ಸಚಿವರಿಗೆ ಅಭಿಪ್ರಾಯ ಮಂಡಿಸಲು ಸೂಚಿಸಿದ ಸಿಎಂ ಸಿದ್ದರಾಮಯ್ಯ

ಸಂಪುಟ ಸಭೆ ಆರಂಭದಲ್ಲೆ ಸಿಎಂ ಸಿದ್ದರಾಮಯ್ಯ ಮಾತಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ,  ಸಾಮಾಜಿಕ ಹಾಗು ಶೈಕ್ಷಣಿಕ ವರದಿ ಮಂಡನೆ ಬಗ್ಗೆ ನಿಮ್ಮ ನಿಮ್ಮ ಅಭಿಪ್ರಾಯ ತಿಳಿಸಿ ಎಂದು ಸಚಿವರಿಗೆ ಸೂಚಿಸಿದ್ದಾರೆ.

ಈ  ಸಮೀಕ್ಷಾ ವರದಿಯಿಂದ  ಯಾವ ವರ್ಗಕ್ಕೂ ಅನ್ಯಾಯವಾಗಿಲ್ಲ, ಏನಾದರೂ ಅನ್ಯಾಯ ಆಗಿದ್ದರೆ ಸರಿಪಡಿಸೋಣ ಎಂದು ಹೇಳಿದ ಅವರು, "ರಾಹುಲ್ ಗಾಂಧಿ ಹಾಗು ಪಕ್ಷದ ಆಶಯದಂತೆ ಸಾಮಾಜಿಕ ಹಾಗು ಶೈಕ್ಷಣಿಕ ವರದಿ ಮಂಡಿಸಲಾಗಿದೆ.  ಎಲ್ಲಾ ಸಚಿವರು ನಿಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಳ್ಳಿ" ಎಂದು ಹೇಳಿದ್ದಾರೆ.

Update: 2025-04-17 12:31 GMT

Linked news