ಶೂ ಶಾಪಿಂಗ್ ಮಾಡುತ್ತಲೇ ಟೀಂ ಮೀಟಿಂಗ್ ನಡೆಸಿದ ಮಹಿಳೆ: ವಿಡಿಯೋ ವೈರಲ್
ಮಹಿಳೆಯೊಬ್ಬರು ಶೂ ಅಂಗಡಿಯೊಂದರಲ್ಲಿ ಶಾಪಿಂಗ್ ಮಾಡುತ್ತಾ, ತಮ್ಮ ಲ್ಯಾಪ್‌ಟಾಪ್ ಮೂಲಕ ಕಂಪೆನಿಯ ಮೀಟಿಂಗ್‌ಗೆ ಅಟೆಂಡ್ ಆಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.;
ಕೋವಿಡ್ ನಂತರ ಉದೋಗ್ಯ ಕ್ಷೇತ್ರದಲ್ಲಿ ವರ್ಕ್ ಫರ್ಮ್ ಹೋಮ್ ಕಾನ್ಸೆಪ್ಟ್ ಹೆಚ್ಚಾಗಿದೆ. ಇದರ ಪರಿಣಾಮವಾಗಿ ಜನರಿಗೆ ಎಲ್ಲೆಂದರಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಇದಕ್ಕೆ ಉದ್ಯೋಗಿಗಳು ಖುಷಿಯಾಗಿದ್ದಾರೆ.
ಇದೀಗ ಮಹಿಳೆಯೊಬ್ಬರು ಶೂ ಅಂಗಡಿಯೊಂದರಲ್ಲಿ ಶಾಪಿಂಗ್ ಮಾಡುತ್ತಾ, ತಮ್ಮ ಲ್ಯಾಪ್‌ಟಾಪ್ ಮೂಲಕವೇ ಕಂಪೆನಿಯ ಮೀಟಿಂಗ್‌ಗೆ ಹಾಜರಾಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಹಿಳೆಯೊಬ್ಬರು ಲ್ಯಾಪ್‌ಟಾಪ್ ಹಿಡಿದುಕೊಂಡು ಶೂ ಅಂಗಡಿಯ ರ್ಯಾಕ್‌ನಲ್ಲಿ ಇಟ್ಟಿದ್ದ ಚಪ್ಪಲಿಯನ್ನು ನೋಡುತ್ತಿರುವ ಪೋಸ್ಟ್‌ವೊಂದು ವೈರಲ್ ಆಗಿದೆ.
ಅಂದಹಾಗೆ ಈ ಪೋಸ್ಟ್ ಅನ್ನು ಕಾರ್ತಿಕ್ ಭಾಸ್ಕರ ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. “ಇಂದು ಪೀಕ್ ಬೆಂಗಳೂರಿನಲ್ಲಿ. ತನ್ನ ಲ್ಯಾಪ್‌ಟಾಪ್‌ನಲ್ಲಿ ಟೀಮ್ ಮೀಟಿಂಗ್‌ನಲ್ಲಿ ಭಾಗವಹಿಸುತ್ತಲೇ ಒಬ್ಬರು ಶೂ ಶಾಪಿಂಗ್ ಮಾಡುವುದನ್ನು ನಾನು ನೋಡಿದೆ" ಎಂದು ಕಾರ್ತಿಕ್ ಭಾಸ್ಕರ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಮೇ 22 ರಂದು ಶೇರ್ ಮಾಡಿದ್ದು, 17,400 ವೀಕ್ಷಣೆ ಕಂಡಿದೆ. ಈ ಪೋಸ್ಟ್ ಹಲವಾರು ಲೈಕ್ ಮತ್ತು ರಿಪೋಸ್ಟ್ ಕೂಡ ಕಂಡಿದೆ. ಅನೇಕರು ಕಾಮೆಂಟ್ ಮಾಡಿದ್ದಾರೆ.
"ಮನೆಯಿಂದ ಕೆಲಸದ ಅಡ್ಡಪರಿಣಾಮಗಳು" ಎಂದು ವ್ಯಕ್ತಿಯೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, "ಕಳೆದ ಶನಿವಾರ, ನಾನು ಆಸ್ಪತ್ರೆಯಿಂದ ಮೀಟಿಂಗ್‌ಗೆ ಹಾಜರಾಗಿದ್ದೇನೆ" ಎಂದು ಕಮೆಂಟ್ ಮಾಡಿದ್ದಾರೆ.
ಈ ಹಿಂದೆ ವ್ಯಕ್ತಿಯೊಬ್ಬರು ಬೆಂಗಳೂರಿನಲ್ಲಿ ರಸ್ತೆಯಲ್ಲಿ ಬೈಕ್ ಚಲಾಯಿಸುತ್ತಲೇ ಜೂಮ್ ಮೀಟಿಂಗ್‌ಗೆ ಹಾಜರಾಗಿರುವ ವಿಡಿಯೋ ವೈರಲ್ ಆಗಿತ್ತು.