Donald Trump: ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯಕ್ಕೆ ನಿರ್ಬಂಧ ಹೇರಿದ ಟ್ರಂಪ್
Donald Trump: ಟ್ರಂಪ್ ಜಾರಿಗೊಳಿಸಿದ ಈ ಆದೇಶದಲ್ಲಿ, ಅಮೆರಿಕಾದ ಮಿತ್ರ ಇಸ್ರೇಲ್ ವಿರುದ್ಧ ಅಕ್ರಮ ಮತ್ತು ಅಸಂಬದ್ಧ ಕ್ರಮಗಳನ್ನು ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ ಕೈಗೊಂಡಿದೆ.;
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಇಸ್ರೇಲ್ ಅಧ್ಯಕ್ಷರ ವಿರುದ್ಧ ಯುದ್ಧಾಪರಾಧಗಳ ಪ್ರಕರಣದ ತನಿಖೆ ನಡೆಸುತ್ತಿರುವ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದ ಮೇಲೆ ನಿರ್ಬಂಧ ಹೇರಿದ್ದಾರೆ. ಇಸ್ರೇಲ್ ಅಮೆರಿಕದ ಮಿತ್ರ ರಾಷ್ಟ್ರವಾಗಿರುವ ಕಾರಣ ಅದರ ವಿರುದ್ಧದ ತನಿಖೆ ತಡೆಯಲು ಟ್ರಂಪ್ ಉದ್ದೇಶಿಸಿದ್ದಾರೆ.
ಅಮೆರಿಕ ಮತ್ತು ಇಸ್ರೇಲ್ ಎರಡೂ ಈ ನ್ಯಾಯಾಲಯದ ಸದಸ್ಯ ರಾಷ್ಟ್ರಗಳಲ್ಲ. ಆದರೆ, ಈ ನ್ಯಾಯಾಲಯವು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿರುದ್ಧ ತನಿಖೆ ನಡೆಸುತ್ತಿದೆ. ಗಾಜಾ ಪಟ್ಟಿಯ ಮೇಲಿನ ದಾಳಿಗೆ ಸಂಬಂಧಿಸಿದಂತೆ ಯುದ್ಧ ಅಪರಾಧಗಳ ಆರೋಪದಲ್ಲಿ ಬಂಧನ ವಾರಂಟ್ ಕೂಡ ಹೊರಡಿಸಿದೆ.
ಟ್ರಂಪ್ ಜಾರಿಗೊಳಿಸಿದ ಈ ಆದೇಶದಲ್ಲಿ, ಅಮೆರಿಕಾದ ಮಿತ್ರ ಇಸ್ರೇಲ್ ವಿರುದ್ಧ ಅಕ್ರಮ ಮತ್ತು ಅಸಂಬದ್ಧ ಕ್ರಮಗಳನ್ನು ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ ಕೈಗೊಂಡಿದೆ. ಪ್ರಧಾನಿ ನೆತನ್ಯಾಹು ಮತ್ತು ಮಾಜಿ ರಕ್ಷಣಾ ಸಚಿವ ಯೋವ್ ಗಲ್ಲಂಟ್ ವಿರುದ್ಧ ಹೊರಡಿಸಿದ ಬಂಧನ ವಾರಂಟ್‌ಗಳು “ಅಧಿಕಾರದ ದುರುಪಯೋಗ” ಎಂದು ಹೇಳಲಾಗಿದೆ.
ನ್ಯಾಯಾಲಯಕ್ಕೆ ಅಮೆರಿಕ ಅಥವಾ ಇಸ್ರೇಲ್ ಮೇಲೆ ಯಾವುದೇ ಅಧಿಕಾರವಿಲ್ಲ. ಆದರೂ ಅದರ ಕ್ರಮವು ಅಪಾಯಕಾರಿ ಮಾದರಿ ಎಂದು ಆದೇಶದಲ್ಲಿ ಉಲ್ಲೇಖಿಲಾಗಿದೆ.
ಟ್ರಂಪ್ ಭೇಟಿ ಮಾಡಿದ್ದ ನೆತನ್ಯಾಹು
ಮಂಗಳವಾರ ನೆತನ್ಯಾಹು ಅವರು ವಾಷಿಂಗ್ಟನ್‌ಗೆ ಭೇಟಿ ನೀಡಿ ವೈಟ್ ಹೌಸ್‌ನಲ್ಲಿ ಟ್ರಂಪ್ ಜತೆ ಮಾತುಕತೆ ನಡೆಸಿದ್ದರು. ಗುರುವಾರ ಟ್ರಂಪ್ ಕೆಲ ಕಾನೂನು ಸಂಸದರೊಂದಿಗೆ ಸಭೆ ನಡೆಸಿದ್ದರು. .
ಈ ನಿರ್ಬಂಧಗಳ ಪ್ರಕಾರ ಅಮೆರಿಕವು ನ್ಯಾಯಾಲಯದ ವಿರುದ್ಧ ಗಂಭೀರ ಮತ್ತು ಸ್ಪಷ್ಟ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಲಿದೆ. ಈ ನ್ಯಾಯಾಲಯದ ಅಧಿಕಾರಿಗಳು, ಉದ್ಯೋಗಿಗಳು ಮತ್ತು ಅವರ ಸಂಬಂಧಿಕರು ಅಮೆರಿಕ ಪ್ರವೇಶಿಸಲು ಸಾಧ್ಯವಾಗುವುದಿಲ್ಲ.
ಈ ನಿರ್ಬಂಧ ನ್ಯಾಯಾಲಯದ ಕಾರ್ಯಕ್ಷಮತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಮಾನವ ಹಕ್ಕುಗಳ ಹೋರಾಟಗಾರರು ಎಚ್ಚರಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯವು ವಿಶ್ವದಾದ್ಯಂತ ಮಾನವ ಹಕ್ಕುಗಳ ಉಲ್ಲಂಘನೆ ತಡೆಯುತ್ತದೆ. ಆದರೆ ಟ್ರಂಪ್ ಅದಕ್ಕೆ ಪೆಟ್ಟು ಕೊಡಲಿದ್ದಾರೆ ಎಂದು ಹೇಳಿದೆ.,
2020ರಲ್ಲಿ, ಟ್ರಂಪ್ ಈ ನ್ಯಾಯಾಲಯದ ಮುಖ್ಯ ವಕೀಲರಾಗಿದ್ದ ಫಟೌ ಬೆನ್ಸೌಡ ಅವರ ಮೇಲೆ ನಿರ್ಬಂಧ ಹೇರಿದ್ದರು. ಅವರ ನಡೆ ಅಮೆರಿಕ, ಅಫ್ಘಾನಿಸ್ತಾನ ಸೇರಿದಂತೆ ಹಲವೆಡೆ ಯುದ್ಧ ಅಪರಾಧಗಳ ತನಿಖೆಗೆ ಕಾರಣವಾಗಿತ್ತು. ಜೋ ಬೈಡನ್ ಅಧ್ಯಕ್ಷರಾದ ಬಳಿಕ, ಈ ನಿರ್ಬಂಧಗಳನ್ನು ಕೈಬಿಟ್ಟಿದ್ದರು.