ಎಚ್ -1 ಬಿ ವೀಸಾ ನಿಯಮ ಸಡಿಲಿಸಿದ ಬೈಡನ್ ಸರ್ಕಾರ, ಭಾರತೀಯರಿಗೆ ಅನುಕೂಲ
ತಾಂತ್ರಿಕ ಪರಿಣತಿ ಅಗತ್ಯವಿರುವ ವಿಶೇಷ ಉದ್ಯೋಗಗಳಲ್ಲಿ ವಿದೇಶಿ ಕಾರ್ಮಿಕರನ್ನು ನೇಮಿಸಿಕೊಳ್ಳಲು ಯುಎಸ್ ಕಂಪನಿಗಳಿಗೆ ಅವಕಾಶ ನೀಡುವ ವಲಸೆಯೇತರ ವೀಸಾ ಎಚ್ -1 ಬಿ ವೀಸಾ ಹೆಚ್ಚು ಬೇಡಿಕೆಯಿದೆ.;
ನಿರ್ಗಮನ ಮಾಡಲಿರುವ ಅಮೆರಿಕದ ಅಧ್ಯಕ್ಷ ಜೊ ಬೈಡೆನ್ ಎಚ್-1ಬಿ ವೀಸಾ ನಿಯಮಗಳಲ್ಲಿ ಕೆಲವೊಂದು ಸಡಿಲಿಕೆ ಮಾಡಿದ್ದಾರೆ. ಇದು ಭಾರತೀಯರಿಗೆ ಅತಿ ಹೆಚ್ಚು ಲಾಭ ನೀಡಲಿದೆ. ವಿದ್ಯಾರ್ಥಿಗಳಿಗೆ ನೀಡಲಾಗುವ ಎಫ್-1 ವೀಸಾವನ್ನು ಸುಲಭವಾಗಿ ಎಚ್-1ಬಿ ವೀಸಾವನ್ನಾಗಿ ಪರಿವರ್ತಿಸಲು ಈ ನಿಯಮ ಸಡಿಲಿಕೆ ನೆರವು ನೀಡಲಿದೆ. ಈ ಮೂಲಕ ವಿಶೇಷ ಕೌಶಲ ಹೊಂದಿರುವ ನೌಕರರನ್ನು ನೇಮಿಸಿಕೊಳ್ಳುವುದು ಅಮೆರಿಕದ ಅಧ್ಯಕ್ಷರ ಯೋಜನೆಯಾಗಿದೆ.
ತಾಂತ್ರಿಕ ಪರಿಣತಿ ಅಗತ್ಯವಿರುವ ವಿಶೇಷ ಉದ್ಯೋಗಗಳಲ್ಲಿ ವಿದೇಶಿ ಕಾರ್ಮಿಕರನ್ನು ನೇಮಿಸಿಕೊಳ್ಳಲು ಯುಎಸ್ ಕಂಪನಿಗಳಿಗೆ ಅವಕಾಶ ನೀಡುವ ವಲಸೆಯೇತರ ವೀಸಾ ಎಚ್ -1 ಬಿ ವೀಸಾ ಹೆಚ್ಚು ಬೇಡಿಕೆಯಿದೆ. ಭಾರತ ಮತ್ತು ಚೀನಾದಂತಹ ದೇಶಗಳಿಂದ ಪ್ರತಿವರ್ಷ ಹತ್ತಾರು ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ತಂತ್ರಜ್ಞಾನ ಕಂಪನಿಗಳು ಈ ವೀಸಾಗಳನ್ನು ಅವಲಂಭಿಸುವಂತಾಗಿದೆ.
ಹೋಮ್ಲ್ಯಾಂಡ್ ಸೆಕ್ಯುರಿಟಿ ಇಲಾಖೆ (ಡಿಎಚ್ಎಸ್) ಮಂಗಳವಾರ ಪ್ರಕಟಿಸಿದ ಈ ನಿಯಮವು ಎಚ್ -1 ಬಿ ವೀಸಾಗಳ ವಾರ್ಷಿಕ ಶಾಸನಬದ್ಧ ಮಿತಿಯಿಂದ ವಿನಾಯಿತಿ ನೀಡುತ್ತದೆ. ಇದರಿಂದ ಲಾಭರಹಿತ ಮತ್ತು ಸರ್ಕಾರಿ ಸಂಶೋಧನಾ ಸಂಸ್ಥೆಗಳಿಗೆ ಅನುಕೂಲ ಮಾಡಿಕೊಡುವ ಗುರಿಯನ್ನು ಅಮೆರಿಕ ಹೊಂದಿದೆ.
ಜನವರಿ 20ರಂದು ಟ್ರಂಪ್ ಅಧಿಕಾರ ಸ್ವೀಕಾರ
ಡಿಎಚ್ಎಸ್ ಪ್ರಕಾರ, ಎಫ್ -1 ವೀಸಾಗಳನ್ನು ಹೊಂದಿರುವ ವಿದ್ಯಾರ್ಥಿಗಳಿಗೆ ಉದ್ಯೋಗ ಪಡೆಯುವಲ್ಲಿ ಇರುವ ಅಡಚಣೆಗಳನ್ನು ತಪ್ಪಿಸಲಿದೆ. ಹಾಲಿ ವೀಸಾದಿಂದ ತಮ್ಮ ಸ್ಥಾನಮಾನವನ್ನು ಎಚ್ -1 ಬಿ ಗೆ ಬದಲಾಯಿಸಲು ಬಯಸುವವರಿಗೆ ನೆರವಾಗಲಿದೆ.
ಈ ಹಿಂದೆ ಎಚ್ 1-ಬಿ ವೀಸಾಗೆ ಅರ್ಜಿ ಸಲ್ಲಿಸಿದ್ದವರಿಗೆ ತ್ವರಿತವಾಗಿ ಪ್ರಕ್ರಿಯೆ ಮುಗಿಸಲು ಯುಎಸ್ ಪೌರತ್ವ ಮತ್ತು ವಲಸೆ ಸೇವೆಗಳಿಗೆ (ಯುಎಸ್ ಸಿಐಎಸ್) ಇದು ಅನುವು ಮಾಡಿಕೊಡುತ್ತದೆ.
ಅಮೆರಿಕದ ಉದ್ಯಮಗಳು ಹೆಚ್ಚು ನುರಿತ ಪ್ರತಿಭೆಗಳ ನೇಮಕಾತಿಗಾಗಿ ಎಚ್ -1 ಬಿ ವೀಸಾ ಯೋಜನೆಯನ್ನು ಅವಲಂಬಿಸಿವೆ ಎಂದು ಹೋಮ್ಲ್ಯಾಂಡ್ ಸೆಕ್ಯುರಿಟಿ ಕಾರ್ಯದರ್ಶಿ ಅಲೆಜಾಂಡ್ರೊ ಎನ್ ಮಯೋರ್ಕಾಸ್ ಹೇಳಿದರು.