್ರಾಯಪಟ್ಟಿದೆ.

ಹೇಳಿಕೆಯನ್ನು ವಿರುದ್ಧ, ಹರ್ಮದ್‌ ನ್ಯಾಶನಲ್‌ ಫೌಂಡೇಶನ್‌ ಇಂಡಿಯಾ ಕಂಪನಿಯು ದಾಖಲಿಸಿದ್ದ ಪ್ರಕರಣವನ್ನು ಮಂಗಳವಾರ (ಏಪ್ರಿಲ್ 22) ವಿಚಾರಣೆಗ ಎತ್ತಿಕೊಂಡ ನ್ಯಾಯಮೂರ್ತಿ ಅಮಿತ್‌ ಬನ್ಸಾಲ್‌ ಅವರಿದ್ದ ಪೀಠ, ಇದು ನ್ಯಾಯಾಲಯದ ಆತ್ಮಸಾಕ್ಷಿಗೆ ಧಕ್ಕೆಯುಂಟುಮಾಡುತ್ತದೆ. ಇದು ಸಮರ್ಥನೀಯವಲ್ಲ. ಇಲ್ಲದಿದ್ದರೆ ಕಠಿಣ ಆದೇಶ ನೀಡಬೇಕಾಗುತ್ತದೆ ಎಂದು ಬಾಬಾ ರಾಮದೇವ್‌ ಪರ ವಕೀಲರಿಗೆ ತಿಳಿಸಿದರು.

ಬಾಬಾ ರಾಮದೇವ್‌ ಇತ್ತೀಚೆಗೆ, ಜನಪ್ರಿಯ ಪಾನೀಯ ರೂಹ್ ಅಫ್ಜಾವನ್ನು 'ಶರಬತ್‌ ಜಿಹಾದ್‌' ಎಂದು ಟೀಕಿಸಿದ್ದರು. ಮದರಸ ಹಾಗೂ ಮಸೀದಿಗಳಿಗೆ ಕಂಪನಿ ಹಣ ರವಾನಿಸುತ್ತದೆ ಎಂದು ಆರೋಪಿಸಿದ್ದು ಇದು ಕಾನೂನು ಸಂಘರ್ಷಕ್ಕೆ ಕಾರಣವಾಗಿತ್ತು.

ಏನಿದು ಶರಬತ್‌ ಜಿಹಾದ್

ಈ ಶರಬತ್‌ ಅನ್ನು ನೀವು ಕುಡಿದರೆ ಮಸೀದಿ, ಮದರಸಗಳನ್ನು ನಿರ್ಮಾಣ ಮಾಡಲು ನೆರವಾದಂತಾಗುತ್ತದೆ. ನೀವು ಪತಂಜಲಿ ರೋಜ್ಹಾ ಶರಬತ್ತು ಕುಡಿದರೆ ಗುರುಕುಲ ನಿರ್ಮಾಣ ಮಾಡಬಹುದು. ಆಚಾರ್ಯ ಪರಂಪರೆ ಅಭಿವೃದ್ದಿಯಾಗುತ್ತದೆ ಹಾಗೂ ಪತಂಜಲಿ ವಿಶ್ವವಿದ್ಯಾನಿಲಯ ವಿಸ್ತಾರಗೊಂಡು ಭಾರತೀಯ ಶಿಕ್ಷಣ ಮಂಡಳಿ ಅಭಿವೃದ್ಧಿಯಾಗುತ್ತದೆ ಎಂದು ಹೇಳಿಕೆ ನೀಡಿದ್ದರು.

'ಶರಬತ್‌ ಜಿಹಾದ್‌' ಎಂಬುದು 'ಲವ್‌ ಜಿಹಾದ್‌'ನ ರೂಪ. ಶರಬತ್‌ ಜಿಹಾದ್‌ನಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ ಹಾಗೂ ಈ ಸಂದೇಶವನ್ನು ಎಲ್ಲರಿಗೂ ತಲುಪಿಸಿ ಎಂದು ಹೇಳಿಕೆ ನೀಡಿದ್ದರು.

ಬಾಬಾ ರಾಮದೇವ್‌ ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದು ನಾನೂ ಯಾವುದೇ ಕಂಪನಿಯಾಗಲಿ ಅಥವಾ ಸಮುದಾಯದ ಹೆಸರನ್ನಾಗಲಿ ಹೇಳಿಲ್ಲ ಎಂದಿದ್ದಾರೆ.

ಕೋಮು ವಿಭಜನೆ ಸೃಷ್ಠಿಗೆ ಯತ್ನ

ಹರ್ಮದ್‌ ಪರ ಹಾಜರಿದ್ದ ಹಿರಿಯ ವಕೀಲ ಮುಕುಲ್‌ ರೊಹ್ಟಗಿ, ಬಾಬಾ ರಾಮದೇವ್‌ ಹೇಳಿಕೆಯು ಕೋಮು ವಿಭಜನೆ ಸೃಷ್ಠಿಸುವಂತದ್ದು ಹಾಗೂ ಇದು ಸಹಿಸಲಸಾಧ್ಯವಾದ ಮಾತು ಎಂದಿದ್ದಾರೆ. ವಿಚಾರಣೆ ಸಂದರ್ಭದಲ್ಲಿ ಬಾಬ ರಾಮದೇವ್‌ ಹಾಜರಿರಲಿಲ್ಲ. ಕೋರ್ಟ್‌ ವಿಚಾರಣೆಯನ್ನು ಮುಂದೂಡಿದೆ.

ಬಾಬಾ ರಾಮದೇವ್ ಅವರ ಈ ರೀತಿಯ ವಿವಾದಾತ್ಮಕ ಹೇಳಿಕೆಗಳು ಇದೆ ಮೊದಲಲ್ಲ, ಪತಂಜಲಿ ಕಂಪನಿ ಹಾಗೂ ಅದರ ಸಂಸ್ಥಾಪಕರು ಪ್ರಚಾರಕ್ಕಾಗಿ ಈ ರೀತಿಯ ಹೇಳಿಕೆಯನ್ನು ನೀಡುತ್ತಲೇ ಬಂದಿದ್ದಾರೆ.

ಪತಂಜಲಿ ಆರ್ಯುವೇದದ ಜಾಹಿರಾತುಗಳು ಜನರನ್ನು ದಿಕ್ಕುತಪ್ಪಿಸುವಂತಿವೆ ಎಂದು ಭಾರತೀಯ ವೈದ್ಯಕೀಯ ಸಂಘಟನೆ ಸುಪ್ರೀಂಕೋರ್ಟ್‌ಗೆ ದೂರನ್ನು ನೀಡಿದ್ದು ಕೋರ್ಟ್‌ ಜಾಹೀರಾತಿಗೆ ತಾತ್ಕಾಲಿಕ ನಿರ್ಬಂಧ ವಿಧಿಸಿದೆ.

ದಿವ್ಯಾ ಪಾರ್ಮಸಿಯ ಜಾಹೀರಾತುಗಳು ದಾರಿ ತಪ್ಪಿಸುವಂತಿದೆ ಎಂದು ಕಳೆದ ಜನವರಿಯಲ್ಲಿ ಕೇರಳ ಹೈಕೋರ್ಟ್‌ ಬಾಬಾ ರಾಮದೇವ್‌ ಹಾಗೂ ಆಚಾರ್ಯ ಬಾಲಕೃಷ್ಣ ವಿರುದ್ಧ ಜಾಮೀನು ಸಹಿತ ವಾರಂಟ್‌ ಜಾರಿಗೊಳಿಸಿತ್ತು.

Tags:    

Similar News