‌ಎಕ್ಸ್‌ ನಲ್ಲಿ ʻದ್ವೇಷಪೂರಿತ ಮೆಮೆ:  ಇಬ್ಬರಿಗೆ ಪೊಲೀಸ್ ನೋಟಿಸ್
x

‌ಎಕ್ಸ್‌ ನಲ್ಲಿ ʻದ್ವೇಷಪೂರಿತ' ಮೆಮೆ: ಇಬ್ಬರಿಗೆ ಪೊಲೀಸ್ ನೋಟಿಸ್


ಕೋಲ್ಕತ್ತಾ, ಮೇ 7: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಬಗ್ಗೆ ಸಮಾಜಿಕ ಮಾಧ್ಯಮ ಎಕ್ಸ್‌ ನಲ್ಲಿ ʻಆಕ್ಷೇಪಾರ್ಹ, ದ್ವೇಷಪೂರಿತ ಮತ್ತು ಪ್ರಚೋದಕʼ ಮೆಮೆ ಪೋಸ್ಟ್ ಮಾಡಿದ ಇಬ್ಬರ ಮೇಲೆ ಕಾನೂನು ಕ್ರಮ ಜರುಗಿಸುವುದಾಗಿ ಕೋಲ್ಕತ್ತಾ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಎರಡು ಎಕ್ಸ್‌ ಹ್ಯಾಂಡಲ್‌ಗಳು, @SoldierSaffron7 ಮತ್ತು @Shalendervoice, ಮಮತಾ ಬ್ಯಾನರ್ಜಿಯವರ 'ಆಕ್ಷೇಪಾರ್ಹ' ಮೆಮೆಯನ್ನು ಹಂಚಿಕೊಂಡಿದ್ದಾರೆ. ಹೆಸರು ಸೇರಿದಂತೆ ನಿಮ್ಮ ಸಂಪೂರ್ಣ ಗುರುತು ಹಾಗೂ ವಿಳಾಸ ಬಹಿರಂಗಪಡಿಸಬೇಕು ಎಂದು ಪೊಲೀಸರು ಹೇಳಿದ್ದಾರೆ. ʻಕೋಲ್ಕತ್ತಾದ ಸೈಬರ್ ಪೊಲೀಸ್ ಠಾಣೆ ಸಿಆರ್‌ಪಿಸಿ ಸೆಕ್ಷನ್ 149 ರಡಿ ಕಾನೂನು ಮತ್ತು ಸುವ್ಯವಸ್ಥೆ ಮೇಲೆ ಪರಿಣಾಮ ಬೀರುವಿ ಸಂದೇಶವನ್ನು ಪೋಸ್ಟ್ ಮಾಡಿದ್ದಕ್ಕಾಗಿ ನಿಮಗೆ ನೋಟಿಸ್ ಜಾರಿ ಮಾಡಿದೆ. ಪೋಸ್ಟ್ ನ್ನು ಅಳಿಸಬೇಕು. ಇಲ್ಲವಾದಲ್ಲಿ, ಕಾನೂನಿನ ಅನ್ವಯ ಕ್ರಮ ತೆಗೆದುಕೊಳ್ಳಲಾಗುತ್ತದೆʼ ಎಂದು ಹೇಳಿದೆ.

@Shalendervoice ಪೋಸ್ಟ್ ತೆಗೆದುಹಾಕಿದ್ದಾರೆ. ಆದರೆ, @SoldierSaffron7 ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿಕೊಂಡು ರಚಿಸಿದ ಬ್ಯಾನರ್ಜಿ ಅವರ ವಿಡಿಯೋ ಉಳಿಸಿಕೊಂಡಿದ್ದಾರೆ. ಪೊಲೀಸರ ನಡೆಯನ್ನು ಖಂಡಿಸಿರುವ ಸೋಲ್ಜರ್‌ಸ್ಯಾಫ್ರನ್‌7, ʻಬಿಜೆಪಿ ಸರ್ಕಾರದಲ್ಲಿ ಪ್ರಜಾಪ್ರಭುತ್ವವಿಲ್ಲ ಎಂದು ಹೇಳುವ ವರು ಒಮ್ಮೆ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಬೇಕುʼ ಎಂದು ಇನ್ನೊಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

Read More
Next Story