ಗ್ರೇಟರ್‌ ಬೆಂಗಳೂರು ಚರ್ಚೆ: ಡಿಕೆಶಿ-ಮುನಿರತ್ನ ರಾಜಕೀಯ ವಾಕ್ಸಮರ

ಮಂಗಳವಾರ ವಿಧಾನಸಭೆ ಅಧಿವೇಶನದಲ್ಲಿ ಗ್ರೇಟರ್‌ ಬೆಂಗಳೂರು ವಿಧೇಯಕದ ಬಗ್ಗೆ ಚರ್ಚೆ ನಡೆಸುತ್ತಿದ್ದ ವೇಳೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಹಾಗೂ ಶಾಸಕ ಮುನಿರತ್ನ ರಾಜಕೀಯ ವಾಕ್ಸಮರ ನಡೆಸಿದ್ದಾರೆ.

 ಚರ್ಚೆ ವೇಳೆ ಡಿಸಿಎಂ ಡಿ.ಕೆ. ಶಿವಕುಮಾರ್‌, ಮಿಸ್ಟರ್ ಅವರ ಹೆಸರೇನು ಎಂದು ಶಾಸಕ ಮುನಿರತ್ನರನ್ನು ಉದ್ದೇಶಿಸಿ ಪ್ರಶ್ನಿಸಿದ್ದಾರೆ. ಈ ವೇಳೆ ನನ್ನ ಹೆಸರು ನಿಮಗೆ ಗೊತ್ತಿಲ್ಲವೇ ಎಂದು ಮುನಿರತ್ನ ಕೇಳಿದರು. ಪಾಪ ನೀವು ತನಿಖೆಗೆ ಹೋಗುತ್ತಿದ್ದಿರಲ್ಲ, ಇನ್ನೂ ನಿಮ್ಮ‌ತನಿಖೆ ಬಾಕಿ ಇದೆ. ಆದ್ದರಿಂದ ನಿಮ್ಮ ಹೆಸರು ಮರೆತಿದ್ದೇನೆ ಎಂದು ಡಿಕೆಶಿ ತಿಳಿಸಿದರು.

ಈ ವೇಳೆ ಡಿಸಿಎಂ ಡಿಕೆಶಿಗೆ ತಿರುಗೇಟು ಕೊಟ್ಟ ಮುನಿರತ್ನ, ಒಂದೇ ಬಾರಿ ಸಿಬಿಐಗೆ ಕೊಡಿ. ನನ್ನ ಹಾಗೂ ನಿಮ್ಮ ಪ್ರಕರಣಗಳನ್ನೂ ಸಿಬಿಐಗೆ ಕೊಡಿ. ಇಲ್ಲವೇ ಅದಕ್ಕಿಂತ ದೊಡ್ಡದಿದ್ದರೆ ಅದಕ್ಕೆ ಕೊಡಿ ಎಂದು ಮುನಿರತ್ನ ಹೇಳಿದರು.

 

Update: 2025-08-19 06:52 GMT

Linked news