ಎಸ್‌ಐಟಿ ರಚಿಸಲು ಯಾರು ಒತ್ತಡ ಹಾಕಿದ್ದರೆಂದು ಸರ್ಕಾರ ಬಹಿರಂಗಪಡಿಸಲಿ: ಅಶೋಕ್‌

ಸರ್ಕಾರ ಯಾರ ಒತ್ತಡದಿಂದ ಎಸ್‌ಐಟಿ ರಚಿಸಿದೆ ಎಂದು ಬಹಿರಂಗಪಡಿಸಬೇಕು ಎಂದು ಪ್ರತಿಪಕ್ಷದ ನಾಯಕ ಆರ್‌. ಅಶೋಕ್‌ ಆಗ್ರಹಿಸಿದರು. 

ಸಿಎಂ ಸಿದ್ದರಾಮಯ್ಯ ಅವರ ಮನೆಗೆ ಪ್ರಗತಿಪರರು, ನಗರ ನಕ್ಸಲರು ಹೋಗಿದ್ದರು ಎಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿದೆ. ಪ್ರಕರಣ ಕುರಿತು ಸತ್ಯಾಂಶ ಹೊರಗೆ ಬರಲಿ ಎಂದು ನಾವು ಬಯಸುತ್ತೇವೆ ಎಂದು ತಿಳಿಸಿದರು.

ಸಿಎಂ ಸಿದ್ದರಾಮಯ್ಯನವರು 28 ಕೊಲೆ ಮಾಡಿದ್ದಾರೆ ಎಂದು ಮಹೇಶ್‌ ತಿಮರೋಡಿ ಹೇಳಿದ್ದಾರೆ. ಇಂತಹವರ ವಿರುದ್ದ ಏಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದರು. ಈ ವೇಳೆ ಮೊದಲು ಹೇಳಿದ್ದು ಯಾರು ಗೊತ್ತಾ ಎಂದು ಕೈ ಶಾಸಕರು ಪರೋಕ್ಷವಾಗಿ ಹರೀಶ್ ಪೂಂಜಾ ಹೆಸರನ್ನು ಹೇಳಿದರು.

 

Update: 2025-08-18 11:12 GMT

Linked news