ವೈಸ್ ಅಡ್ಮಿರಲ್ ದಿನೇಶ್ ಕುಮಾರ್ ತ್ರಿಪಾಠಿ ನೌಕಾಪಡೆಯ ನೂತನ ಮುಖ್ಯಸ್ಥ
x

ವೈಸ್ ಅಡ್ಮಿರಲ್ ದಿನೇಶ್ ಕುಮಾರ್ ತ್ರಿಪಾಠಿ ನೌಕಾಪಡೆಯ ನೂತನ ಮುಖ್ಯಸ್ಥ


ಹೊಸದಿಲ್ಲಿ, ಏ.19- ನೌಕಾಪಡೆಯ ಉಪ ಮುಖ್ಯಸ್ಥ, ವೈಸ್ ಅಡ್ಮಿರಲ್ ದಿನೇಶ್ ಕುಮಾರ್ ತ್ರಿಪಾಠಿ ಈ ತಿಂಗಳ ಅಂತ್ಯದ ವೇಳೆಗೆ ನೂತನ ನೌಕಾಪಡೆ ಮುಖ್ಯಸ್ಥರಾಗಲಿದ್ದಾರೆ.

ಅಡ್ಮಿರಲ್ ಆರ್. ಹರಿ ಕುಮಾರ್ ಅವರು ಏಪ್ರಿಲ್ 30 ರಂದು ಸೇವೆಯಿಂದ ನಿವೃತ್ತರಾಗಲಿದ್ದಾರೆ. ʻವೈಸ್ ಅಡ್ಮಿರಲ್ ದಿನೇಶ್ ಕುಮಾರ್ ತ್ರಿಪಾಠಿ ಅವರನ್ನು ಏಪ್ರಿಲ್ 30 ರ ಮಧ್ಯಾಹ್ನದಿಂದ ಜಾರಿಗೆ ಬರುವಂತೆ ನೌಕಾ ಸಿಬ್ಬಂದಿಯ ಮುಂದಿನ ಮುಖ್ಯಸ್ಥರಾಗಿ ನೇಮಕಗೊಳಿಸಿದೆʼ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ಮೇ 15, 1964 ರಂದು ಜನಿಸಿದ ತ್ರಿಪಾಠಿ ಅವರನ್ನು ಜುಲೈ 1, 1985 ರಂದು ಭಾರತೀಯ ನೌಕಾಪಡೆಯ ಕಾರ್ಯನಿರ್ವಾ ಹಕ ಶಾಖೆಗೆ ನಿಯೋಜಿಸಲಾಯಿತು. ಸಂವಹನ ಮತ್ತು ಎಲೆಕ್ಟ್ರಾನಿಕ್ ಯುದ್ಧ ತಜ್ಞರಾದ ಅವರು ಸೇನೆಯಲ್ಲಿ ಸುಮಾರು 30 ವರ್ಷ ಕಾಲ ಸುದೀರ್ಘ ಮತ್ತು ವಿಶಿಷ್ಟ ಸೇವೆ ಸಲ್ಲಿಸಿದ್ದಾರೆ. ನೌಕಾಪಡೆಯ ಉಪ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲು ಅವರು ಪಶ್ಚಿಮ ನೌಕಾ ಕಮಾಂಡ್‌ನ ಫ್ಲಾಗ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್ ಆಗಿ ಸೇವೆ ಸಲ್ಲಿಸಿದ್ದರು.

ರೇವಾದ ಸೈನಿಕ್ ಸ್ಕೂಲ್, ಎನ್‌ಡಿಎ ಖಡಕ್‌ವಾಸ್ಲಾ ಮತ್ತು ಗೋವಾದ ನೇವಲ್ ವಾರ್ ಕಾಲೇಜಿನ ವಿದ್ಯಾರ್ಥಿಯಾದ ಅವರು ಅಮೆರಿಕದ ನೇವಲ್ ವಾರ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದಾರೆ. ಅತಿ ವಿಶಿಷ್ಟ ಸೇವಾ ಪದಕ ಮತ್ತು ನೌಕಾ ಸೇನಾ ಪದಕ (ಎನ್‌ಎಂ) ಕ್ಕೆ ಪ್ರಾಪ್ತರಾಗಿದ್ದಾರೆ.

Read More
Next Story