ದರ್ಶನ್ ವಿರುದ್ಧ ಮತ್ತೆ 1300 ಪುಟಗಳ ಹೆಚ್ಚುವರಿ ದೋಷಾರೋಪ ಪಟ್ಟಿ ಸಲ್ಲಿಕೆ
ದರ್ಶನ್ ವಿರುದ್ಧ ಮತ್ತೆ 1300 ಪುಟಗಳ ಹೆಚ್ಚುವರಿ ದೋಷಾರೋಪ ಪಟ್ಟಿ ಸಲ್ಲಿಕೆ;
ಚಿತ್ರದುರ್ಗದ ರೇಣುಕಸ್ವಾಾಮಿ ಕೊಲೆ ಪ್ರಕರಣ ಸಂಬಂಧ ತನಿಖೆ ಪೂರ್ಣಗೊಳಿಸಿರುವ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ನಟ ದರ್ಶನ್ ಗ್ಯಾಾಂಗ್ ವಿರುದ್ಧ ಶನಿವಾರ 1300 ಪುಟಗಳ ಹೆಚ್ಚುವರಿ ಆರೋಪಪಟ್ಟಿಿ ಸಲ್ಲಿಸಿದ್ದು, ನಟ ದರ್ಶನ್ ಪಟ್ಟಣಗೆರೆ ಶೆಡ್‌ನಲ್ಲಿ ತನ್ನ ಸಹಚರರ ಜತೆ ತೆಗೆಸಿಕೊಂಡಿರುವ ಫೋಟೋಗಳನ್ನು ಆರೋಪಪಟ್ಟಿಿಯಲ್ಲಿ ಲಗತ್ತಿಿಸಿದ್ದಾಾರೆ. ಈ ಮೂಲಕ ನಟ ದರ್ಶನ್‌ಗೆ ಮತ್ತೊೊಂದು ಸಂಕಷ್ಟ ಎದುರಾಗಿದೆ.
ಪ್ರಕರಣ ಸಂಬಂಧ ಈಗಾಗಲೇ 4 ಸಾವಿರ ಪುಟಗಳ ಆರೋಪಪಟ್ಟಿಿ ಸಲ್ಲಿಸಿರುವ ಪೊಲೀಸರು, ಇದೀಗ 1300 ಪುಟಗಳ ಹೆಚ್ಚುವರಿ ಆರೋಪಪಟ್ಟಿಿಯನ್ನು ಸಲ್ಲಿಸಿದ್ದಾಾರೆ. 35ಕ್ಕೂ ಹೆಚ್ಚು ಮಂದಿಯ ಸಾಕ್ಷಿಗಳು ಹಾಗೂ ಎಫ್‌ಎಸ್‌ಎಲ್ ಮತ್ತು ಇತರೆ ತಾಂತ್ರಿಿಕ ತನಿಖೆಯ ದಾಖಲೆಗಳು ಸೇರಿ 40ಕ್ಕೂ ಹೆಚ್ಚು ಸಾಕ್ಷಗಳನ್ನು ಆರೋಪಪಟ್ಟಿಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಶೆಡ್‌ನಲ್ಲೇ 8 ಫೋಟೋಗಳು
ಈ ಹಿಂದೆ ಸಲ್ಲಿಸಿದ್ದ ಆರೋಪಪಟ್ಟಿಿ ಪ್ರಕಾರ ವಾದ ಮಂಡನೆ ವೇಳೆ ರೇಣುಕಸ್ವಾಾಮಿ ಹತ್ಯೆೆ ವೇಳೆ ಪಟ್ಟಣಗೆರೆಯ ಜಯಣ್ಣನಿಗೆ ಸೇರಿದ ಶೆಡ್‌ನಲ್ಲಿ ನಟ ದರ್ಶನ್ ಇರಲಿಲ್ಲ ಎಂದು ವಾದಿಸಲಾಗಿತ್ತು. ಆದರೆ, ಇದೀಗ ಪೊಲೀಸರು ಸಲ್ಲಿಸಿರುವ ಹೆಚ್ಚುವರಿ ಆರೋಪಪಟ್ಟಿಿಯಲ್ಲಿ ಕೊಲೆ ನಡೆದ ಶೆಡ್‌ನಲ್ಲಿ ನಟ ದರ್ಶನ್ ಮತ್ತು ಆತನ ನಾಲ್ಕೈದು ಮಂದಿ ಸಹಚರರು ತೆಗೆದುಕೊಂಡಿರುವ ಎಂಟು ಫೋಟೋಗಳನ್ನು ಲಗತ್ತಿಿಸಲಾಗಿದೆ.
ಪ್ರಮುಖವಾಗಿ ರೇಣುಕಸ್ವಾಾಮಿ ಜೂನ್ 8ರಂದು ಸಂಜೆ ಸುಮಾರು 6-8 ಗಂಟೆ ಅವಧಿಯಲ್ಲಿ ಮೃತಪಟ್ಟಿಿದ್ದಾಾನೆ ಎಂದು ವೈದ್ಯರು ವರದಿ ನೀಡಿದ್ದರು. ಈ ಅವಧಿಯಲ್ಲಿ ದರ್ಶನ್ ಜತೆ ಚಿತ್ರದುರ್ಗ ರಾಘವೇಂದ್ರ ಹಾಗೂ ಇತರೆ ಆರೋಪಿಗಳು ಶೆಡ್‌ನಲ್ಲೇ ಫೋಟೋ ತೆಗೆಸಿಕೊಂಡಿದ್ದಾಾರೆ. ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿ ಪುನೀತ್ ಎಂಬಾತನೇ ಈ ಫೋಟೋ ತೆಗೆದು, ರಾಘವೇಂದ್ರ ಸೇರಿ ಕೆಲ ಆರೋಪಿಗಳ ವಾಟ್‌ಸ್‌ಆ್ಯಪ್‌ಗೆ ಕಳುಹಿಸಿದ್ದ.
ಆದರೆ, ಕೃತ್ಯ ಬಯಲಿಗೆ ಬರುತ್ತಿಿದ್ದಂತೆ ಪ್ರಕರಣ 10ನೇ ಆರೋಪಿ ವಿನಯ್, ಪುನೀತ್ ಮೊಬೈಲ್ ಪಡೆದು ಎಲ್ಲವನ್ನು ಡಿಲೀಟ್ ಮಾಡಿದ್ದ. ಆದರೆ, ಇದೀಗ ಪುನೀತ್ ಮೊಬೈಲ್ ರಿಟ್ರೈವ್ ಮಾಡಲಾಗಿದ್ದು, 8 ಫೋಟೋಗಳು ಸಿಕ್ಕಿಿವೆ. ಈ ಎಲ್ಲಾಾ ಫೋಟೋಗಳನ್ನು ಆರೋಪಪಟ್ಟಿಿಯಲ್ಲಿ ಲಗತ್ತಿಿಸಿದ್ದೇವೆ ಎಂದು ಮೂಲಗಳು ತಿಳಿಸಿವೆ.
ಕೃತ್ಯ ಎಸಗಿ ಹೋಗುವಾಗ ತೆಗೆದ ಪೋಟೋಗಳು
ಮತ್ತೊೊಂದೆಡೆ ರೇಣುಕಸ್ವಾಾಮಿ ಮೇಲೆ ಸಾಮೂಹಿಕವಾಗಿ ಹಲ್ಲೆೆ ನಡೆಸಿದ ಬಳಿಕ ನಟ ದರ್ಶನ್ ಮನೆ ಕಡೆ ಹೊರಟಿದ್ದರು. ಆಗ ರಾಘವೇಂದ್ರ ಹಾಗೂ ಇತರರು, ಬಾಸ್(ದರ್ಶನ್) ಒಂದು ಪೋಟೋ ತೆಗೆದುಕೊಳ್ಳೋೋಣ ಎಂದಿದ್ದಾಾರೆ. ಆಗ ಸ್ಥಳದಲ್ಲಿದ್ದ ಪುನೀತ್, ತನ್ನ ಮೊಬೈಲ್‌ನಿಂದ ದರ್ಶನ್ ಮತ್ತು ರಾಘವೇಂದ್ರ ಹಾಗೂ ಇತರರು ಇರುವ ಫೋಟೋ ತೆಗೆದಿದ್ದ ಎಂದು ಮೂಲಗಳು ತಿಳಿಸಿವೆ.
ಮತ್ತೊೊಂದೆಡೆ ದರ್ಶನ್ ಜಾಮೀನು ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ನ.26ರಂದು ಮುಂದೂಡಿದೆ. ಈ ಮಧ್ಯೆೆ ಹೆಚ್ಚುವರಿ ಆರೋಪಪಟ್ಟಿಿ ಸಲ್ಲಿಸುವುದರಿಂದ, ಜಾಮೀನು ಅರ್ಜಿ ವಿಚಾರಣೆಯನ್ನು ಇನ್ನಷ್ಟು ತಿಂಗಳು ಮುಂದೂಡುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಹೀಗಾಗಿ ಇದು ದರ್ಶನ್‌ಗೆ ಮತ್ತೊೊಂದು ಸಂಕಷ್ಟ ತಂದೊಡ್ಡಿಿದೆ ಎನ್ನಲಾಗಿದೆ.