ಅಭ್ಯರ್ಥಿಗಳು ಒತ್ತಾಯದಿಂದ ಹಿಂದೆ ಸರಿದಿದ್ದರೆ... ... Lok Sabha Election Results 2024 Live: ಇಂಡಿಯಾ ಬ್ಲಾಕ್ (200) ಚೇತರಿಕೆ; ಎನ್‌ಡಿಎ (290) ಮುನ್ನಡೆ

ಅಭ್ಯರ್ಥಿಗಳು ಒತ್ತಾಯದಿಂದ ಹಿಂದೆ ಸರಿದಿದ್ದರೆ ಮಧ್ಯಪ್ರವೇಶ: ಚುನಾವಣೆ ಆಯೋಗ

ಹೊಸದಿಲ್ಲಿ: ಅಭ್ಯರ್ಥಿಗಳು ಬಲವಂತವಾಗಿ ನಾಮಪತ್ರ ಹಿಂತೆಗೆದುಕೊಂಡಾಗ ಮಾತ್ರ ಚುನಾವಣೆ ಆಯೋಗ ಕ್ರಮಕೈಗೊಳ್ಳುತ್ತದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ.

ಅವಿರೋಧ ಆಯ್ಕೆ ಸಂದರ್ಭದಲ್ಲಿ ವ್ಯಕ್ತಿಯನ್ನು ವಿಜೇತ ಎಂದು ಘೋಷಿಸುವುದನ್ನು ತಡೆಯುವ ಯಾವುದೇ ನಿಬಂಧನೆಗೆ ಕಾನೂನಿನ ಸಮ್ಮತಿ ಇಲ್ಲ ಎಂದು ಮತದಾರರರಿಗೆ 'ಮೇಲಿನ ಯಾವುದೂ ಇಲ್ಲ' ಆಯ್ಕೆ ಕುರಿತು ಸುಪ್ರೀಂ ಕೋರ್ಟ್ ತೀರ್ಪು ಕುರಿತು ಪ್ರತಿಕ್ರಿಯಿಸಿದರು.

ಲೋಕಸಭೆ ಚುನಾವಣೆಯಲ್ಲಿ ಸೂರತ್‌ನ ಬಿಜೆಪಿ ಅಭ್ಯರ್ಥಿ ಮುಖೇಶ್ ದಲಾಲ್ ಅವಿರೋಧವಾಗಿ ಗೆದ್ದಿದ್ದಾರೆ.

ʻಸ್ಪರ್ಧೆ ಇರಬೇಕು. ಅದರಲ್ಲಿ ಯಾವುದೇ ಸಂದೇಹವಿಲ್ಲ. ಗೆಲುವಿನಲ್ಲಿ ಹೆಮ್ಮೆ ಇಲ್ಲದಿದ್ದರೆ ಹೇಗೆ? ನಾಮಪತ್ರಗಳನ್ನು ಹಿಂತೆಗೆದುಕೊಳ್ಳುವ ದಿನ, ಅಭ್ಯರ್ಥಿ ಉಮೇದುವಾರಿಕೆ ವಾಪಸ್‌ ಪಡೆದರೆ ನಾವೇನು ಮಾಡಬೇಕು? ಅವರು ಇಷ್ಟಪಟ್ಟು ಮಾಡಿದ್ದರೆ, ಅದು ನನಗೆ ಹೇಗೆ ತಿಳಿಯುತ್ತದೆ?,ʼ ಎಂದು ಹೇಳಿದರು.

Update: 2024-06-04 02:37 GMT

Linked news