Wayanad Landslide LIVE | ಇದು ರಾಷ್ಟ್ರೀಯ ವಿಪತ್ತು, ಸರ್ಕಾರ ಏನು ಮಾಡುತ್ತದೆ ನೋಡೋಣ: ರಾಹುಲ್
x
ಬದುಕುಳಿದವರಿಗೆ ಸಲ್ಲಬೇಕಾದ್ದು ಸಿಗುವಂತೆ ಮಾಡಲು ತಮ್ಮ ಪಕ್ಷ ಪ್ರಯತ್ನಿಸಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಫೋಟೋ: ANI/X

Wayanad Landslide LIVE | ಇದು ರಾಷ್ಟ್ರೀಯ ವಿಪತ್ತು, ಸರ್ಕಾರ ಏನು ಮಾಡುತ್ತದೆ ನೋಡೋಣ: ರಾಹುಲ್

ಸಿಎಂ ಪಿಣರಾಯಿ ವಿಜಯನ್ ಸರ್ವಪಕ್ಷ ಸಭೆ: ಮುಂಡಕ್ಕೆ, ಚೂರಲ್‌ಮಲಾ, ಅಟ್ಟಮಲ ಮತ್ತು ನೂಲ್‌ವುಳದ ಭೂಕುಸಿತ ಪೀಡಿತ ಪ್ರದೇಶಗಳಿಂದ ಇದುವರೆಗೆ 1,500 ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ.


ಭೂಕುಸಿತ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ಮತ್ತು ವಿಪತ್ತಿನಲ್ಲಿ ಗಾಯಗೊಂಡ ಮತ್ತು ಮನೆ ಕಳೆದುಕೊಂಡ ಸಂತ್ರಸ್ತರನ್ನು ಭೇಟಿ ಮಾಡಲು ಕಾಂಗ್ರೆಸ್ ನಾಯಕ ಮತ್ತು ಮಾಜಿ ವಯನಾಡ್ ಸಂಸದ ರಾಹುಲ್ ಗಾಂಧಿ ಮತ್ತು ಅವರ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ವಯನಾಡ್‌ಗೆ ಬಂದಿದ್ದಾರೆ.

ಗುರುವಾರ (ಆಗಸ್ಟ್ 1) ಸರ್ವಪಕ್ಷ ಸಭೆಯ ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು, ʻʻಭೂಕುಸಿತ ಪೀಡಿತ ಮುಂಡಕ್ಕೆ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆಗೆ ಇನ್ನೂ ಕೆಲವು ದಿನಗಳು ಬೇಕಾಗಬಹುದು ಮತ್ತು ರಕ್ಷಣಾ ಕಾರ್ಯಗಳನ್ನು ಸಂಘಟಿಸಲು ನಾಲ್ವರು ಸಚಿವರನ್ನು ಒಳಗೊಂಡ ಸಂಪುಟ ಉಪಸಮಿತಿಯನ್ನು ನೇಮಿಸಲಾಗಿದೆ.

ನಾಲ್ವರು ಸಚಿವರು-ಕಂದಾಯ ಸಚಿವ ಕೆ.ರಾಜನ್, ಅರಣ್ಯ ಸಚಿವ ಎ.ಕೆ.ಸಸೀಂದ್ರನ್, ಪಿಡಬ್ಲ್ಯೂಡಿ ಮತ್ತು ಪ್ರವಾಸೋದ್ಯಮ ಸಚಿವ ಪಿಎ ಮೊಹಮ್ಮದ್ ರಿಯಾಸ್ ಮತ್ತು ಎಸ್‌ಸಿ/ಎಸ್‌ಟಿ ಇಲಾಖೆ ಸಚಿವ ಒಆರ್ ಕೇಲು ಅವರು ಜಿಲ್ಲೆಯಲ್ಲಿ ಶಿಬಿರ ನಡೆಸಲಿದ್ದಾರೆ.

ʻʻಈ ರಕ್ಷಣಾ ಕಾರ್ಯ ಅಲ್ಪಾವಧಿಯಲ್ಲಿ ಮುಗಿಯುವಂತದ್ದಲ್ಲ. ಸದ್ಯಕ್ಕೆ 12 ಸಚಿವರು ವಯನಾಡಿನಲ್ಲಿ ಮೊಕ್ಕಾಂ ಹೂಡಿದ್ದಾರೆ. ಇದೀಗ ನಾಲ್ವರು ಸಚಿವರು ಇಲ್ಲಿಯೇ ಮೊಕ್ಕಾಂ ಹೂಡಲು ಸರ್ವಪಕ್ಷ ಸಭೆ ನಿರ್ಧರಿಸಿದೆ ಎಂದು ವಿಜಯನ್ ಹೇಳಿದರು.

ಭಾರೀ ಪ್ರಮಾಣದಲ್ಲಿ ಮಣ್ಣಿನ ಶೇಖರಣೆಯಿಂದಾಗಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಆರಂಭದಲ್ಲಿ ಕಷ್ಟವಾಗಿದ್ದರೂ, ಈಗ ಸೇನೆಯು ಬೈಲಿ ಸೇತುವೆಯ ನಿರ್ಮಾಣವನ್ನು ಪೂರ್ಣಗೊಳಿಸುತ್ತಿರುವುದರಿಂದ ಕಾರ್ಯಾಚರಣೆಯು ಸುಲಭವಾಗುತ್ತದೆ ಎಂದರು.

ಭೂಕುಸಿತ ಪೀಡಿತ ಪ್ರದೇಶಗಳನ್ನು ಸಂಪರ್ಕಿಸಲು ಬೈಲಿ ಸೇತುವೆಯ ನಿರ್ಮಾಣ ಮಾಡಲಾಗಿದೆ. ಇದರಿಂದ ಸಿಕ್ಕಿಹಾಕಿಕೊಂಡಿರುವ ಸಾಕಷ್ಟು ಜನರನ್ನು ರಕ್ಷಿಸಬಹುದಾಗಿದೆ. ಜೊತೆಗೆ ಸ್ನಿಫರ್ ಡಾಗ್‌ಗಳ ನಿಯೋಜನೆ ಮತ್ತು ಕೇಂದ್ರ ಮತ್ತು ರಾಜ್ಯ ರಕ್ಷಣಾ ತಂಡಗಳಿಂದ 1,000 ಕ್ಕೂ ಹೆಚ್ಚು ರಕ್ಷಕರು ಬೃಹತ್‌ ಶೋಧ ಕಾರ್ಯಾಚರಣೆಗಳನ್ನು ನಡೆಸುತ್ತಿದ್ದಾರೆ, ಇದು ಅತಿದೊಡ್ಡ ಕಾರ್ಯಾಚರಣೆಯಾಗಿದೆ.

ಮಂಗಳವಾರ ಮುಂಜಾನೆ ಮುಂಡಕ್ಕೆ, ಚೂರಲ್ಮಲಾ, ಅಟ್ಟಮಲ ಮತ್ತು ನೂಲುಳ ಗ್ರಾಮಗಳಲ್ಲಿ ಧಾರಾಕಾರ ಮಳೆಯಿಂದಾಗಿ ಭಾರೀ ಭೂಕುಸಿತಗಳು ಸಂಭವಿಸಿದ್ದು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಹಲವಾರು ಜನರು ಸಾವನ್ನಪ್ಪಿದ್ದಾರೆ.

ಹೆಚ್ಚಿನ ಲೈವ್ ಅಪ್‌ಡೇಟ್‌ಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ: https://thefederal.com/category/live/wayanad-landslides-live-bailey-bridge-may-be-built-by-10-am-rahul-priyanka-leave-for-kerala-136458?infinitescroll=1

Live Updates

  • 1 Aug 2024 4:22 PM IST

    ಬೈಲಿ ಸೇತುವೆ ನಿರ್ಮಾಣದಿಂದ ಕಾರ್ಯಾಚರಣೆ ಸುಲಭ: ವಿಜಯನ್

    ಭಾರೀ ಪುಮಾಣದಲ್ಲಿ ಮಣ್ಣು ಸಂಗ್ರಹವಾಗಿರುವ ಕಾರಣ ಶೋಧ ಕಾರ್ಯಾಚರಣೆ ಆರಂಭಿಸಲು ಆರಂಭದಲ್ಲಿ ಕಷ್ಟವಾಗಿತ್ತು. ಆರಂಭದಲ್ಲಿ, ರಕ್ಷಣಾ ಕಾರ್ಯಾಚರಣೆಗಾಗಿ ದೊಡ್ಡ ಯಂತ್ರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ಆದರೆ ಈಗ ಸೇನೆಯು ಬೈಲಿ ಸೇತುವೆಯ ನಿರ್ಮಾಣವನ್ನು ಪೂರ್ಣಗೊಳಿಸುತ್ತಿದೆ, ಕಾರ್ಯಾಚರಣೆ ಸುಲಭವಾಗುತ್ತದೆ. ಇನ್ನೂ ಹಲವು ಮಂದಿ ನಾಪತ್ತೆಯಾಗಿದ್ದಾರೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.

    ಬದುಕುಳಿದವರಿಗೆ ಪುನರ್ವಸತಿ ಕಲ್ಪಿಸುವ ಕುರಿತು ಕೇಳಿದ ಪುಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು, ಈಗ ಮೊದಲು ಸಂತ್ರಸ್ತರ ರಕ್ಷಣ ಮಾಡುತ್ತೇವೆ. ನಾವು ಈ ಹಿಂದೆ ಬದುಕುಳಿದವರನ್ನು ಪರಿಣಾಮಕಾರಿಯಾಗಿ ಪುನರ್ವಸತಿ ಮಾಡಿದ್ದೇವೆ. ನಾವು ಅದೇ ರೀತಿ ಮುಂದುವರಿಯುತ್ತೇವೆ ಎಂದು ವಿಜಯನ್ ಹೇಳಿದರು.

    ಪರಿಹಾರ ಶಿಬಿರಗಳ ಒಳಗೆ ಚಿತ್ರೀಕರಣ ಮತ್ತು ವರದಿ ಮಾಡುವುದನ್ನು ತಡೆಯುವಂತೆ ಮುಖ್ಯಮಂತ್ರಿ ಮಾಧ್ಯಮಗಳಿಗೆ ಸೂಚಿಸಿದರು. ಶಿಬಿರಗಳು ಪ್ರಸ್ತುತ ಹಲವಾರು ಕುಟುಂಬಗಳಿಗೆ ವಸತಿ ನೀಡುತ್ತಿದ್ದು, ಖಾಸಗಿತನವನ್ನು ಗೌರವಿಸಬೇಕು ಎಂದು ಅವರು ಹೇಳಿದರು.

    ವರದಿಗಾರರು ಸೇರಿದಂತೆ ಕುಟುಂಬಗಳನ್ನು ಭೇಟಿಯಾಗಲು ಬಯಸುವವರು ಶಿಬಿರದ ಹೊರಗೆ ಭೇಟಿ ಮಾಡುವ ಮೂಲಕ ಇತರರ ಖಾಸಗಿತನವನ್ನು ಗೌರವಿಸಬಹುದು ಎಂದು ಮುಖ್ಯಮಂತ್ರಿ ಹೇಳಿದರು.

    ಪತ್ರಿಕಾಗೋಷ್ಠಿಯ ನಂತರ ವಿಜಯನ್ ಅವರು ಮುಖ್ಯಮಂತ್ರಿಗಳ ವಿಪತ್ತು ಪರಿಹಾರ ನಿಧಿಗೆ (CMDRF) ವಿವಿಧ ಸಂಸ್ಥೆಗಳು ನೀಡಿರುವ ಚೆಕ್‌ಗಳನ್ನು ಸ್ವೀಕರಿಸಿದರು.

  • 1 Aug 2024 3:58 PM IST

    ವಯನಾಡ್‌ನಲ್ಲಿರುವ ಪರಿಹಾರ ಶಿಬಿರಕ್ಕೆ ರಾಹುಲ್, ಪ್ರಿಯಾಂಕಾ ಭೇಟಿ

  • 1 Aug 2024 2:53 PM IST

    ಭೂಕುಸಿತ ಸ್ಥಳಕ್ಕೆ ರಾಹುಲ್, ಪ್ರಿಯಾಂಕಾ ಭೇಟಿ

  • 1 Aug 2024 2:52 PM IST

  • 1 Aug 2024 2:52 PM IST

    ಚೂರಲ್ಮಲಾ ತಲುಪಿದ ರಾಹುಲ್ ಗಾಂಧಿ


  • 1 Aug 2024 1:53 PM IST

    ಎರಡು ಗ್ರಾಮಗಳು ಭೂಪಟದಿಂದಲೇ ಮಾಯವಾಗಿವೆ: ಶಶಿ ತರೂರ್

  • 1 Aug 2024 1:51 PM IST

    ಸಿಎಂ ಅಧ್ಯಕ್ಷತೆಯಲ್ಲಿ ಸರ್ವಪಕ್ಷ ಸಭೆ

  • 1 Aug 2024 1:43 PM IST

    ಬೈಲಿ ಸೇತುವೆಯ ಕಾಮಗಾರಿ ಮುಂದುವರಿದಿದೆ‌

  • 1 Aug 2024 11:49 AM IST

    ತಾಯಿ ಕಳೆದುಕೊಂಡ ಶಿಶುಗಳಿಗೆ ಎದೆಹಾಲು ನೀಡುತ್ತಿರುವ ನಿಸ್ವಾರ್ಥ ಮಹಿಳೆ: ಹೃದಯಸ್ಪರ್ಶಿ ಕಥೆ

    ಭೂಕುಸಿತ ಪೀಡಿತ ವಯನಾಡ್ ಜಿಲ್ಲೆಯಿಂದ ಸಾವು ಮತ್ತು ವಿನಾಶದ ಘೋರ ವರದಿಗಳ ನಡುವೆ, ಇಡುಕ್ಕಿಯಲ್ಲಿ ಹೃದಯಸ್ಪರ್ಶಿ ಕಥೆ ಹೊರಹೊಮ್ಮಿದೆ. ಎರಡು ಮಕ್ಕಳ ಮಹಿಳೆಯೊಬ್ಬಳು ತಮ್ಮ ತಾಯಿಯನ್ನು ಕಳೆದುಕೊಂಡ ಶಿಶುಗಳಿಗೆ ಎದೆಹಾಲು ನೀಡುತ್ತಾರೆ.

    ಆ ನಿಸ್ವಾರ್ಥ ಮಹಿಳೆ, ಆಕೆಯ ಪತಿ, 4 ವರ್ಷ ಮತ್ತು ನಾಲ್ಕು ತಿಂಗಳ ವಯಸ್ಸಿನ ಇಬ್ಬರು ಮಕ್ಕಳು ಈಗಾಗಲೇ ಮಧ್ಯ ಕೇರಳದ ಇಡುಕ್ಕಿಯಲ್ಲಿರುವ ತಮ್ಮ ಮನೆಯಿಂದ ವಯಂಡ್‌ಗೆ ತೆರಳಿದ್ದಾರೆ.

    ಮಾಧ್ಯಮಗಳೊಂದಿಗೆ ಮಾತನಾಡಿದ ಮಹಿಳೆ, ʻʻನಾನು ಎರಡು ಚಿಕ್ಕ ಮಕ್ಕಳ ತಾಯಿಯಾಗಿದ್ದು, ತಾಯಂದಿರಿಲ್ಲದ ಮಕ್ಕಳು ಎದೆಹಾಲು ಇಲ್ಲದೇ ಬದುಕುವುದು ಹೇಗೆ ಎಂಬ ಪ್ರಶ್ನೆ ನನಗೆ ಮೂಡಿತು, ಆಗ ನಾನು ಈ ನಿರ್ಧಾರ ತೆಗೆದುಕೊಳ್ಳಲು ಪ್ರೇರಣೆಯಾಯಿತು. ಈ ಬಗ್ಗೆ ತನ್ನ ಪತಿಯೊಂದಿಗೆ ಚರ್ಚಿಸಿದಾಗ, ಅವರು ಅದಕ್ಕೆ ತುಂಬಾ ಬೆಂಬಲ ನೀಡಿದರುʼʼ ಎಂದು ಅವರು ಹೇಳಿದರು.

  • 1 Aug 2024 11:26 AM IST

    ಸೇನೆಯ ಯೋಜನೆ


Read More
Next Story