ಭಾರತ ಕೃಷಿ ಉತ್ಪನ್ನಗಳ ಮೇಲೆ 100% ಶುಲ್ಕ ವಿಧಿಸಲು ಅಮೆರಿಕ ನಿರ್ಧಾರ; ನಾಳೆಯಿಂದ ಜಾರಿಗೆ?

ವೈಟ್ ಹೌಸ್‌ನ ಪತ್ರಿಕಾ ಕಾರ್ಯದರ್ಶಿ ಕ್ಯಾರೊಲೈನ್ ಲೆವಿಟ್. "ಅನೇಕ ದೇಶಗಳು ವರ್ಷಗಳಿಂದ ನಮ್ಮ ದೇಶವನ್ನು ಲೂಟಿ ಮಾಡುವ ರೀತಿಯಲ್ಲಿ ವ್ಯಾಪಾರ ಒಪ್ಪಂದದಲ್ಲಿ ತುಳಿಯುತ್ತಿವೆ. ಇದು ಅಮೆರಿಕದ ಕಾರ್ಮಿಕ ವ್ಯವಸ್ಥೆಗೆ ಮಾಡುವ ಅವಮಾನ,'' ಎಂದು ಹೇಳಿದ್ದಾರೆ.;

Update: 2025-04-01 06:08 GMT
ಭಾರತ ಕೃಷಿ ಉತ್ಪನ್ನಗಳ ಮೇಲೆ 100% ಶುಲ್ಕ ವಿಧಿಸಲು ಅಮೆರಿಕ ನಿರ್ಧಾರ; ನಾಳೆಯಿಂದ ಜಾರಿಗೆ?

ಭಾರತ ಅಮೆರಿಕದ ಕೃಷಿ ಉತ್ಪನ್ನಗಳ ಮೇಲೆ ಶೇಕಡಾ 100ರಷ್ಟು ತೆರಿಗೆ ವಿಧಿಸುತ್ತಿದ್ದು, ಈ ಶುಲ್ಕ ಅಮೆರಿಕದ ಆಮದು ವಹಿವಾಟಿಗೆ ತೀವ್ರ ಅಡ್ಡಿಯಾಗಿದೆ ಎಂದು ಎಂದು ವೈಟ್ ಹೌಸ್ ಸೋಮವಾರ ಹೇಳಿದೆ. ಹೀಗಾಗಿ ಭಾರತಕ್ಕೂ ಅದೇ ಮಾದರಿಯ ತೆರಿಗೆ ವಿಧಿಸಲು ಮುಂದಾಗಿದೆ. ಏಪ್ರಿಲ್​ 2ರಿಂದ 'ಪರಸ್ಪರ ತೆರಿಗೆ' ಕ್ರಮಗಳನ್ನು ಜಾರಿಗೆ ತರುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಹೇಳಿದ್ದು, ನಾಳೆಯಿಂದ ಭಾರತದಿಂದ ರಫ್ತು ಆಗುವ ಉತ್ಪನ್ನಗಳ ಮೇಲೆ ಉತ್ಪನ್ನದ ಬೆಲೆಯಷ್ಟೇ ತೆರಿಗೆಯೂ ಬೀಳಲಿದೆ. ಭಾರತದ ವ್ಯಾಪಾರ ವಹಿವಾಟಿನ ಮೇಲೆ ಪರಿಣಾಮ ಬೀರಲಿದೆ.  

ವೈಟ್ ಹೌಸ್‌ನ ಪತ್ರಿಕಾ ಕಾರ್ಯದರ್ಶಿ ಕ್ಯಾರೊಲೈನ್ ಲೆವಿಟ್  ಈ ಬಗ್ಗೆ ಮಾತನಾಡಿ, "ಅನೇಕ ದೇಶಗಳು ವರ್ಷಗಳಿಂದ ನಮ್ಮ ದೇಶವನ್ನು ಲೂಟಿ ಮಾಡುವ ರೀತಿಯಲ್ಲಿ ವ್ಯಾಪಾರ ಒಪ್ಪಂದದಲ್ಲಿ ತುಳಿಯುತ್ತಿವೆ. ಇದು ಅಮೆರಿಕದ ಕಾರ್ಮಿಕ ವ್ಯವಸ್ಥೆಗೆ ಮಾಡುವ ಅವಮಾನ,'' ಎಂದು ಹೇಳಿದ್ದಾರೆ.

"ಯುರೋಪಿಯನ್ ಯೂನಿಯನ್ ಅಮೆರಿಕದ ಹಾಲು ಉತ್ಪನ್ನಗಳ ಮೇಲೆ ಶೇಕಡಾ 50 ರಷ್ಟು ತೆರಿಗೆ ವಿಧಿಸುತ್ತಿದೆ, ಜಪಾನ್ ಶೇಕಡಾ 700ರಷ್ಟು ಶುಲ್ಕವನ್ನು ಅಮೆರಿಕದ ಅಕ್ಕಿಯ ಮೇಲೆ ವಿಧಿಸುತ್ತಿದೆ. ಭಾರತ ಶೇಕಡಾ 100ರಷ್ಟು ಕೃಷಿ ಉತ್ಪನ್ನಗಳ ಮೇಲೆ ಮತ್ತು ಕೆನಡಾ ಬೆಣ್ಣೆ ಹಾಗೂ ಚೀಸ್‌ಗಳ ಮೇಲೆ ಶೇಕಡಾ 300ರಷ್ಟು ತೆರಿಗೆ ವಿಧಿಸುತ್ತಿದೆ." ಎಂದು ಅವರು ಹೇಳಿದ್ದಾರೆ.

ಏಪ್ರಿಲ್ 2ರಿಂದ 'ಪರಸ್ಪರ' ತೆರಿಗೆಗಳು

ಅತಿಯಾದ ತೆರಿಗೆಗಳು ಅಮೆರಿಕದ ಕಾರ್ಖಾನೆಗಳು ಮುಚ್ಚಲು, ಕಾರ್ಮಿಕರ ಉದ್ಯೋಗ ನಷ್ಟಕ್ಕೆ ಕಳೆದುಕೊಳ್ಳಲು ಕಾರಣವಾಗಿದೆ. ಅದನ್ನು ತಿದ್ದುಪಡಿ ಮಾಡಬೇಕೆಂಬ ಉದ್ದೇಶದಿಂದ ಇದೇ ಏಪ್ರಿಲ್ 2ರಂದು "ಪರಸ್ಪರ ತೆರಿಗೆ'' ಜಾರಿಗೆ ಬರಲಿವೆ.

ಭಾರತ ಸೇರಿದಂತೆ ಹಲವಾರು ದೇಶಗಳ ಬಗ್ಗೆ ಕ್ರಮ?

ಲೇವಿಟ್ ಅವರು ಅಮೆರಿಕದ ನಿರ್ಧಾರದಿಂದ ಯಾವ ದೇಶಗಳ ಮೇಲೆ ಪರಿಣಾಮ ಬೀರಲಿದೆ ಎಂಬುದನ್ನು ಸ್ಪಷ್ಟಪಡಿಸಿಲ್ಲ. ಆದರೆ, ಪತ್ರಿಕಾಗೋಷ್ಠಿಯಲ್ಲಿಂದು ಅವರು ಪ್ರದರ್ಶಿಸಿದ ಪಟ್ಟಿಯಲ್ಲಿ ಭಾರತ, ಜಪಾನ್ ಮುಂತಾದ ದೇಶಗಳಿವೆ.

ಟ್ರಂಪ್ ಹೇಳಿಕೆಗೆ ನಿರೀಕ್ಷೆ

ಲೇವಿಟ್ ತಿಳಿಸಿದಂತೆ, ನಿರ್ಧಾರಗಳ ವಿವರಗಳನ್ನು ಸ್ವತಃ ಅಧ್ಯಕ್ಷ ಟ್ರಂಪ್ ಬುಧವಾರ ಪ್ರಕಟಿಸಲಿದ್ದಾರೆ. "ನಾವೇ ಮೊದಲು ಘೋಷಣೆ ಮಾಡುವುದಿಲ್ಲ,'' ಎಂದು ಅವರು ಹೇಳಿದ್ದಾರೆ. 

Tags:    

Similar News