ಪಾಕ್ ನ 50ಕ್ಕೂ ಹೆಚ್ಚು ಡ್ರೋನ್ ಗಳನ್ನು ಹೊಡೆದುರುಳಿಸಿದ... ... Operation Sindoor | ಪಾಕಿಸ್ತಾನದಿಂದ ಎರಡನೇ ದಿನವೂ ಮುಂದುವರಿದ ದಾಳಿ, 26 ಕಡೆ ಗಡಿ ದಾಟಿ ಬಂದ ಡ್ರೋನ್​ಗಳು

ಪಾಕ್ ನ 50ಕ್ಕೂ ಹೆಚ್ಚು ಡ್ರೋನ್ ಗಳನ್ನು ಹೊಡೆದುರುಳಿಸಿದ ಭಾರತ

ನಿನ್ನೆ ರಾತ್ರಿ, ನಿಯಂತ್ರಣ ರೇಖೆ (ಎಲ್ಒಸಿ) ಮತ್ತು ಅಂತರರಾಷ್ಟ್ರೀಯ ಗಡಿಗಳ (ಐಬಿ) ಉದ್ದಕ್ಕೂ ವಿವಿಧ ಸ್ಥಳಗಳಲ್ಲಿ ಹಿಂಡು ಡ್ರೋನ್​​ಗಳನ್ನು ಕಳುಹಿಸಲು ಪಾಕಿಸ್ತಾನ ಪ್ರಯತ್ನಿಸಿತ್ತು. ಉಧಂಪುರ, ಸಾಂಬಾ, ಜಮ್ಮು, ಅಖ್ನೂರ್, ನಗ್ರೋಟಾ ಮತ್ತು ಪಠಾಣ್ಕೋಟ್ ಪ್ರದೇಶಗಳಲ್ಲಿ ಭಾರತೀಯ ಸೇನೆಯ ವಾಯು ರಕ್ಷಣಾ ಘಟಕಗಳು ನಡೆಸಿದ ದೊಡ್ಡ ಪ್ರಮಾಣದ ಪ್ರತಿ-ಡ್ರೋನ್ ಕಾರ್ಯಾಚರಣೆಯಲ್ಲಿ 50 ಕ್ಕೂ ಹೆಚ್ಚು ಡ್ರೋನ್​​ಗಳನ್ನು ಯಶಸ್ವಿಯಾಗಿ ತಟಸ್ಥಗೊಳಿಸಲಾಗಿದೆ.  ಎಲ್ -70 ಬಂದೂಕುಗಳು, ಝು -23 ಎಂಎಂ, ಸ್ಕಿಲ್ಕಾ ವ್ಯವಸ್ಥೆಗಳು ಮತ್ತು ಇತರ ಸುಧಾರಿತ ಪ್ರತಿ-ಯುಎಎಸ್ ಉಪಕರಣಗಳ ಮೂಲಕ ಕಾರ್ಯಾಚರಣೆ ಕೈಗೊಳ್ಳಲಾಗಿದೆ.  ಇದು ವೈಮಾನಿಕ ಬೆದರಿಕೆಗಳನ್ನು ಎದುರಿಸಲು ಸೇನೆಯ ದೃಢವಾದ ಸಾಮರ್ಥ್ಯವನ್ನು ಪ್ರದರ್ಶಿಸುತ್ತದೆ ಎಂದು ಎಎನ್ಐ ವರದಿ ಮಾಡಿದೆ.

Update: 2025-05-09 03:13 GMT

Linked news