ʼದ ಫೆಡರಲ್ʼ ಮತ್ತೊಂದು ಮೈಲಿಗಲ್ಲು | ಆಂಧ್ರಪ್ರದೇಶ ಆವೃತ್ತಿ ಆರಂಭ
x

ʼದ ಫೆಡರಲ್ʼ ಮತ್ತೊಂದು ಮೈಲಿಗಲ್ಲು | ಆಂಧ್ರಪ್ರದೇಶ ಆವೃತ್ತಿ ಆರಂಭ

ಇದು ದೇಶದ ಒಕ್ಕೂಟ ವ್ಯವಸ್ಥೆಯನ್ನು ಎತ್ತಿ ಹಿಡಿಯುವುದು ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲ ರಾಜ್ಯಗಳ ಸುದ್ದಿಗಳಿಗೆ ಪ್ರಾಮುಖ್ಯತೆ ಖಾತ್ರಿಗೊಳಿಸುವ ʼದ ಫೆಡರಲ್‌ʼ ನ ಆಶಯಕ್ಕೆ ಪೂರಕವಾಗಿ ವಿಸ್ತರಣೆಯಾಗಿರುವ ಮಾಧ್ಯಮ ಚಟುವಟಿಕೆ. ಮಾರ್ಚ್ 2019 ರಲ್ಲಿ ಇಂಗ್ಲಿಷ್ ಆವೃತ್ತಿಯನ್ನು ಪ್ರಾರಂಭಿಸಿದಾಗಿನಿಂದ ʼದ ಫೆಡರಲ್ʼ ತನ್ನ ರಾಜಿಯಾಗದ ಪತ್ರಿಕೋದ್ಯಮದ ಮೂಲಕ ದೇಶದ ಮಾಧ್ಯಮ ವಲಯದಲ್ಲಿ ತನ್ನದೇ ಆದ ಸ್ಥಾನವನ್ನು ಗಳಿಸಿಕೊಂಡಿದೆ.

ದೇಶದ ಪ್ರಮುಖ ಡಿಜಿಟಲ್‌ ಮಾಧ್ಯಮಗಳಲ್ಲಿ ಒಂದಾಗಿರುವ ʻದಿ ಫೆಡರಲ್ ʼ ತನ್ನ ಮೂರನೇ ಆವೃತ್ತಿ ʼದಿ ಫೆಡರಲ್ ಆಂಧ್ರಪ್ರದೇಶʼವನ್ನು ಆರಂಭಿಸಿದೆ.

ಇದು ದೇಶದ ಒಕ್ಕೂಟ ವ್ಯವಸ್ಥೆಯನ್ನು ಎತ್ತಿ ಹಿಡಿಯುವುದು ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲ ರಾಜ್ಯಗಳ ಸುದ್ದಿಗಳಿಗೆ ಪ್ರಾಮುಖ್ಯತೆ ಖಾತ್ರಿಗೊಳಿಸುವ ʼದ ಫೆಡರಲ್‌ʼ ನ ಆಶಯಕ್ಕೆ ಪೂರಕವಾಗಿ ವಿಸ್ತರಣೆಯಾಗಿರುವ ಮಾಧ್ಯಮ ಚಟುವಟಿಕೆ. ಮಾರ್ಚ್ 2019 ರಲ್ಲಿ ಇಂಗ್ಲಿಷ್ ಆವೃತ್ತಿಯನ್ನು ಪ್ರಾರಂಭಿಸಿದಾಗಿನಿಂದ ʼದ ಫೆಡರಲ್ʼ ತನ್ನ ರಾಜಿಯಾಗದ ಪತ್ರಿಕೋದ್ಯಮದ ಮೂಲಕ ದೇಶದ ಮಾಧ್ಯಮ ವಲಯದಲ್ಲಿ ತನ್ನದೇ ಆದ ಸ್ಥಾನವನ್ನು ಗಳಿಸಿಕೊಂಡಿದೆ.

ಪ್ರತ್ಯೇಕ ತೆಲುಗು ಆವೃತ್ತಿ

ʼದ ಫೆಡರಲ್‌ʼನ ಆಂಧ್ರಪ್ರದೇಶ ಆವೃತ್ತಿಯು ತೆಲಂಗಾಣ ಆವೃತ್ತಿಯಿಂದ ಪ್ರತ್ಯೇಕವಾಗಿದ್ದು,ತನ್ನದೇ ಸ್ವಂತ ತಂಡವನ್ನು ಹೊಂದಿದೆ. ಪ್ರತ್ಯೇಕ ಆಂಧ್ರಪ್ರದೇಶ ರಾಜ್ಯವನ್ನು ಸಂಪೂರ್ಣವಾಗಿ ಒಳಗೊಳ್ಳುವ ಆಶಯವನ್ನು ಹೊಂದಿದೆ. ʼದ ಫೆಡಲರ್‌ ಆಂಧ್ರಪ್ರದೇಶʼ ಹಾಗೂ ʼದ ಫೆಡರಲ್‌ ತೆಲಂಗಾಣʼ ಎರಡೂ ಆವೃತ್ತಿಗಳು ತೆಲುಗಿನಲ್ಲಿರುತ್ತವೆ.

ʻರಾಜ್ಯದ ಸುದ್ದಿಯ ಸಮಗ್ರ ನೋಟದ ಜೊತೆಗೆ ಹೊಸ ಆವೃತ್ತಿಯು ಕೇವಲ ಒಂದು ದಶಕದ ಹಿಂದೆ ತೆಲಂಗಾಣದಿಂದ ಬೇರ್ಪಟ್ಟ ಆಂಧ್ರಪ್ರದೇಶದ ವಿಶಿಷ್ಟ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಆಯಾಮಗಳನ್ನು ಪ್ರತಿಬಿಂಬಿಸುತ್ತದೆʼ ಎಂದು ʼದಿ ಫೆಡರಲ್‌ʼನ ಪ್ರಧಾನ ಸಂಪಾದಕ ಎಸ್. ಶ್ರೀನಿವಾಸನ್ ಹೇಳುತ್ತಾರೆ.

ಪ್ರಮುಖ ಇಂಗ್ಲಿಷ್ ಆವೃತ್ತಿ ಮತ್ತು ಇತ್ತೀಚೆಗೆ ಬಿಡುಗಡೆಯಾದ ಕರ್ನಾಟಕ ಆವೃತ್ತಿ ಸೇರಿದಂತೆ ಎಲ್ಲ ಆವೃತ್ತಿಗಳಲ್ಲಿ ಈ ಸಾಮಾನ್ಯ ಅಂಶ-ಆಶಯಗಳನ್ನು ನೋಡಬಹುದಾಗಿದೆ.

ʼದ ಫೆಡರಲ್‌ ಆಂಧ್ರಪ್ರದೇಶʼದ ಪ್ರಮುಖ ಆಶಯ

ಆಂಧ್ರಪ್ರದೇಶ ಆವೃತ್ತಿಯು ರಾಜ್ಯ ಕೇಂದ್ರಿತವಾಗಿರುವುದರ ಜೊತೆಗೆ, ಸುದ್ದಿಯ ಎಲ್ಲಾ ಆಯಾಮಗಳನ್ನು ಓದುಗರಿಗೆ ನೀಡುವ ಸದಾಶಯ ಹೊಂದಿದೆ ಮತ್ತು ರಾಜ್ಯದ ಜನರ ಮಾತೃ ಭಾಷೆಯಲ್ಲೇ ಅವರಿಗೆ ಸುದ್ದಿಯನ್ನು ನೀಡಬೇಕೆಂಬ ʼದ ಫೆಡರಲ್‌ʼನ ತತ್ವವನ್ನು ಪ್ರತಿಬಿಂಬಿಸುತ್ತದೆ.

ಆಂಧ್ರಪ್ರದೇಶ ಆವೃತ್ತಿಯು, ಕಳೆದೆರಡು ತಿಂಗಳುಗಳಲ್ಲಿ ಆರಂಭಗೊಂಡ ʼದ ಫೆಡರಲ್‌ʼನ ಇತರ ಆವೃತ್ತಿಗಳಿಗೆ ಬಂದ ಉತ್ತೇಜನಕಾರಿ ಪ್ರತಿಕ್ರಿಯೆಗಳನ್ನು ಆಧರಿಸಿ ಆರಂಭಗೊಂಡಿದೆ. ಮುಂಬರುವ ದಿನಗಳಲ್ಲಿ ʼದ ಫೆಡರಲ್‌ʼನ ಇನ್ನಿತರ ಆವೃತ್ತಿಗಳು ಕೂಡ ಆರಂಭವಾಗಲಿದ್ದು, ಆಯಾ ಭಾಷಾ ಓದುಗರಿಗೆ ಅವರದೇ ಭಾಷೆಯಲ್ಲಿ ಗುಣಮಟ್ಟದ ಸುದ್ದಿಯನ್ನು ನೀಡಲಿವೆ.

ʼದ ಫೆಡರಲ್ ಆಂಧ್ರಪ್ರದೇಶʼ ಸುದ್ದಿ ತಾಣಕ್ಕೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ...

Read More
Next Story