ತರಬೇತಿ ವೇಳೆ ಆಕಸ್ಮಿಕವಾಗಿ ಬಾಂಬ್​ ಹಾಕಿದ ದಕ್ಷಿಣ ಕೊರಿಯಾದ ಫೈಟರ್​ ಜೆಟ್​ಗಳು

ಘಟನೆಯಲ್ಲಿ 15 ಮಂದಿ ಗಾಯಗೊಂಡಿದ್ದು, ಅವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಗ್ಯೋಂಗಿ-ಡೊ ಬುಕ್ಬು ಅಗ್ನಿಶಾಮಕ ಸೇವೆಗಳು ಹೇಳಿಕೆಯಲ್ಲಿ ತಿಳಿಸಿವೆ.;

Update: 2025-03-06 10:26 GMT

ಜನವಸತಿ ಪ್ರದೇಶದ ಮೇಲೆ ತಪ್ಪಾಗಿ ಬಾಂಬ್ ಹಾಕಿದ ದಕ್ಷಿಣ ಕೊರಿಯಾದ ಫೈಟರ್ ಜೆಟ್​ಗಳು.

ದಕ್ಷಿಣ ಕೊರಿಯಾದಲ್ಲಿ ಗುರುವಾರ ಯುದ್ಧ ವಿಮಾನಗಳು ತರಬೇತಿ ಸಂದರ್ಭದಲ್ಲಿ ತಪ್ಪಾಗಿ ಬಾಂಬ್​​ಗಳನ್ನು ಹಾಕಿದ ಪರಿಣಾಮ 15 ಜನರು ಗಾಯಗೊಂಡಿದ್ದಾರೆ. ಗಡಿ ಪ್ರದೇಶದ ಪೊಚಿಯಾನ್​ನಲ್ಲಿ ಅಮೆರಿಕದ ಜತೆ ಜಂಟಿ ಮಿಲಿಟರಿ ಅಭ್ಯಾಸದ ಸಮಯದಲ್ಲಿ ಘಟನೆ ಸಂಭವಿಸಿದ್ದು, ಮನೆಗಳು ಮತ್ತು ಚರ್ಚ್​ಗಳಿಗೆ ಹಾನಿಗೊಂಡಿವೆ ಎಂದು ವಾಯುಪಡೆ ಮತ್ತು ಅಗ್ನಿಶಾಮಕ ಇಲಾಖೆ ತಿಳಿಸಿದೆ.

ಘಟನೆಯಲ್ಲಿ 15 ಮಂದಿ ಗಾಯಗೊಂಡಿದ್ದು, ಅವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಗ್ಯೋಂಗಿ-ಡೊ ಬುಕ್ಬು ಅಗ್ನಿಶಾಮಕ ಸೇವೆಗಳು ತನ್ನ ಹೇಳಿಕೆಗಳಲ್ಲಿ ತಿಳಿಸಿವೆ.

ಪೊಚಿಯಾನ್ ಸಿಯೋಲ್​​ನ ಈಶಾನ್ಯಕ್ಕೆ ಸುಮಾರು 40 ಕಿಲೋಮೀಟರ್ (25 ಮೈಲಿ) ದೂರದಲ್ಲಿದ್ದು, ಉತ್ತರ ಕೊರಿಯಾದೊಂದಿಗಿನ ಮಿಲಿಟರಿ ಗಡಿ ಹಂಚಿಕೊಂಡಿದೆ. ಆ ಪ್ರದೇಶದಲ್ಲಿ ಉತ್ತರ ಕೊರಿಯಾ ದೊಡ್ಡ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿಟ್ಟುಕೊಂಡಿವೆ.

ಕೆಎಫ್ -16 ಜೆಟ್​ ವಿಮಾನಗಳಿಂದ 500 ಪೌಂಡ್ (225 ಕೆ.ಜಿ) ಎಂಕೆ 82 ಬಾಂಬ್​​ಗಳನ್ನು ಉದುರಿಸಲಾಗಿದೆ ಎಂದು ದಕ್ಷಿಣ ಕೊರಿಯಾದ ವಾಯುಪಡೆ ಹೇಳಿದೆ.

"ಅಸಹಜ ಘಟನೆ ಬಗ್ಗೆ ನಾವು ವಿಷಾದಿಸುತ್ತೇವೆ. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲು ಎಲ್ಲ ನೆರವು ನೀಡುತ್ತೇವೆ" ಎಂದು ಕೊರಿಯಾ ವಾಯುಪಡೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ವಿಮಾನಗಳು ಉದುರಿಸಿರುವುದರಲ್ಲಿ ಸ್ಫೋಟಗೊಳ್ಳದ ಯಾವುದೇ ಬಾಂಬ್​​ಗಳಿವೆಯೇ ಎಂದು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

ಘಟನಾ ಸ್ಥಳದಿಂದ ರಾಯಿಟರ್ಸ್ ಚಿತ್ರಗಳನ್ನು ತೆಗೆದಿವೆ. ​​ ಛಿದ್ರಗೊಂಡ ಕಿಟಕಿಗಳು ಮತ್ತು ಚರ್ಚ್ ಕಟ್ಟಡಕ್ಕೆ ಬಾಂಬ್​ ಬಿದ್ದಿರುವುದನ್ನು ಚಿತ್ರ ತೋರಿಸಿದೆ 

Tags:    

Similar News