ಉಡುಪಿಯಲ್ಲಿ ಭಾರೀ ಮಳೆ; ಅಂಗಡಿಗಳಿಗೆ ನುಗ್ಗಿದ ನೀರು

ಉಡುಪಿ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಅಂಗಡಿಗಳಿಗೆ ಕೆಸರು ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ. ಜಡಿ ಮಳೆಗೆ ಜಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆಯಾಗಿದೆ.

ಜಿಲ್ಲೆಯ  ಅಪ್ಸರಾ ಐಸ್‌ಕ್ರೀಮ್ ಮಳಿಗೆಗೆ ಭಾರೀ ಮಳೆ ನೀರು ಮತ್ತು ಕೆಸರು ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಲಕ್ಷಾಂತರ ರೂ. ಫ್ರಿಡ್ಜ್, ಕೂಲರ್‌ಗಳಿಗೆ ಹಾನಿಯಾಗಿದೆ. ರಸ್ತೆ ಒತ್ತುವರಿ ಹಾಗೂ ಬಿಲ್ಡಿಂಗ್ ಪಾರ್ಕಿಂಗ್ ಒತ್ತುವರಿಯಿಂದ 14 ಫೀಟ್ ಇದ್ದ ಚರಂಡಿ ಈಗ ನಾಲ್ಕು ಅಡಿಗೆ ಇಳಿದಿದೆ. ಅವೈಜ್ಞಾನಿಕ ಚರಂಡಿ ನಿರ್ಮಾಣ ಮತ್ತು ಏಕಾಏಕಿ ಗಾಳಿ ಮಳೆ ಜೊತೆ ಕೆಸರು ಮಿಶ್ರಿತ ನೀರು ಬಂದ ಕಾರಣ ತಗ್ಗು ಪ್ರದೇಶದ ಅಂಗಡಿಗಳು ಮನೆಗಳು ಜಲಾಮಯವಾಗಿದೆ.


Update: 2025-05-20 09:05 GMT

Linked news