ಬಿಹಾರ ಚುನಾವಣಾ ಫಲಿತಾಂಶ| ತ್ವರಿತ ನಿರ್ಣಯ ಬೇಡ, ಫಲಿತಾಂಶದ ನಂತರ ವಿಮರ್ಶೆ ಅಗತ್ಯ; ಶಶಿ ತರೂರು
ಬಿಹಾರ ವಿಧಾನಸಭೆ ಚುನಾವಣೆಯಲ್ಲಿ NDA ಮುನ್ನಡೆಯನ್ನು ಕಾಯ್ದುಕೊಳ್ಳುತ್ತಿರುವ ನಡುವೆ, ಕಾಂಗ್ರೆಸ್ ಸಂಸದ ಶಶಿ ತರೂರ್ ತ್ವರಿತ ತೀರ್ಮಾನಗಳಿಗೆ ಎಚ್ಚರಿಕೆ ವಹಿಸುವಂತೆ ಹೇಳಿದ್ದಾರೆ. ಅಂತಿಮ ಫಲಿತಾಂಶಗಳು ಇನ್ನೂ ಅಧಿಕೃತವಾಗಿ ಪ್ರಕಟವಾಗಬೇಕಿದೆ ಎಂದು ಅವರು ಸೂಚಿಸಿದರು. ಇದೀಗ ಅವರು ಮುನ್ನಡೆಸುತ್ತಿದ್ದಾರೆ ಅಷ್ಟೇ. ದೊಡ್ಡ ಅಂತರದಿಂದ ಮುನ್ನಡೆ ಪಡೆದಿದ್ದಾರೆ. ಆದರೆ ಚುನಾವಣಾ ಆಯೋಗವೇ ಫಲಿತಾಂಶವನ್ನು ಚರ್ಚಿಸಿ ಘೋಷಿಸಬೇಕು ಅಲ್ಲಿಯವರೆಗೆ ಕಾಯೋಣ ಎಂದು ಅವರು ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ಆತ್ಮಪರಿಶೀಲನೆ ಅಗತ್ಯವಿದೆ ಎಂದು ಒಪ್ಪಿಕೊಂಡ ಅವರು, ಮಿತ್ರಪಕ್ಷದ ಪಾತ್ರವನ್ನೂ ಗಮನಕ್ಕೆ ತಂದರು. ಪಕ್ಷವು ಕಾರಣಗಳನ್ನು ವಿವರವಾಗಿ ಅಧ್ಯಯನ ಮಾಡುವ ಜವಾಬ್ದಾರಿಯಿದೆ. ಆದರೆ ನಾವು ಮೈತ್ರಿಯ ಹಿರಿಯ ಪಾಲುದಾರರಾಗಿರಲಿಲ್ಲ. RJD ಕೂಡ ತನ್ನ ಪ್ರದರ್ಶನವನ್ನು ಗಮನವಾಗಿ ಪರಿಶೀಲಿಸಬೇಕು ಎಂದು ಅವರು ತಿಳಿಸಿರು.
ಒಟ್ಟು ಫಲಿತಾಂಶವನ್ನು ವಿಸ್ತೃತ ದೃಷ್ಟಿಯಿಂದ ನೋಡಬೇಕಾಗಿದೆ. ನಮ್ಮ ಸಂಪೂರ್ಣ ಪ್ರದರ್ಶನವನ್ನು ನೋಡಿಕೊಳ್ಳುವುದು ಬಹಳ ಮುಖ್ಯ. ಚುನಾವಣೆಗಳು ಅನೇಕ ಅಂಶಗಳ ಸಂಯೋಜನೆ ಎಂದು ಅವರು ತಿಳಿಸಿದರು.
ಮತದಾರರ ಮೇಲೆ ಕಲ್ಯಾಣ ಯೋಜನೆಗಳ ಪ್ರಭಾವದ ಕುರಿತು ಮಾತನಾಡಿದ ಅವರು, ಮಹಿಳಾ ಮತದಾರರಿಗೆ ಮಾದರಿ ಸಂಹಿತೆಯ ಮೊದಲು ಕೆಲವು ಪ್ರೋತ್ಸಾಹಗಳನ್ನು ನೀಡಲಾಗಿದೆ... ಇದು ಆರೋಗ್ಯಕರ ಪದ್ಧತಿ ಅಲ್ಲ ಎಂದು ನನಗೆ ಅನ್ನಿಸುತ್ತದೆ. ಇದೇ ರೀತಿಯ ಪ್ರವೃತ್ತಿಗಳು ಮಹಾರಾಷ್ಟ್ರ ಸೇರಿದಂತೆ ಇತರ ರಾಜ್ಯಗಳಲ್ಲೂ ಕಂಡುಬಂದಿವೆ ಎಂದು ಅವರು ತಿಳಿಸಿದರು.