40 ತಂಡಗಳಿಂದ ಶೋಧ ಕಾರ್ಯಾಚರಣೆಭೂಕುಸಿತ ಪೀಡಿತ ವಯನಾಡ್... ... Wayanad Landslide | ಸಾವಿನ ಸಂಖ್ಯೆ 320ಗೆ ಏರಿಕೆ: ಕಾಂಗ್ರೆಸ್ 100 ಮನೆಗಳನ್ನು ನಿರ್ಮಿಸುತ್ತದೆ- ರಾಹುಲ್ ಗಾಂಧಿ

40 ತಂಡಗಳಿಂದ ಶೋಧ ಕಾರ್ಯಾಚರಣೆ

ಭೂಕುಸಿತ ಪೀಡಿತ ವಯನಾಡ್ ಜಿಲ್ಲೆಯಲ್ಲಿ ಮಳೆ ಮತ್ತು ಪ್ರತಿಕೂಲ ವಾತಾವರಣದಲ್ಲೂ ನಾಲ್ಕನೇ ದಿನವಾದ ಶುಕ್ರವಾರ 40 ರಕ್ಷಣಾ ತಂಡಗಳು ಶೋಧ ಕಾರ್ಯಾಚರಣೆಯನ್ನು ಆರಂಭಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

190 ಅಡಿ ಉದ್ದದ ಬೈಲಿ ಸೇತುವ ಪೂರ್ಣಗೊಂಡ ಕಾರಣ ಮುಂಜಾನೆಯೇ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯ ಪ್ರಾರಂಭವಾಗಿದೆ. ಇದೀಗ ಮುಂಡಕ್ಕೆ ಮತ್ತು ಚೂರಲ್ಮಲಾ ಕುಗ್ರಾಮಗಳಿಗೆ ಅಗೆಯುವ ಯಂತ್ರಗಳು ಮತ್ತು ಆಂಬ್ಯುಲೆನ್ಸ್‌ಗಳನ್ನು ಒಳಗೊಂಡಂತೆ ಭಾರೀ ಯಂತ್ರಗಳನ್ನು ತೆಗೆದುಕೊಂಡು ಹೋಗಲು ಅನುಕೂಲವಾಗಿದೆ.

40 ತಂಡಗಳು ಭೂಕುಸಿತ ಪೀಡಿತ ಪ್ರದೇಶಗಳ ಆರು ವಲಯಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಿವೆ – ಅಟ್ಟಮಲ ಮತ್ತು ಆರನ್ಮಲ, ಮುಂಡಕ್ಕೆ, ಪುಂಚಿರಿಮಟ್ಟಂ, ವಳ್ಳರಿಮಲ ಗ್ರಾಮ, ಜಿವಿಎಚ್‌ಎಸ್‌ಎಸ್‌ ಬೆಳ್ಳರಿಮಲ , ಮತ್ತು ನದಿ ದಂಡೆ.

ಜಂಟಿ ತಂಡಗಳಲ್ಲಿ ಸೇನೆ, ಎನ್‌ಡಿಆರ್‌ಎಫ್, ಡಿಎಸ್‌ಜಿ, ಕೋಸ್ಟ್‌ ಗಾರ್ಡ್‌, ನೌಕಾಪಡೆ ಮತ್ತು ಎಂಇಜಿ ಸಿಬ್ಬಂದಿ ಮತ್ತು ಮೂವರು ಸ್ಥಳೀಯರು ಮತ್ತು ಒಬ್ಬ ಅರಣ್ಯ ಇಲಾಖೆ ನೌಕರರು ಇರುತ್ತಾರೆ. ಇದಕ್ಕೆ ಪೂರಕವಾಗಿ ಅಧಿಕಾರಿಗಳು ರೂಪಿಸಿರುವ ರಕ್ಷಣಾ ಯೋಜನೆಯ ಪ್ರಕಾರ ಚಾಲಿಯಾರ್ ನದಿಯನ್ನು ಕೇಂದ್ರೀಕರಿಸಿ ಮೂರು ಹಂತದ ಶೋಧ ಕಾರ್ಯ ಆರಂಭವಾಗಲಿದೆ.

ಚಾಲಿಯಾರ್‌ನ 40 ಕಿಮೀ ವ್ಯಾಪ್ತಿಯಲ್ಲಿರುವ ಎಂಟು ಪೊಲೀಸ್ ಠಾಣೆಗಳು ಸ್ಥಳೀಯ ಈಜು ತಜ್ಞರೊಂದಿಗೆ ಸೇರಿಕೊಂಡು ನದಿಯ ಕೆಳಭಾಗದಲ್ಲಿ ಹಾರಿಹೋಗಿರುವ ಅಥವಾ ನದಿ ದಡದಲ್ಲಿ ಸಿಕ್ಕಿಬಿದ್ದಿರುವ ಮೃತದೇಹಗಳನ್ನು ಹುಡುಕಲಿವೆ.

ಅದೇ ಸಮಯದಲ್ಲಿ, ಪೊಲೀಸ್ ಹಲಿಕಾಪ್ಟರ್ ಬಳಸಿ ಮತ್ತೊಂದು ಶೋಧ ಕಾರ್ಯಾಚರಣೆ ನಡೆಸಲಾಗುವುದು. ಇದಲ್ಲದೇ, ಕೋಸ್ಟ್ ಗಾರ್ಡ್‌, ನೌಕಾಪಡೆ ಮತ್ತು ಅರಣ್ಯ ಇಲಾಖೆ ಜಂಟಿಯಾಗಿ ರಕ್ಷಣಾ ಯೋಜನೆಯ ಪುಕಾರ, ನದಿ ದಡಗಳು ಮತ್ತು ಮೃತದೇಹಗಳು ಸಿಕ್ಕಿಬೀಳಬಹುದಾದ ಪ್ರದೇಶಗಳನ್ನು ಕೇಂದ್ರೀಕರಿಸಿ ಶೋಧ ಕಾರ್ಯಾಚರಣೆ ನಡೆಸಲಿವೆ.

ಕಸರಿನಲ್ಲಿ ಹೂತು ಹೋಗಿರುವ ಮೃತದೇಹಗಳನ್ನು ಪತ್ತೆ ಮಾಡಲು ಶನಿವಾರ ದೆಹಲಿಯಿಂದ ರಾಡಾರ್ ಬರಲಿವೆ ಎಂದು ರಾಜ್ಯ ಕಂದಾಯ ಸಚಿವ ಕೆ.ರಾಜನ್ ಒಂದು ದಿನದ ಹಿಂದೆ ಹೇಳಿದ್ದರು. ಪ್ರಸ್ತುತ ಆರು ಶ್ಯಾನಗಳು ಶೋಧ ಕಾರ್ಯದಲ್ಲಿ ನೆರವಾಗುತ್ತಿದ್ದು, ಇನ್ನೂ ನಾಲ್ಕು ಶ್ವಾನಗಳು ತಮಿಳುನಾಡಿನಿಂದ ವಯನಾಡಿಗೆ ಆಗಮಿಸಲಿವೆ ಎಂದು ತಿಳಿಸಿದ್ದಾರೆ.

Update: 2024-08-02 05:42 GMT

Linked news