ಪಹಲ್ಗಾಮ್ ದಾಳಿ; ಭಾರತದೊಂದಿಗೆ ನಿಲ್ಲುತ್ತೇವೆ ಎಂದು... ... Pahalgam Terror Attack | ಎಲ್‌ಒಸಿಯಲ್ಲಿ ಭದ್ರತೆ: ಪರಿಶೀಲನೆಗೆ ಉಧಂಪುರಕ್ಕೆ ಆಗಮಿಸಿದ ಸೇನಾ ಮುಖ್ಯಸ್ಥ

ಪಹಲ್ಗಾಮ್ ದಾಳಿ; ಭಾರತದೊಂದಿಗೆ ನಿಲ್ಲುತ್ತೇವೆ ಎಂದು ಹೇಳಿದೆ ಅಮೆರಿಕದ ವಿದೇಶಾಂಗ ಇಲಾಖೆ

ಉಗ್ರ ದಾಳಿಗೆ ಸಂಬಂಧಿಸಿದ ವಿಚಾರದಲ್ಲಿ ಅಮೆರಿಕವು ಭಾರತದೊಂದಿಗೆ ನಿಲ್ಲುತ್ತದೆ ಮತ್ತು ಎಲ್ಲಾ ಭಯೋತ್ಪಾದಕ ಕೃತ್ಯಗಳನ್ನು ಬಲವಾಗಿ ಖಂಡಿಸುತ್ತದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆ ಹೇಳಿದೆ. ಇದೇ ವೇಳೆ ದುಷ್ಕರ್ಮಿಗಳನ್ನು ನ್ಯಾಯದ ಮುಂದೆ ತರಲಾಗುವುದು ಎಂಬುದಾಗಿ ಹೇಳಿದ್ದಾರೆ.

"ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಕಾರ್ಯದರ್ಶಿ (ಮಾರ್ಕೊ) ರುಬಿಯೊ ಸ್ಪಷ್ಟಪಡಿಸಿದಂತೆ, ಯುನೈಟೆಡ್ ಸ್ಟೇಟ್ಸ್ ಭಾರತದೊಂದಿಗೆ ನಿಲ್ಲುತ್ತದೆ, ಎಲ್ಲಾ ಭಯೋತ್ಪಾದಕ ಕೃತ್ಯಗಳನ್ನು ಬಲವಾಗಿ ಖಂಡಿಸುತ್ತದೆ" ಎಂದು ವಿದೇಶಾಂಗ ಇಲಾಖೆಯ ವಕ್ತಾರ ಟಮ್ಮಿ ಬ್ರೂಸ್ ಗುರುವಾರ ಹೇಳಿದ್ದಾರೆ.

Update: 2025-04-25 04:51 GMT

Linked news