ಸಜಹ ಸ್ಥಿತಿಗೆ ಮರಳಿದ ಜಮ್ಮುಕಾಶ್ಮೀರ; ಕೇಳದ ಗುಂಡಿನ ಸದ್ದು

ಜಮ್ಮುಕಾಶ್ಮೀರದಲ್ಲಿ ಏ.22 ರ ಬಳಿಕ ಇದೇ ಮೊದಲ ಬಾರಿಗೆ ಯಾವುದೇ ಗುಂಡಿನ ಸದ್ದು ಕೇಳದೇ ಶಾಂತಿ ನೆಲೆಸಿದೆ. ಭಾರತ ಹಾಗೂ ಪಾಕಿಸ್ತಾನದ ನಡುವೆ ಉದ್ವಿಗ್ನ ಸ್ಥಿತಿ ನಿರ್ಮಾಣವಾದ ಬಳಿಕ ಜಮ್ಮುಕಾಶ್ಮೀರ ಗಡಿಯಲ್ಲಿ ನಿತ್ಯ ಗುಂಡಿನ ಮೊರೆತ ಜನರನ್ನು ಬೆಚ್ಚಿ ಬೀಳಿಸಿತ್ತು. ಜನರು ಬಂಕರ್‌ಗಳಲ್ಲಿ ಆಶ್ರಯ ಪಡೆದಿದ್ದರು. ಈಗ ಕದನ ವಿರಾಮ ಘೋಷಣೆಯಾದ ಬಳಿಕ ಯಾವುದೇ ಗುಂಡಿನ ಸದ್ದು ಕೇಳುತ್ತಿಲ್ಲ. ಜನಜೀವನ ಸಹಜ ಸ್ಥಿತಿಗೆ ಬಂದಿದೆ. 

Update: 2025-05-12 04:45 GMT

Linked news