ಬಾಂಗ್ಲಾದೇಶ: ಹೊಸ ಮಧ್ಯಂತರ ಸರ್ಕಾರಕ್ಕೆ ಜನರಿಂದ ಸ್ವಾಗತ

ಬಾಂಗ್ಲಾ ದೇಶದ ಜನಸಾಮಾನ್ಯರು ನೊಬೆಲ್ ಪ್ರಶಸ್ತಿ ವಿಜೇತ ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರದಿಂದ ಸ್ಥಿರತೆ, ನ್ಯಾಯ ಮತ್ತು ನ್ಯಾಯಬದ್ಧ ಚುನಾವಣೆಯನ್ನು ಎದುರು ನೋಡುತ್ತಿದ್ದಾರೆ.

Update: 2024-08-09 10:22 GMT

ನೊಬೆಲ್ ಪ್ರಶಸ್ತಿ ವಿಜೇತ ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರವನ್ನು ಬಾಂಗ್ಲಾದೇಶದ ಜನರು ಸ್ವಾಗತಿಸಿದ್ದಾರೆ. ಕಾನೂ ನು ಸುವ್ಯವಸ್ಥೆ ಪುನಃಸ್ಥಾಪನೆ, ದಮನದ ಅಂತ್ಯ ಮತ್ತು ನ್ಯಾಯಯುತ ಚುನಾವಣೆಯನ್ನು ಖಚಿತಪಡಿಸುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಯೂನಸ್(84) ಅವರು ಗುರುವಾರ ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ಪ್ರಮಾಣವಚನ ಸ್ವೀಕರಿಸಿದರು. ಉದ್ಯೋಗಗಳಲ್ಲಿ ಮೀಸಲು ವಿರುದ್ಧ ವಿದ್ಯಾರ್ಥಿಗಳಿಂದ ಹಿಂಸಾತ್ಮಕ ಪ್ರತಿಭಟನೆ ನಂತರ ಶೇಖ್ ಹಸೀನಾ ಅವರು ಹಠಾತ್ತನೆ ರಾಜೀನಾಮೆ ನೀಡಿ, ಭಾರತಕ್ಕೆ ಪಲಾಯನ ಮಾಡಿದರು. 

ಪ್ರಮಾಣವಚನ ಸ್ವೀಕಾರ: ಯೂನಸ್ ಅವರು ಪ್ರಧಾನಿ ಹುದ್ದೆಗೆ ಸಮಾನವಾದ ಮುಖ್ಯ ಸಲಹೆಗಾರರಾಗಿ ಪ್ರಮಾಣವಚನ ಸ್ವೀಕರಿಸಿದರು. ಮಹಿಳಾ ಹಕ್ಕುಗಳ ಕಾರ್ಯಕರ್ತೆ ಫರೀದಾ ಅಖ್ತರ್, ಬಲಪಂಥೀಯ ಪಕ್ಷ ಹೆಫಾಜತ್ ಎ ಇಸ್ಲಾಂನ ಉಪ ಮುಖ್ಯಸ್ಥ ಎಎಫ್‌ಎಂ ಖಾಲಿದ್ ಹುಸೇನ್, ಗ್ರಾಮೀಣ ಟೆಲಿಕಾಂ ಟ್ರಸ್ಟಿ ನೂರ್‌ಜಹಾನ್ ಬೇಗಂ, ಸ್ವಾತಂತ್ರ್ಯ ಹೋರಾಟಗಾರ್ತಿ ಶರ್ಮೀನ್ ಮುರ್ಷಿದ್, ಚಿತ್ತಗಾಂಗ್ ಗುಡ್ಡಗಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸುಪ್ರದೀಪ್ ಚಕ್ಮಾ, ಪ್ರೊ.ಬಿಧನ್ ರಂಜನ್ ರಾಯ್ ಮತ್ತು ಮಾಜಿ ವಿದೇಶ ಕಾರ್ಯದರ್ಶಿ ತೌಹಿದ್ ಹುಸೇನ್ ಅವರುಗಳು ಸಲಹಾ ಮಂಡಳಿಯ ಸದಸ್ಯರಾಗಿದ್ದಾರೆ.

ಸುವ್ಯವಸ್ಥೆ ಮರುಸ್ಥಾಪನೆ: ದೇಶದಲ್ಲಿ ಸುವ್ಯವಸ್ಥೆಯನ್ನು ಪುನಃಸ್ಥಾಪಿಸುವುದು ಮಧ್ಯಂತರ ಸರ್ಕಾರದ ಕರ್ತವ್ಯಗಳಲ್ಲಿ ಒಂದು ಎಂದು ಢಾಕಾ ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕ ಸೆರಾಜುಲ್ ಇಸ್ಲಾಂ ಚೌಧರಿ ಹೇಳಿದ್ದಾರೆ.

ʻಇನ್ನೊಂದು ಕೆಲಸ- ನಾಗರಿಕರ ಸುರಕ್ಷತೆಯನ್ನು ಖಾತ್ರಿಪಡಿಸುವುದು. ದಬ್ಬಾಳಿಕೆ ಮತ್ತು ಭಯದ ಸಂಸ್ಕೃತಿಯನ್ನು ಸರ್ಕಾರ ತೊಡೆದುಹಾಕ ಬೇಕಿದೆ. ಪ್ರಜಾಪ್ರಭುತ್ವದ ಸ್ಥಾಪನೆಗೆ ನ್ಯಾಯಸಮ್ಮತ ಚುನಾವಣೆ ನಡೆಸುವುದು ಸರ್ಕಾರದ ಮುಖ್ಯ ಜವಾಬ್ದಾರಿ,ʼ ಎಂದು ʼ ಎಂದು ಡೈಲಿ ಸ್ಟಾರ್ ಪತ್ರಿಕೆಗೆ ಚೌಧರಿ ಹೇಳಿದ್ದಾರೆ.

ಸ್ವಾಗತಾರ್ಹ ಬದಲಾವಣೆ: ಖ್ಯಾತ ನ್ಯಾಯಶಾಸ್ತ್ರಜ್ಞ ಕಮಲ್ ಹೊಸೇನ್ ಮಾತನಾಡಿ, ʻಬದಲಾವಣೆಯನ್ನು ಎಲ್ಲರೂ ಸ್ವಾಗತಿಸಿದ್ದಾರೆ. ಪ್ರ ಮಾಣವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಅಪಾರ ಜನಸ್ತೋಮ ಕಂಡುಬಂದಿದೆ. ಬದಲಾವಣೆ ಬಂದಿದೆ ಎಂದು ಎಲ್ಲರೂ ಭಾವಿಸಿದ್ದಾರೆ. ಸಲಹಾ ಮಂಡಳಿಯ ಸದಸ್ಯರು ಹೊಸ ಬಿಕ್ಕಟ್ಟುಗಳನ್ನು ಪರಿಹರಿಸಲಿದ್ದಾರೆ ಎಂದುಭಾವಿಸುತ್ತೇವೆ. ಜನ ಅರ್ಥಪೂರ್ಣ ಬದಲಾವಣೆಯನ್ನು ನಿರೀಕ್ಷಿಸುತ್ತಾರೆ,ʼ ಎಂದು ಅವರು ಹೇಳಿದರು.

ಬ್ಯಾರಿಸ್ಟರ್ ಸಾರಾ ಹೊಸೈನ್ ಹೇಳಿದರು: ʻಈ ಸರ್ಕಾರ ದೇಶದ ಸಂಸ್ಥೆಗಳಲ್ಲಿ ಗಣನೀಯ ಸುಧಾರಣೆಗಳನ್ನು ತರುತ್ತದೆ ಮತ್ತು ಕಳೆದ ಕೆಲವು ವಾರಗಳಲ್ಲಿ ಏನಾಯಿತು ಎಂಬ ಕುರಿತು ಸತ್ಯವನ್ನು ಹೇಳುತ್ತದೆ ಎನ್ನುವುದು ನನ್ನ ಮುಖ್ಯ ನಿರೀಕ್ಷೆ. ವಿದ್ಯಾರ್ಥಿ ಆಂದೋಲನವು ಸುಧಾರಣೆ ಪರವಾಗಿತ್ತು ಮತ್ತು ದಮನದ ವಿರುದ್ಧವಿತ್ತು. ಬಾಂಗ್ಲಾ ಜಾತ್ಯತೀತ ಸಂವಿಧಾನ, ಇತಿಹಾಸ ಮತ್ತು ಸಂಪ್ರದಾಯವನ್ನು ಹೊಂದಿದೆ; ಅದು ಯಾವುದೇ ನಂಬಿಕೆಯನ್ನು ನಿರಾಕರಿಸಿಲ್ಲ.ಆದರೆ, ಬಹುತ್ವವನ್ನು ಪ್ರೋತ್ಸಾಹಿಸಿದೆ. ಇಂದಿನ ಪ್ರಮಾಣವಚನ ಅದನ್ನು ಪ್ರತಿಬಿಂಬಿಸು ವುದಿಲ್ಲ,ʼ ಎಂದು ಹೇಳಿದರು.

ಢಾಕಾ ವಿಶ್ವವಿದ್ಯಾನಿಲಯದ ಸಹ ಪ್ರಾಧ್ಯಾಪಕ ಸಮೀನಾ ಲುತ್ಫಾ ಮಾತನಾಡಿ, ʼಮಧ್ಯಂತರ ಸರ್ಕಾರದಲ್ಲಿರುವ ಹೆಚ್ಚಿನವರು ಸರ್ಕಾರೇತರ ಸಂಸ್ಥೆಗಳಿಂದ ಬಂದವರು. ಅವರು ರಾಷ್ಟ್ರವನ್ನು ಸುಧಾರಿಸಲು ಬೇಕಾದ ಅವರು ಕೌಶಲಗಳನ್ನು ಹೊಂದಿದ್ದಾರೆಯೇ ಎಂಬುದು ಪ್ರಶ್ನೆ. ಸರ್ಕಾರದಲ್ಲಿ ವಿದ್ಯಾರ್ಥಿಗಳ ಸೇರ್ಪಡೆ ಭರವಸೆ ತರುತ್ತದೆ. ಧಾರ್ಮಿಕ ಅಲ್ಪಸಂಖ್ಯಾತ ಮಹಿಳೆಯರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬಹು ದಿತ್ತು. ಜಮಾತ್ ಎ ಇಸ್ಲಾಮಿ ಸಂಘಟನೆಯನ್ನು ನಿಷೇಧಿಸಿರುವುದರಿಂದ, ಹೆಫಾಜತ್ ಅಮೀರ್ ಅನ್ನು ಸೇರಿಸಿಕೊಳ್ಳಬಹುದು,ʼ ಎಂದು ಹೇಳಿದರು.

Tags:    

Similar News