Terrorist Murder: ಭಾರತದ ತನಿಖಾ ಸಂಸ್ಥೆಗೆ ಬೇಕಾಗಿದ್ದ ಲಷ್ಕರ್ ಉಗ್ರ ಪಾಕಿಸ್ತಾನದಲ್ಲಿ ಅನಾಮಧೇಯ ವ್ಯಕ್ತಿಯ ಗುಂಡಿಗೆ ಬಲಿ
ಅಬು ಕತಾಲ್ ನಿಜವಾದ ಹೆಸರು ಜಿಯಾ ಉರ್ ರೆಹಮಾನ್ ಆಗಿದ್ದು, ಈತನು ತನ್ನ ಭದ್ರತಾ ಸಿಬ್ಬಂದಿಯೊಂದಿಗೆ ತೆರಳುವಾಗ ಅನಾಮಧೇಯ ವ್ಯಕ್ತಿಗಳು ಸತತವಾಗಿ ಗುಂಡಿನ ದಾಳಿ ನಡೆಸಿ ಕೊಂದು ಪರಾರಿಯಾಗಿದ್ದಾರೆ.;
ಭಾರತ ಸೇರಿದಂತೆ ಜಗತ್ತಿನ ಬೇರೆ ದೇಶಗಳಲ್ಲಿ ಕುಕೃತ್ಯಗಳನ್ನು ನಡೆಸಿ ಪಾಕಿಸ್ತಾನದಲ್ಲಿ ಅವಿತುಕೊಂಡಿರುವ ಉಗ್ರರನ್ನು ಅನಾಮಧೇಯ ವ್ಯಕ್ತಿಗಳು ಕೊಲೆ ಮಾಡುವ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿವೆ. ಅಂತೆಯೇ ಜಮ್ಮು-ಕಾಶ್ಮೀರದಲ್ಲಿ ಈ ನಡೆದಿರುವ ಹಲವು ದಾಳಿಗಳ ರೂವಾರಿ, ಲಷ್ಕರೆ ತಯ್ಬಾದ ಮೋಸ್ಟ್ ವಾಂಟೆಡ್ ಉಗ್ರ ಅಬು ಕತಾಲ್ ಹತ್ಯೆಗೀಡಾಗಿದ್ದಾನೆ. ಶನಿವಾರ ರಾತ್ರಿ ಜೇಲಂ ಪ್ರದೇಶದಲ್ಲಿ ಆತನನ್ನು ಕೊಲ್ಲಲಾಗಿದೆ ಎಂದು ವರದಿಗಳು ತಿಳಿಸಿವೆ.
ಅಬು ಕತಾಲ್ ನಿಜವಾದ ಹೆಸರು ಜಿಯಾ ಉರ್ ರೆಹಮಾನ್ ಆಗಿದ್ದು, ಈತನು ತನ್ನ ಭದ್ರತಾ ಸಿಬ್ಬಂದಿಯೊಂದಿಗೆ ತೆರಳುವಾಗ ಅನಾಮಧೇಯ ವ್ಯಕ್ತಿಗಳು ಸತತವಾಗಿ ಗುಂಡಿನ ದಾಳಿ ನಡೆಸಿ ಕೊಂದು ಪರಾರಿಯಾಗಿದ್ದಾರೆ. ಶನಿವಾರ ಸಂಜೆ 7 ಗಂಟೆ ಸುಮಾರಿಗೆ 15-20 ಸುತ್ತು ಗುಂಡು ಹಾರಿಸಲಾಗಿದೆ. ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅಬು ಕತಾಲ್ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ.
26/11 ಮುಂಬೈ ಉಗ್ರ ದಾಳಿಯ ಮಾಸ್ಟರ್‌ಮೈಂಡ್ ಹಫೀಜ್ ಸಯೀದ್‌ನ ಆಪ್ತ ಸಹಾಯಕರಾದ ಕತಾಲ್, ಜಮ್ಮು ಮತ್ತು ಕಾಶ್ಮೀರದಲ್ಲಿ ಹಲವಾರು ದಾಳಿಗಳನ್ನು ನಡೆಸಿದ್ದ . ಜೂನ್ 9 ರಂದು ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ಶಿವ್ ಖೋರಿ ದೇವಸ್ಥಾನದಿಂದ ಯಾತ್ರಿಗಳನ್ನು ಕೊಂಡೊಯ್ಯುತ್ತಿದ್ದ ಬಸ್‌ನ ಮೇಲೆ ನಡೆದ ದಾಳಿ ಕೂಡಾ ಸೇರಿದೆ. ಇದರಲ್ಲಿ 9 ಜನರು ಪ್ರಾಣ ಕಳೆದುಕೊಂಡಿದ್ದರು 41 ಜನರು ಗಾಯಗೊಂಡಿದ್ದರು.
ವರದಿಗಳ ಪ್ರಕಾರ, ಕತಾಲ್‌ನ್ನು ಲಷ್ಕರ್-ಎ-ತಯ್ಬಾದ ಮುಖ್ಯ ಕಾರ್ಯಾಚರಣೆ ಕಮಾಂಡರ್గా ಹಫೀಜ್ ಸಯೀದ್ ನೇಮಕ ಮಾಡಿದ್ದ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಮುಖ ದಾಳಿಗಳನ್ನು ನಡೆಸುವಂತೆ ಆದೇಶಿಸಿದ್ದರು.
ಕತಾಲ್ 2023 ರ ರಾಜೌರಿ ದಾಳಿಯಲ್ಲಿಯೂ ಆರೋಪಿಯಾಗಿದ್ದು, ಈ ದಾಳಿಯಲ್ಲಿ ಏಳು ಜನರು ಪ್ರಾಣ ಕಳೆದುಕೊಂಡಿದ್ದರು ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಹೆಸರಿಸಿದೆ.
ಅಬು ಕತಾಲ್ ಗೆ ಲಷ್ಕರೆ ತಯ್ಬಾ ಉಗ್ರರು ಮಾತ್ರವಲ್ಲ, ಪಾಕಿಸ್ತಾನ ಸೇನೆಯ ಭದ್ರತೆಯನ್ನೂ ಒದಗಿಸಲಾಗಿತ್ತು. ಇಷ್ಟೆಲ್ಲ ಭದ್ರತೆಯನ್ನು ಮೀರಿ ಅನಾಮಧೇಯ ವ್ಯಕ್ತಿಗಳು ಹತ್ಯೆ ಮಾಡಿದ್ದಾರೆ. ಕಾಶ್ಮಿರದಲ್ಲಿ ಹಿಂದು ಯಾತ್ರಿಕರು, ಪ್ರವಾಸಿಗರು ಹಾಗೂ ಭದ್ರತಾ ಸಿಬ್ಬಂದಿಯೇ ಈತನ ಗುರಿಯಾಗಿದ್ದರು. ಕಳೆದ ವರ್ಷದ ಜೂನ್ ನಲ್ಲಿ ರಿಯಾಸಿಯಲ್ಲಿ ಯಾತ್ರಿಕರ ಮೇಲೆ ನಡೆದ ಭೀಕರ ದಾಳಿಯ ಹಿಂದೆ ಈತನ ಕೈವಾಡವಿತ್ತು ಎನ್ನಲಾಗಿದೆ.