IPL 2024: ಹೊಡಿ-ಬಡಿ ಕ್ರಿಕೆಟ್: ಗರಿಷ್ಠ ಸ್ಕೋರ್ ಹೆಚ್ಚಳ
x

IPL 2024: ಹೊಡಿ-ಬಡಿ ಕ್ರಿಕೆಟ್: ಗರಿಷ್ಠ ಸ್ಕೋರ್ ಹೆಚ್ಚಳ


ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಮವಾರ(ಏಪ್ರಿಲ್ 15)ರ ರಾತ್ರಿ ನಡೆದ ಪಂದ್ಯದಲ್ಲಿ 20 ಓವರ್ ಕ್ರಿಕೆಟ್ ನಲ್ಲಿ ಎರಡನೇ ಬಾರಿ 300 ರನ್ ದಾಟುವ ಸಾಧ್ಯತೆ ಕಂಡುಬಂದಿತು. ಕಳೆದ ವರ್ಷ ಏಷ್ಯನ್ ಗೇಮ್ಸ್‌ ನಲ್ಲಿ ಮಂಗೋಲಿಯಾ ವಿರುದ್ಧ ನೇಪಾಳ 3 ವಿಕೆಟ್ ನಷ್ಟಕ್ಕೆ 314 ರನ್ ಗಳಿಸಿತ್ತು.

ಅಂತಾರಾಷ್ಟ್ರೀಯ, ದೇಶಿ, ಫ್ರಾಂಚೈಸಿ ಸೇರಿದಂತೆ ಎಲ್ಲ ಟಿ-20 ಪಂದ್ಯಗಳಲ್ಲಿ ಒಮ್ಮೆ ಮಾತ್ರ ತಂಡವೊಂದು 300 ರ ಗಡಿ ದಾಟಿದೆ. ಮಾರ್ಚ್ 24 ರಂದು ಮುಂಬೈ ಇಂಡಿಯನ್ಸ್ ವಿರುದ್ಧ 3 ವಿಕೆಟ್ ನಷ್ಟಕ್ಕೆ 277 ರನ್ ಗಳಿಸಿದ್ದ ಸನ್‌ ರೈಸರ್ಸ್ ಹೈದರಾಬಾದ್ ತಂಡ ಏಪ್ರಿಲ್ 15 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 22 ಸಿಕ್ಸರ್ ಬಾರಿಸಿದ್ದರಿಂದ ನೆರೆದಿದ್ದ ಪ್ರೇಕ್ಷಕರ ಸುರಕ್ಷತೆ ಬಗ್ಗೆ ಆತಂಕ ಸೃಷ್ಟಿಯಾಗಿತ್ತು.

ಅಂತಿಮವಾಗಿ ಸನ್ ರೈಸರ್ಸ್ ಹೈದರಾಬಾದ್ 3 ವಿಕೆಟ್ ನಷ್ಟಕ್ಕೆ 287 ರನ್ ಗಳಿಸಲು ಶಕ್ತವಾಯಿತು. ಕೇವಲ 287 ರನ್? ಹೌದು. ಟಿ 20 ಕ್ರಿಕೆಟ್ಟಿನ ಹೊಸ, ರೋಮಾಂಚಕ ಜಗತ್ತಿಗೆ ಸ್ವಾಗತ. ಇಲ್ಲಿ ಯಾವುದೇ ಭಾರಿ ಸ್ಕೋರ್ ಸುರಕ್ಷಿತವಲ್ಲ. ಆಕಾಶವೇ ಅಕ್ಷರಶಃ ಮಿತಿಯಾಗಿರುವ ಲೋಕವಿದು. ನೇಪಾಳ 300 ರನ್ ಕ್ಲಬ್ಬಿನಲ್ಲಿ ನೇಪಾಳದ ಜೊತೆಗೆ ಬೇರೆ ತಂಡಗಳು ಕಾಣಿಸಿಕೊಳ್ಳಲು ಹೆಚ್ಚು ಸಮಯ ಬೇಕಾಗುವುದಿಲ್ಲ.

ಕಲ್ಪನೆಯೇ? ಖಂಡಿತವಾಗಿಯೂ ಅಲ್ಲ. ಎಸ್ ಆರ್ ಎಚ್ ನ 277 ರನ್ ಗಳಿಗೆ ಉತ್ತರವಾಗಿ ಮುಂಬೈ ಇಂಡಿಯನ್ಸ್ 5 ವಿಕೆಟ್ ನಷ್ಟಕ್ಕೆ 246 ರನ್ ಗಳಿಸಿತು. ಪ್ರತಿ ಓವರ್ ಗೆ ಅಂದಾಜು 14 ರನ್ ಗಳನ್ನು ಸರಿದೂಗಿಸುವ ಬೆದರಿಕೆ ಹಾಕಿತ್ತು. ಆರ್ ಸಿಬಿ 7 ವಿಕೆಟ್ ನಷ್ಟಕ್ಕೆ 262 ರನ್ ಗಳಿಸುವ ಮೂಲಕ ಗರಿಷ್ಠ ಮೊತ್ತವನ್ನು ದಾಖಲಿಸಿತು, ಓವರ್ ಒಂದಕ್ಕೆ ಅಂದಾಜು 14.5 ರನ್ ಗಳಿಸುವ ಅಗತ್ಯವಿದ್ದು, ಆನಂತರ ಕೇವಲ 25 ರನ್ ಗಳಿಂದ ಸೋತಿತು. ನಾವು ಎಲ್ಲಿಗೆ ಹೋಗುತ್ತಿದ್ದೇವೆ?

ಈ ಭಾರಿ ಸ್ಕೋರ್ ಗಳು, ವಿಶೇಷವಾಗಿ ಐಪಿಎಲ್ ನಲ್ಲಿ, ಇನ್ನು ಮುಂದೆ ಎಲ್ಲೋ ಒಮ್ಮೆ ನಡೆಯುವ ಘಟನೆ ಎಂದುಕೊಳ್ಳಬೇಕಿಲ್ಲ. ಮತ್ತು, ಅದಕ್ಕೆ ಬಲವಾದ ಕಾರಣವಿದೆ; ಅದೆಂದರೆ ಐಪಿಎಲ್ 2023 ರಲ್ಲಿ ಪರಿಚಯಿಸಿದ ಇಂಪ್ಯಾಕ್ಟ್ ಪ್ಲೇಯರ್. ಇದು ಮುಂಬರುವ ದಿನಗಳಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳಲ್ಲೂ ವ್ಯಾಪಿಸುವ ಸಾಧ್ಯತೆಯಿದೆ.

ಇಂಪ್ಯಾಕ್ಟ್ ಪ್ಲೇಯರ್ ನಿಯಮವು ತಂಡಗಳಿಗೆ 12ನೇ ಆಯ್ಕೆಯ ಅವಕಾಶವನ್ನು ನೀಡುತ್ತದೆ. ಇಂಥ ಆಟಗಾರ ಯಾವುದೇ ಹಂತದಲ್ಲಿ ಹೊಸ ಸೇರ್ಪಡೆಯಾಗಿ ಅಂಕಣಕ್ಕೆ ಇಳಿಯಬಹುದು. ಇಂಪ್ಯಾಕ್ಟ್ ಸಬ್ ತನ್ನ ಕೋಟಾ ಪೂರ್ಣಗೊಳಿಸಿದ ಬೌಲರ್‌ ನ್ನು ಸ್ಥಳಾಂತರಿಸಿ, ತನ್ನ ನಾಲ್ಕು ಓವರ್ ಗಳನ್ನು ಎಸೆಯಬಹುದು. ಅಥವಾ, ತದ್ವಿರುದ್ಧವಾಗಿ, ಈಗಾಗಲೇ ಔಟ್ ಆದ ಬ್ಯಾಟ್ಸ್‌ ಮನ್‌ ಬದಲು ಬರಬಹುದು ಮತ್ತು ಅನಿರ್ಬಂಧಿತ ರೀತಿಯಲ್ಲಿ ಆಟ ಆಡಬಹುದು.

ಪಿಚ್‌ ಗಳು ಚಪ್ಪಟೆಯಾಯಾಗುತ್ತಿರುವ, ಬೌಂಡರಿಗಳು ಚಿಕ್ಕದಾಗುತ್ತಿರುವ, ಬ್ಯಾಟುಗಳು ಉತ್ತಮವಾಗುತ್ತಿರುವ ಮತ್ತು ಬ್ಯಾಟಿಗರು ಬಲಶಾಲಿ ಮತ್ತು ಹೆಚ್ಚು ಕೌಶಲ ಹೊಂದಿರುವ ಸಮಯದಲ್ಲಿ ಆರು ರನ್ ಹೊಡೆಯುವುದು ಕಲಾಪ್ರಕಾರವಾಗಿ ಬದಲಾಗಿದೆ. ಇದರಿಂದ ಬೌಲರುಗಳಿಗೆ ಅನ್ಯಾಯವಾಗಿದೆ. ಆದರೆ, ಈ ಬಗ್ಗೆ ಯಾರು ತಲೆ ಕೆಡಿಸಿಕೊಳ್ಳುತ್ತಾರೆ?

ಟಿ 20 ಕ್ರಿಕೆಟ್ ಎಂದರೆ ಚೆಂಡನ್ನು ಸ್ಟ್ಯಾಂಡ್ ಮತ್ತು ಅದರಾಚೆಗೆ ಹೊಡೆಯುವುದು. ಏಕೆಂದರೆ, ಅಭಿ ಮಾನಿಗಳು ನೋಡಲು ಬರುವುದು ಅದನ್ನೇ. ಕಡಿಮೆ ಸ್ಕೋರ್ ಪಂದ್ಯಗಳು ಸಾಂದರ್ಭಿಕವಾಗಿ ಪರಿಣಮಿಸಿವೆ. ಹಣ ಪಾವತಿಸುವ ಪ್ರೇಕ್ಷಕರ ದೃಷ್ಟಿಯಲ್ಲಿ ನೋಡಿದರೆ, ಅವು ಸ್ವಾಗತಾರ್ಹವಲ್ಲ. ವಾಸ್ತವವೆಂದರೆ, ಕಡಿಮೆ ಸ್ಕೋರ್ ಥ್ರಿಲ್ಲರ್ ನಿಂದ ಸಾವಿರಾರು ಜನರು ಕ್ರೀಡಾಂಗಣಗಳಿಂದ ದೂರ ಸರಿಯುತ್ತಾರೆ; ಆಂಡ್ರೆ ರಸೆಲ್ ಅಥವಾ ದಿನೇಶ್‌ ಕಾರ್ತೀಕ್ ಅವವರ ಬ್ಯಾಟಿನಿಂದ ಸಿಡಿಯುವ ಸಿಕ್ಸರ್‌ ಚೆಂಡು ಕೈಗೆ ಎತ್ತಿಕೊಳ್ಳಲು ಬಯಸುತ್ತಾರೆ.

ಇಂಪ್ಯಾಕ್ಟ್ ಪ್ಲೇಯರ್ ಗಳನ್ನು ಒಳಗೊಂಡ ಕಳೆದ ಐಪಿಎಲ್ ಋತುವಿನಲ್ಲಿ 74 ಪಂದ್ಯಗಳಲ್ಲಿ 35 ಬಾರಿ 200 ಕ್ಕಿಂತ ಹೆಚ್ಚುರನ್ ದಾಖಲಿಸಲಾಗಿದೆ. ಚೇಸ್‌ ಮಾಡಿದ ತಂಡಗಳು 12 ಪಂದ್ಯಗಳಲ್ಲಿ ಇಷ್ಟು ರನ್‌ ಗಳಿಸಿವೆ. ಏಳು ಸಂದರ್ಭಗಳಲ್ಲಿ ಎರಡೂ ಕಡೆಯವರು 200 ಕ್ಕೂ ಹೆಚ್ಚುರನ್ ಯಶಸ್ವಿಯಾಗಿ ಗಳಿಸಿದ್ದು, ಇಂಪ್ಯಾಕ್ಟ್‌ ಸಬ್ನ್ನು ಹೇಗೆ ಮತ್ತು ಯಾವಾಗ ಪರಿಣಾಮಕಾರಿಯಾಗಿ ಬಳಸಬಹುದು ಎಂಬುದರ ಬಗ್ಗೆ ಇನ್ನೂ ಹಿಡಿತ ಸಾಧಿಸುವುದರಲ್ಲಿದ್ದಾರೆ. ಈ ವರ್ಷ 30 ಪಂದ್ಯಗಳಲ್ಲಿ 200 ರನ್ 12 ಬಾರಿ ಗಳಿಸಲಾಗಿದೆ. ಆದರೆ ಆ ಮೈಲಿಗಲ್ಲು ದಾಟಿದ ಐದು ಚೇಸಿಂಗ್ ತಂಡಗಳಲ್ಲಿ ಕೇವಲ ಒಂದು ಮಾತ್ರ ಗೆಲುವು ಸಾಧಿಸಿದೆ. ಮುಂದಿನ ಆರು ವಾರಗಳಲ್ಲಿ ಇದು ಬದಲಾಗಲಿದೆ.

ಕಳೆದ ಒಂದೂವರೆ ಋತುವಿನಲ್ಲಿ ಮಾತ್ರ 20 ಓವರ್ ಗಳ ಆಟಕ್ಕೆ ಅಗತ್ಯ ಎನ್ನಲಾದ 'ನಿರ್ಭೀತಿ' ಐಪಿಎಲ್ ನಲ್ಲಿ ಪ್ರಕಟವಾಗುತ್ತಿದೆ. 135 ಅಥವಾ 140 ರನ್‌ ಗಳಿಕೆ ಹೆಚ್ಚಲ್ಲ ಎಂದು ಪರಿಗಣಿಸಲ್ಪಡು ತ್ತಿದೆ: ವಾಸ್ತವವಾಗಿ, ವಿರಾಟ್ ಕೊಹ್ಲಿ 156 ಮತ್ತು ರೋಹಿತ್ ಶರ್ಮಾ 166 ರನ್ ಗಳಿಸಿದ್ದಕ್ಕೆ ಟೀಕೆಗೆ ಗುರಿಯಾದರು

ಎಸ್ಆರ್ ಎಚ್ ಆರಂಭಿಕ ಜೋಡಿ ಅಭಿಷೇಕ್ ಶರ್ಮಾ ಮತ್ತು ಟ್ರಾವಿಸ್ ಹೆಡ್, ಕೋಲ್ಕತಾ ನೈಟ್ ರೈಡರ್ಸ್ನ ಫಿಲ್ ಸಾಲ್ಟ್ ಮತ್ತು ಸುನಿಲ್ ನರೇನ್, ಮುಂಬೈನ ರೋಹಿತ್ ಶರ್ಮಾ ಮತ್ತು ಇಶಾನ್ ಕಿಶನ್ ಮೊದಲ ಆರು ಓವರ್ಗಳಲ್ಲಿ ಗರಿಷ್ಠ ರನ್‌ ಗಳಿಕೆಗೆ ಹೊಸ ಆಯಾಮ ನೀಡಿದ್ದಾರೆ. ಮೊದಲ ಆರು ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 46 ರನ್ ಗಳಿಸಿ ಅವರು ತೃಪ್ತರಾಗಲಿಲ್ಲ; ಗುರಿ ಈಗ ಕನಿಷ್ಠ 65 ಆಗಿದೆ. ಒಂದುವೇಳೆ ಒಂದು ಅಥವಾ ಎರಡು ವಿಕೆಟ್ ಬಿದ್ದರೆ, ಹೋಗಲಿ ಬಿಡಿ. ಇಂಪ್ಯಾಕ್ಟ್ ಪ್ಲೇಯರ್ ಇದ್ದೇ ಇರುತ್ತಾರೆ.

ಇವೆಲ್ಲವೂ ಬೌಲರ್ ಗಳ ಮೇಲೆ ಅಪಾರ ಒತ್ತಡ ಹೇರಿದ್ದು, ಅವರು ಚೆಂಡು ಸ್ಟ್ಯಾಂಡಿನಲ್ಲಿ ಎಲ್ಲಿ ಬಿದ್ದಿದೆ ಎಂದು ನೋಡುತ್ತ ಕುತ್ತಿಗೆಯಲ್ಲಿ ಮುಳ್ಳುಗಳನ್ನು ಮೂಡಿಸಿಕೊಳ್ಳುವ ಸ್ಥಿತಿ ಬಂದಿದೆ. ಲಾಕಿ ಫರ್ಗುಸನ್ ಮತ್ತು ರೀಸ್ ಟಾಪ್ಲೆ, ಪ್ಯಾಟ್ ಕಮಿನ್ಸ್ ಮತ್ತು ಭುವನೇಶ್ವರ್ ಕುಮಾರ್ ಅವರಂತಹ ನಿಪುಣ ಚೆಂಡೆಸೆತಗಾರರನ್ನುನಿರ್ಲಕ್ಷಿಸುವುದು ಒಂದು ಕಠಿಣ ಅನುಭವ. ಜಸ್ಪ್ರೀತ್ ಬೂಮ್ರಾ ಅವರ ಚೆಂಡುಗಳನ್ನುಎಗ್ಗಿಲ್ಲದೆ ಬಾರಿಸುವುದನ್ನು ನೋಡಿದರೆ, ಚೆಂಡೆಸೆತದಲ್ಲಿ ಇಂಥ ಕೌಶಲ ಮತ್ತು ನಿಯಂತ್ರಣವನ್ನು ಹೊಂದಿರುವ ಎಷ್ಟು ಬೌಲರ್ ಗಳು ಇದ್ದಾರೆ?

ಎಸ್ಆರ್‌ಎಚ್‌ ತಂಡ 287 ರನ್ ಬೃಹತ್ ಮೊತ್ತ ಗಳಿಸಲು ಕಾರಣರಾದ, 39 ಎಸೆತಗಳಲ್ಲಿ ಶತಕ ಬಾರಿಸಿದ ಟ್ರಾವಿಸ್ ಹೆಡ್, ʻಮೂರಂಕಿಗೆ ಮೂರು ರನ್ ಅಗತ್ಯವಿದೆ ಅಲ್ಲವೇ?ʼ ಎಂದು ಕೇಳಿದ್ದರು. ಹೆಡ್ ಅವರದ್ದು ಐಪಿಎಲ್‌ ನ ನಾಲ್ಕನೇ ವೇಗದ ಶತಕವಾಗಿದ್ದು, ಅದ್ಭುತ ಚೆಂಡು ಹೊಡೆಯುವಿಕೆಯಿಂದ ಗುರುತಿಸ ಲ್ಪಟ್ಟಿದೆ. ʻಇದು ಸರಿಯಾದ ರೀತಿಯ ಬ್ಯಾಟಿಂಗ್. ನಾವು ಅಂಕಣದಲ್ಲಿರುವಾಗ ರೋಮಾಂಚನಗೊಳಿಸಲು ಬಯಸುತ್ತೇವೆ ಮತ್ತು ಇದೇ ರೀತಿ ಆಟ ಮುಂದುವರಿಸುತ್ತೇವೆ. ಪ್ಯಾಟ್ ಕಮಿನ್ಸ್(ತಂಡದ ನಾಯಕ) ಮತ್ತು ಡಾನ್ (ವೆಟ್ಟೋರಿ, ಮುಖ್ಯ ಕೋಚ್) ಬ್ಯಾಟಿಗರ ಮೇಲೆ ಒತ್ತಡ ಹೇರಿದ್ದಾರೆ. ನಾವು ಪವರ್ ಪ್ಲೇ ಯನ್ನು ಗರಿಷ್ಠಗೊಳಿಸಲು ಪ್ರಯತ್ನಿಸುತ್ತೇವೆʼ ಎಂದು ಹೇಳಿದರು.

ಇದ್ಯಾವುದೂ ಬೌಲರ್ ಗಳಿಗೆ ಸಂಗೀತವಲ್ಲ.ಅವರೆಲ್ಲರೂ 22 ಗಜ ದೂರದಿಂದ ಎಸೆದ ಚೆಂಡನ್ನುನಿರ್ದಯವಾಗಿ ಹೊಡೆಸಿಕೊಳ್ಳುವುದನ್ನು ಪ್ರತಿಭಟಿಸಲು ಒಕ್ಕೂಟವೊಂದನ್ನು ರಚಿಸಿಕೊಳ್ಳಲು ಯೋಚಿಸಬಹುದು. 20 ಓವರ್‌ ಕ್ರಿಕೆಟ್‌ ನಲ್ಲಿ ಬೌಲರ್‌ ಆಗಿರುವುದು ಮೋಜಿನ ಸಂಗತಿಯಲ್ಲವಾದ್ದರಿಂದ, ಪರ್ಯಾಯ ಉದ್ಯೋಗವನ್ನು ಹುಡುಕಲು ಮುಂದಾಗಬಹುದು. ಐಪಿಎಲ್ ನಲ್ಲಿ ಬ್ಯಾಟಿಗರು ಮತ್ತು ಚೆಂಡೆಸತಗಾರರ ನಡುವಿನ ಅಂತರವನ್ನು ಮತ್ತಷ್ಟು ವಿಸ್ತರಿಸುವ ಸಂಘಟಿತ ಪ್ರಯತ್ನದಿಂದಾಗಿ ಇದು ಸಮರ್ಪಕ ನಡೆ ಆಗಬಹುದು.

ಅಧಿಕ ಸ್ಕೋರ್, ಅದರ ಬೆನ್ನತ್ತುವಿಕೆ, ಭಾರಿ ಸಿಕ್ಸರ್ಗಳು ಮತ್ತುಅಡ್ಡಾದಿಡ್ಡಿ ಶಕ್ತಿ ಪ್ರದರ್ಶನ- ಇದು 20 ಓವರ್ ಕ್ರಿಕೆಟ್ಟಿನ ವೈಶಿಷ್ಟ್ಯವಾಗಿದ್ದು, ಭವಿಷ್ಯದಲ್ಲೂ ಇದು ಮುಂದುವರಿಯುತ್ತದೆ. ಅನೇಕ ರೀತಿಯಲ್ಲಿ ಟ್ರೆಂಡ್ ಸೆಟ್ಟರ್ ಆಗಿರುವ ಐಪಿಎಲ್, ಬ್ಯಾಟಿಂಗ್ ಜಗತ್ತಿಗೆ ಇಂಪ್ಯಾಕ್ಟ್ ಪ್ಲೇಯರ್ ಅನ್ನು ಉಡುಗೊರೆಯಾಗಿ ನೀಡಿದೆ. ಇನ್ನಿತರ ಪ್ರಭಾವಶಾಲಿ ಶಕ್ತಿಗಳು ಇದನ್ನು ಅನುಸರಿಸಲು ಮತ್ತು ರನ್ ಸುರಿಮಳೆಯನ್ನು ಇನ್ನಷ್ಟು ಎತ್ತರಕ್ಕೆ ಏರಿಸಲು ಎಷ್ಟು ಸಮಯ ಬೇಕಾಗಲಿದೆ?

Read More
Next Story