ನಾಸಾದ ಪ್ರಕಾರ, ಖಗೋಳವಿಜ್ಞಾನಿಗಳು ಮಂಗಳವಾರ ರಾತ್ರಿ 11:05... ... Sunita Williams : ಫ್ಲೋರಿಡಾ ಕಡಲಲ್ಲಿ ಬಂದಿಳಿದ ಡ್ರಾಗನ್ ಕ್ಯಾಪ್ಸೂಲ್; ಸುನಿತಾ ವಿಲಿಯಮ್ಸ್, ವಿಲ್ಮೋರ್ ಸುರಕ್ಷಿತ
ನಾಸಾದ ಪ್ರಕಾರ, ಖಗೋಳವಿಜ್ಞಾನಿಗಳು ಮಂಗಳವಾರ ರಾತ್ರಿ 11:05 (ಅಮೆರಿಕದ ಸಮಯ) ಗಂಟೆಗೆ ಸ್ಪೇಸ್‌ಎಕ್ಸ್ ಕ್ರ್ಯೂ ಡ್ರಾಗನ್ ವಾಹನದಲ್ಲಿ ಪಯಣ ಶುರುಮಾಡಿದರು. ಮೊದಲ 40 ನಿಮಿಷಗಳಲ್ಲಿ, ಅವರು ತಮ್ಮ ಫ್ಲೈಟ್ ಸೂಟ್ಗಳನ್ನು ಧರಿಸಿ, ಸೀಟುಗಳಲ್ಲಿ ಕುಳಿತು ಎಲ್ಲ ರೀತಿಯ ಪರಿಶೀಲನೆಗಳನ್ನು ನಡೆಸಿದರು. ಎರಡು ಗಂಟೆಯಲ್ಲಿ ಎಲ್ಲ ತಪಾಸಣೆಗಳು ಪೂರ್ಣಗೊಂಡು ಕ್ಯಾಪ್ಸೂಲ್ ಬಾಹ್ಯಾಕಾಶ ನಿಲ್ದಾಣದಿಂದ ಹೊರಟಿತು. ನಾಸಾ ಈ ಎಲ್ಲ ಪ್ರಕ್ರಿಯೆಗಳ ನೇರ ಪ್ರಸಾರ ಮಾಡಿದೆ.
ಡ್ರಾಗನ್ ಕ್ಯಾಪ್ಸೂಲ್ ಫ್ಲೋರಿಡಾದ ಅಮೆರಿಕದ ಸಮಯ ಸಂಜೆ 5;57ಕ್ಕೆ ಗಲ್ಫ್ ಕರಾವಳಿಯ ಬಳಿ ನೀರಿನಲ್ಲಿ ಇಳಿದಿದೆ. ನಾಸಾದ ತಂಡಳು ವಾಹನವನ್ನು ಸ್ವೀಕರಿಸಿ , ಖಗೋಳವಿಜ್ಞಾನಿಗಳನ್ನು ಹಡಗಿನ ಮೇಲಕ್ಕೇರಿಸುತ್ತಾರೆ. ಬಳಿಕ ಅವರನ್ನು ಹೂಸ್ಟನ್‌ಗೆ ಕರೆದೊಯ್ಯಲಾಗುತ್ತದೆ. ಅದು ಜಾನ್ಸನ್ ಬಾಹ್ಯಾಕಾಶ ಕೇಂದ್ರದ ನೆಲೆ. ಅಲ್ಲಿ ಬಾಹ್ಯಾಕಾಶ ಯಾನಿಗಳ ಪುನಶ್ಚೇತನ ಆರಂಭವಾಗಲಿದೆ.
Update: 2025-03-18 22:52 GMT