17 ಸಾವಿರ ಉದ್ಯೋಗಿಗಳನ್ನು ವಜಾ ಮಾಡಲು ನಿರ್ಧರಿಸಿದ ವಿಮಾನ ತಯಾರಿಕಾ ಸಂಸ್ಥೆ ಬೋಯಿಂಗ್
ಹಣಕಾಸಿನ ಬಿಕ್ಕಟ್ಟನ್ನು ಪರಿಹರಿಸಲು ಬೋಯಿಂಗ್ ತನ್ನ ಉದ್ಯೋಗಿಗಳ ಸಂಖ್ಯೆಯನ್ನು ಕೊನೆಗೊಳಿಸಲು ಮುಂದಾಗಿದ್ದು, ಶೇಕಡಾ 10 ಉದ್ಯೋಗಿಗಳಿಗೆ ನೋಟಿಸ್ ನೀಡಿದ್ದು, ಕೆಲಸದಿಂದ ತೆಗೆಯುವುದಾಗಿ ಹೇಳಿದೆ.;
ವಿಮಾನ ನಿರ್ಮಾಣದಲ್ಲಿ ಅತಿ ದೊಡ್ಡ ಸಂಸ್ಥೆಯಾಗಿರುವ ಬೋಯಿಂಗ್ ಸತತವಾಗಿ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ. ಅದಕ್ಕೆ ಪರಿಹಾರ ಎಂಬಂತೆ ತನ್ನ 17,000 ಉದ್ಯೋಗಿಗಳನ್ನು ಅಥವಾ ಅದರ ಜಾಗತಿಕ ಉದ್ಯೋಗಿಗಳ ಒಟ್ಟು ಸಂಖ್ಯೆಯಲ್ಲಿ ಶೇಕಡಾ 10 ರಷ್ಟು ಕಡಿತಗೊಳಿಸಲು ಮುಂದಾಗಿದೆ ಎಂಬುದಾಗಿ ವರದಿಯಾಗಿದೆ.
"ಈ ಹಿಂದೆ ಘೋಷಿಸಿದಂತೆ ನಮ್ಮ ಹಣಕಾಸಿನ ಪರಿಸ್ಥಿತಿ ಮತ್ತು ಕೇಂದ್ರೀಕೃತ ಆದ್ಯತೆಗಳೊಂದಿಗೆ ನಾವು ನಮ್ಮ ಒಟ್ಟು ಉದ್ಯೋಗಿಗಳ ಸಂಖ್ಯೆಯನ್ನು ಸರಿಹೊಂದಿಸುತ್ತಿದ್ದೇವೆ" ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.
"ಈ ಸವಾಲಿನ ಸಮಯದಲ್ಲಿ ನಮ್ಮ ಉದ್ಯೋಗಿಗಳಿಗೆ ಸಂಪೂರ್ಣ ಬೆಂಬಲ ನೀಡುತ್ತೇವೆ. ಅವರ ಯೋಗಕ್ಷೇಮವನ್ನು ನೋಡಿಕೊಳ್ಳುವುದಕ್ಕೆ ಬದ್ಧರಾಗಿದ್ದೇವೆ" ಎಂದು ಅದು ಹೇಳಿದೆ.
ಬೋಯಿಂಗ್ ಸಮಸ್ಯೆಯೇನು?
ಅಮೆರಿಕದಲ್ಲಿ 33,000ಕ್ಕೂ ಹೆಚ್ಚು ವೆಸ್ಟ್ ಕೋಸ್ಟ್ ಕಾರ್ಮಿಕರು ಮುಷ್ಕರ ಮಾಡಿದ್ದರು. ಹೀಗಾಗಿ ಬೋಯಿಂಗ್ ತನ್ನ ವಾಣಿಜ್ಯ ಜೆಟ್‌ಗಳ ಉತ್ಪಾದನೆ ನಿಧಾನಗೊಳಿಸಿತ್ತು. ತನ್ನ ಅತಿ ಹೆಚ್ಚು ಮಾರಾಟವಾದ 737 MAX ಉತ್ಪಾದನೆಯನ್ನು ಪುನರಾರಂಭಿಸಲು ಪ್ರಯತ್ನಿಸುತ್ತಿದೆ. ಇದೇ ವೇಳೆ ವಜಾ ಪ್ರಕ್ರಿಯೆಯೂ ನಡೆಯಲಿದೆ.
737 MAX ಈ ವರ್ಷದ ಅಕ್ಟೋಬರ್‌ನಲ್ಲಿ 24 ಶತಕೋಟಿ ಡಾಲರ್‌ಗೂ ಹೆಚ್ಚು ಹೂಡಿಕೆಯನ್ನು ಸಂಗ್ರಹಿಸಿದೆ. ಜನವರಿಯಲ್ಲಿ ಬೋಯಿಂಗ್ 737 MAX ಜೆಟ್ ವಿಮಾನ ಹಾರಾಟದ ಬಾಗಿಲಿನ ಫಲಕವು ಸ್ಫೋಟಗೊಂಡಿತ್ತು. ಬಳಿಕ ಸಿಇಒ ಹುದ್ದೆಯಿಂದ ನಿವೃತ್ತಿ ಪಡೆದುಕೊಂಡಿದ್ದರು. ನಿಯಂತ್ರಕರು ಕಂಪನಿಯ ಸುರಕ್ಷತೆ ಸಂಸ್ಕೃತಿಯನ್ನು ತನಿಖೆ ಮಾಡಿದ್ದರು. ಸೆ.13ರಿಂದ ಮುಷ್ಕರ ಆರಂಭಗೊಂಡಿತ್ತು.