ಸರ್ಕಾರ ನಡೆಸುವ ಸಮಾವೇಶಗಳಲ್ಲಿ ಅವಘಡವಾದರೆ ಹೊಣೆ ಯಾರು?
ರಾಜ್ಯದಲ್ಲಿ ದೊಡ್ಡ ಜಾತ್ರೆಗಳು, ಹಬ್ಬಗಳು ನಡೆಯುತ್ತವೆ. ಅವುಗಳಿಗೆ ವಿಧೇಯಕ ಅನ್ವಯವಾಗಲಿದೆಯೇ ಎಂದು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಶಾಸಕ ಸುನೀಲ್ ಕುಮಾರ್ ಆಗ್ರಹಿಸಿದರು.
ಒಂದು ಕೋಟಿ ರೂ. ಬಾಂಡ್ ಕೊಡಬೇಕು ಎಂದು ವಿಧೇಯಕದಲ್ಲಿ ತಿಳಿಸಲಾಗಿದೆ. ಒಂದು ಕೋಟಿ ರೂ. ಬಾಂಡ್ ಕೊಡಲು ದೇಗುಲಗಳಿಂದ ಸಾದ್ಯವೇ, ಇವುಗಳಿಗೆ ರಿಯಾಯಿತಿ ನೀಡಬೇಕು. ರಾಜಕಾರಣಿಗಳು ಹಾಗೂ ಸರ್ಕಾರ ಸಮಾವೇಶಗಳನ್ನು ಮಾಡುತ್ತಾರೆ. ಊಟ ಹಾಕುತ್ತಾರೆ. ಸರ್ಕಾರ ಸಾಧನಾ ಸಮಾವೇಶ ನಡೆಸುತ್ತದೆ. ಈ ಕಾರ್ಯಕ್ರಮಗಳಿಗೆ ಹೊಣೆ ಯಾರು? ಪೊಲೀಸ್‌ಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ. ಇದಕ್ಕೆಲ್ಲಾ ಸೂಕ್ತ ಉತ್ತರ ನೀಡಬೇಕು ಎಂದರು.
Update: 2025-08-21 06:37 GMT