ಕ್ರಿಸ್ಮಸ್‌ ಹಬ್ಬದ ಸಂಭ್ರಮ ಮತ್ತಷ್ಟು ಹೆಚ್ಚಿಸಿದ 45 ಮತ್ತು ಮಾರ್ಕ್!
x

ಕ್ರಿಸ್ಮಸ್‌ ಹಬ್ಬದ ಸಂಭ್ರಮ ಮತ್ತಷ್ಟು ಹೆಚ್ಚಿಸಿದ '45' ಮತ್ತು 'ಮಾರ್ಕ್'!

ಇಂದು ಅದ್ಧೂರಿಯಾಗಿ ಬಿಡುಗಡೆಯಾಗಿರುವ '45' ಮತ್ತು 'ಮಾರ್ಕ್' ಸಿನಿಮಾಗಳು ರಾಜ್ಯದಲ್ಲಿ ಕಿಸ್ಮಸ್‌ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದೆ.


ಸ್ಯಾಂಡಲ್‌ವುಡ್‌ನಲ್ಲಿ ಇಂದು (ಡಿಸೆಂಬರ್ 25, 2025) ಕ್ರಿಸ್‌ಮಸ್ ಹಬ್ಬದ ಸಡಗರದ ನಡುವೆ ಎರಡು ಬಹುನಿರೀಕ್ಷಿತ ಸಿನಿಮಾಗಳು ಅಬ್ಬರದಿಂದ ತೆರೆಗೆ ಬಂದಿವೆ. ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ, ರಾಜ್‌ ಬಿ ಶೆಟ್ಟಿ ಕಾಂಬಿನೇಶನ್‌ಲ್ಲಿ ಮೂಡಿ ಬಂದಿರುವ '45' ಮತ್ತು ಅವರ ಸುದೀಪ್‌ ನಟನೆಯ 'ಮಾರ್ಕ್' ಸಿನಿಮಾಗಳ ಅಬ್ಬರ ಜೋರಾಗಿದೆ.

'45' ಸಿನಿಮಾ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮೊದಲ ಬಾರಿಗೆ ನಿರ್ದೇಶಿಸಿರುವ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಶಿವರಾಜ್‌ಕುಮಾರ್, ಉಪೇಂದ್ರ ಮತ್ತು ರಾಜ್ ಬಿ. ಶೆಟ್ಟಿ ಅಂತಹ ದಿಗ್ಗಜರು ಒಂದೇ ಫ್ರೇಮ್‌ನಲ್ಲಿ ಕಾಣಿಸಿಕೊಂಡಿರುವುದು ಈ ಸಿನಿಮಾದ ದೊಡ್ಡ ಪ್ಲಸ್ ಪಾಯಿಂಟ್. ತಾಂತ್ರಿಕವಾಗಿ ಸಿನಿಮಾ ಶ್ರೀಮಂತವಾಗಿದ್ದು, ಫಿಲಾಸಫಿಕಲ್ ಆಕ್ಷನ್ ಥ್ರಿಲ್ಲರ್ ಕಥಾಹಂದರ ಪ್ರೇಕ್ಷಕರನ್ನು ಸೆಳೆಯುತ್ತಿದೆ.

'ಮಾರ್ಕ್' (MARK) ಸಿನಿಮಾ

ನಟ ಸುದೀಪ್‌ ಅವರ ವಿಭಿನ್ನ ಮ್ಯಾನರಿಸಂ ಮತ್ತು ಕಥಾ ಆಯ್ಕೆಯಿಂದಲೇ 'ಮಾರ್ಕ್' ಸಿನಿಮಾ ಸದ್ದು ಮಾಡುತ್ತಿದೆ. ಸಸ್ಪೆನ್ಸ್ ಎಲಿಮೆಂಟ್‌ಗಳು ಚಿತ್ರದಲ್ಲಿವೆ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ಈ ಎರಡು ಚಿತ್ರಗಳು ಕಿಸ್ಮಸ್‌ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿವೆ.


ಮಾರ್ಕ್‌ ವೀಕ್ಷಿಸಿದ ಸುದೀಪ್‌ ಪತ್ನಿ-ಪುತ್ರಿ

ಸುದೀಪ್ ಅಭಿನಯದ ಮಾರ್ಕ್ ಚಿತ್ರ ರಾಜ್ಯದೆಲ್ಲೆಡೆ ರಿಲೀಸ್ ಆಗಿದೆ. ಬೆಳಗ್ಗೆ 6 ಗಂಟೇನೆ ಶೋ ಶುರು ಆಗಿದೆ. ಪ್ರಿಯಾ ಸುದೀಪ್ ಹಾಗೂ ಸಾನ್ವಿ ಸುದೀಪ್ ಈ ಚಿತ್ರವನ್ನ ಅಭಿಮಾನಿಗಳ ಜೊತೆಗೆ ಕುಳಿತು ನೋಡುತ್ತಿದ್ದಾರೆ.

ಕಿಚ್ಚ ಸುದೀಪ್ ಅಭಿನಯದ ಮಾರ್ಕ್ ಸಿನಿಮಾದ ಶೋ ಬೆಳಗ್ಗೆ 6 ಗಂಟೇಗೇನೆ ಶುರು ಆಗಿದೆ. ಬೆಂಗಳೂರಿನ ಮೇನ್ ಥಿಯೇಟರ್ ಅಲ್ಲಿ ಮಾರ್ಕ್ ಸಿನಿಮಾದ ಸೆಲೆಬ್ರೇಷನ್ ಕೂಡ ಜೋರಾಗಿದೆ. ಅಭಿಮಾನಿಗಳು ಚಿತ್ರವನ್ನ ಅಷ್ಟೆ ಅಬ್ಬರದಿಂದಲೇ ಸ್ವಾಗತಿಸಿದ್ದಾರೆ. ಅಭಿಮಾನಿಗಳ ಈ ಸಡಗರದಲ್ಲಿ ಸುದೀಪ್ ಏನೂ ಇರೋದಿಲ್ಲ. ಆದರೆ, ಸುದೀಪ್ ಪತ್ನಿ ಪ್ರಿಯಾ ಸುದೀಪ್ ಆಗಮಿಸಿದ್ದಾರೆ. ಸುದೀಪ್ ಪುತ್ರಿ ಸಾನ್ವಿ ಸುದೀಪ್ ಚಿತ್ರವನ್ನ ಫ್ಯಾನ್ಸ್ ಜೊತೆಗೆ ನೋಡುತ್ತಿದ್ದಾರೆ. ಮಾರ್ಕ್ ಚಿತ್ರವನ್ನ ವಿಜಯ್ ಕಾರ್ತಿಕೇಯ ನಿರ್ದೇಶನ ಮಾಡಿದ್ದು, ಅಜನೀಶ್ ಲೋಕನಾಥ್ ಸಂಗೀತ ಕೊಟ್ಟಿದ್ದಾರೆ.

Read More
Next Story