Actor Darshan | ತಿಂಗಳುಗಳ ಬಳಿಕ ದರ್ಶನ್, ಪವಿತ್ರಾ ಗೌಡ ಭೇಟಿ, ಭುಜ ತಟ್ಟಿ ಸಂತೈಸಿದ ದಾಸ

Actor Darshan | ನಟ ದರ್ಶನ್, ಮೈಸೂರಿಗೆ ತೆರಳಲು, ಪವಿತ್ರಾ ಗೌಡ ಕರ್ನಾಟಕ ಬಿಟ್ಟು ಹೊರರಾಜ್ಯಕ್ಕೆ ತೆರಳಲು ಅನುಮತಿ ಕೋರಿದ್ದರು. ಇಬ್ಬರಿಗೂ ನ್ಯಾಯಾಲಯ ಅನುಮತಿ ನೀಡಿದೆ.;

Update: 2025-01-11 08:32 GMT
ದರ್ಶನ್‌ ಪವಿತ್ರಾ ಗೌಡ

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ರೇಣುಕಾ ಸ್ವಾಮಿ ಕೊಲೆಯ ಎಲ್ಲ ಆರೋಪಿಗಳು ಶುಕ್ರವಾರ (ಜನವರಿ 10) ಬೆಂಗಳೂರಿನ ಸಿಸಿಎಚ್ 57 ಕೋರ್ಟ್‌ಗೆ ಹಾಜರಾಗಿದ್ದರು. ರೇಣುಕಾ ಸ್ವಾಮಿ ಬಂಧನದ ಬಳಿಕ ಇದೇ ಮೊದಲ ಬಾರಿಗೆ ದರ್ಶನ್ ಹಾಗೂ ಪವಿತ್ರಾ ಗೌಡ ಸಾರ್ವಜನಿಕವಾಗಿ ಮುಖಾಮುಖಿ ಆಗಿದ್ದರು.

ಎಲ್ಲ ಆರೋಪಿಗಳ ಹಾಜರಿ ಪಡೆದ ನ್ಯಾಯಾಧೀಶರು ಆ ನಂತರ ಪ್ರಕರಣ ವಿಚಾರಣೆಯನ್ನು ಫೆಬ್ರವರಿ 25ಕ್ಕೆ ಮುಂದೂಡಿದರು. ಈ ನಡುವೆ ನಟ ದರ್ಶನ್ ಮತ್ತು ಪವಿತ್ರಾ ಗೌಡ ಅವರುಗಳು ಪ್ರತ್ಯೇಕವಾಗಿ ನ್ಯಾಯಾಧೀಶರ ಬಳಿ ಬೆಂಗಳೂರು ಬಿಟ್ಟು ಹೊರಗೆ ಪ್ರಯಾಣಿಸಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದರು.

ಇಬ್ಬರಿಗೂ ನ್ಯಾಯಾಲಯ ಅನುಮತಿ ನೀಡಿದೆ. ದರ್ಶನ್, ಐದು ದಿನಗಳ ಕಾಲ ಮೈಸೂರಿಗೆ ತೆರಳಬಹುದಾಗಿದೆ. ಜನವರಿ 12 ರಿಂದ 17ರವರೆಗೆ ದರ್ಶನ್ ಮೈಸೂರಿನಲ್ಲಿ ಇರಬಹುದಾಗಿದೆ. ಅದಾದ ಬಳಿಕ ಮತ್ತೆ ಬೆಂಗಳೂರಿಗೆ ವಾಪಸ್ ಬರಬೇಕಿದೆ.  ಪವಿತ್ರಾ ಗೌಡ, ತಾವು ದೇವಾಲಯಕ್ಕೆ ತೆರಳಲು ಹಾಗೂ ತಮ್ಮ ವಸ್ತ್ರವಿನ್ಯಾಸದ ಬುಟಿಕ್​ಗಾಗಿ ಕೆಲ ವಸ್ತುಗಳನ್ನು ಖರೀದಿ ಮಾಡಲು ವ್ಯಾವಹಾರಿಕ ಕಾರಣಗಳಿಗಾಗಿ ಹೊರ ರಾಜ್ಯಗಳಿಗೆ ತೆರಳಲು ಅನುಮತಿ ನೀಡಬೇಕೆಂದು ಮನವಿ ಮಾಡಿದ್ದರು. ಅದರಂತೆ ನ್ಯಾಯಾಧೀಶರು ಪವಿತ್ರಾ ಗೌಡಗೆ ಸಹ ಅನುಮತಿ ನೀಡಿದ್ದಾರೆ. 

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಅವರು ಶುಕ್ರವಾರ ಬಿಡುಗಡೆಯ ಬಳಿಕ ಮೊದಲ ಬಾರಿಗೆ ಮುಖಾಮುಖಿಯಾಗಿದ್ದಾರೆ. ಈ ವೇಳೆ ದರ್ಶನ್ ನೋಡುತ್ತಿದ್ದಂತೆ ಪವಿತ್ರಾ ಭಾವುಕರಾದರು. ಪವಿತ್ರಾ ಅವರ ಬೆನ್ನುತಟ್ಟಿ ದರ್ಶನ್ ಸಂತೈಸಿದರು. ಕೆಲ ಹೊತ್ತು ಇಬ್ಬರು ಮಾತುಕತೆ ನಡೆಸಿದರು. ಈ ವೇಳೆ ದರ್ಶನ್ ಅವರ ಆರೋಗ್ಯವನ್ನು ವಿಚಾರಿಸಿದರು ಎಂದು ತಿಳಿದುಬಂದಿದೆ. 

Tags:    

Similar News