ಗಾಜಾ ಮೇಲೆ ಇಸ್ರೇಲ್ ವಾಯುದಾಳಿ: ಹಮಾಸ್ ರಾಜಕೀಯ ನಾಯಕನ ಹತ್ಯೆ
ಹಮಾಸ್ ಮಾಧ್ಯಮ ಸಲಹೆಗಾರ ತಾಹೆರ್ ಅಲ್ ನೋನೊ ಈ ವಿಷಯವನ್ನು ಬಹಿರಂಗಪಡಿಸಿದ್ದು, ಬರ್ದಾವೀಲ್ ಅವರ ಹತ್ಯೆಗೆ ಸಂತಾಪ ಸೂಚಿಸಿದ್ದಾರೆ.;
ಪ್ಯಾಲೆಸ್ತೀನ್‌ನ ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ನಡೆಸಿದ ತೀವ್ರ ವೈಮಾನಿಕ ದಾಳಿಯಲ್ಲಿ ಹಮಾಸ್ ಸಂಘಟನೆಯ ರಾಜಕೀಯ ವಿಭಾಗದ ಪ್ರಮುಖ ನಾಯಕ ಸಲಾಹ್ ಅಲ್ ಬರ್ದಾವೀಲ್ ಮತ್ತು ಆತನ ಪತ್ನಿ ಹತರಾಗಿದ್ದಾರೆ ಎಂದು ವರದಿಯಾಗಿದೆ. ಇವರ ನಿವಾಸದ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿದ್ದು, ಪ್ರಾರ್ಥನೆ (ನಮಾಜ್) ಮಾಡುವ ವೇಳೆ ಈ ದಾಳಿ ಸಂಭವಿಸಿದೆ ಎಂದು ಹೇಳಲಾಗಿದೆ.
ಗಾಜಾ ನಗರದಲ್ಲಿನ ಖಾನ್ ಯೂನಿಸ್ ಪ್ರದೇಶದಲ್ಲಿ ಈ ದಾಳಿ ನಡೆದಿದ್ದು, ಈ ಕುರಿತು ಇಸ್ರೇಲ್ ಕಡೆಯಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ. ಆದರೆ, ಹಮಾಸ್ ಮಾಧ್ಯಮ ಸಲಹೆಗಾರ ತಾಹೆರ್ ಅಲ್ ನೋನೊ ಈ ವಿಷಯವನ್ನು ಬಹಿರಂಗಪಡಿಸಿದ್ದು, ಬರ್ದಾವೀಲ್ ಅವರ ಹತ್ಯೆಗೆ ಸಂತಾಪ ಸೂಚಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಗಾಜಾದಲ್ಲಿ ಸ್ಥಾಪನೆ ಮಾಡಲಾಗಿದ್ದ ಶಾಂತಿ ಪರಿಸ್ಥಿತಿ ಹದಗೆಟ್ಟಿದ್ದು ಇಸ್ರೇಲ್ ಮತ್ತೆ ನಿರಂತರವಾಗಿ ಗಾಜಾ ಮೇಲೆ ದಾಳಿ ನಡೆಸುತ್ತಿದೆ. ಅಮೆರಿಕದ ಸಹಾಯದೊಂದಿಗೆ ಕೆಲ ದಿನಗಳ ಹಿಂದೆ ನಡೆದ ಶಾಂತಿ ಮಾತುಕತೆಗಳಲ್ಲಿ, ಹಮಾಸ್ ತನ್ನ ಹತ್ಯೆಗೀಡಾದ ನಾಯಕರನ್ನು ಹಸ್ತಾಂತರ ಮಾಡುವ ಭರವಸೆ ನೀಡಿತ್ತು ಮತ್ತು ಒತ್ತೆಯಾಳುಗಳನ್ನು ಬಿಡುಗಡೆ ಮಾಡುವ ಒಪ್ಪಂದ ಮಾಡಿಕೊಂಡಿತ್ತು.
ಉಗ್ರರು ಮಾತಿಗೆ ಬದ್ಧವಾಗಿಲ್ಲವೆಂದು ಆರೋಪಿಸಿದ ಇಸ್ರೇಲ್ ದಾಳಿಗಳನ್ನು ಪುನರಾರಂಭಿಸಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, “ಹಮಾಸ್ ಅನ್ನು ಸಂಪೂರ್ಣವಾಗಿ ನಾಶಮಾಡುವುದೇ ನಮ್ಮ ಗುರಿ. ಕದನವಿರಾಮಕ್ಕೆ ನಾವಿಲ್ಲ,” ಎಂದು ಘೋಷಿಸಿದ್ದಾರೆ.