ನಿತೀಶ್‌ ಬಿಜೆಪಿಗೆ ಹೊರೆಯಾಗುವರೇ?
x
ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೊಂದಿಗೆ ಬಿಹಾರದ ರಾಜ್ಯಪಾಲ ರಾಜೇಂದ್ರ ಅರ್ಲೇಕರ್

ನಿತೀಶ್‌ ಬಿಜೆಪಿಗೆ ಹೊರೆಯಾಗುವರೇ?


ಬಿಹಾರದಲ್ಲಿ ಚುನಾವಣೆ ಪ್ರಚಾರ ಉತ್ತುಂಗವನ್ನು ತಲುಪುತ್ತಿದೆ. ಚುನಾವಣೆ ಸಭೆಗಳಲ್ಲಿ ಅನಿರೀಕ್ಷಿತ ನಡವಳಿಕೆ, ಎಡವಟ್ಟುಗಳು ಹಾಗೂ ಅಸಂಗತ ಮಾತುಗಳಿಂದ ಮುಖ್ಯಮಂತ್ರಿ ನಿತೀಶ್ ಕುಮಾರ್ ಬಿಜೆಪಿಗೆ ಹೊರೆಯಾಗಬಹುದು ಎಂಬ ಭಾವನೆ ಬೆಳೆಯುತ್ತಿದೆ. ಈ ಹಿಂದೆ ನಿತೀಶ್ ಅವರು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ)ದ ಸ್ಟಾರ್ ಪ್ರಚಾರಕರಾಗಿದ್ದರು ಮತ್ತು ಬಿಹಾರದಲ್ಲಿ ಸಭೆಗಳಲ್ಲಿ ಮಾತನಾಡುವ ಮೊದಲು ಬಿಜೆಪಿ ನಾಯಕರು ಅವರ ಒಪ್ಪಿಗೆ ಪಡೆಯುತ್ತಿದ್ದರು.

ಮೋದಿಯವರಿಗೆ ನಿಷೇಧ: ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ, ಬಿಹಾರದಲ್ಲಿ ಪ್ರಚಾರ ಮಾಡದಂತೆ ಅವರನ್ನು ನಿತೀಶ್‌ ತಡೆದಿದ್ದರು. ʻರಾಜ್ಯದವರೇ ಆದ ಮೋದಿ (ಅಂದಿನ ಬಿಹಾರ ಉಪ ಸಿಎಂ ಸುಶೀಲ್ ಕುಮಾರ್ ಮೋದಿ) ಇರುವಾಗ, ಬೇರೆ ಮೋದಿ ಅಗತ್ಯವಿಲ್ಲʼ ಎಂದು ಹೇಳಿದ್ದರು.

ಯಾರು ಪ್ರಚಾರ ಮಾಡಬೇಕೆಂಬುದನ್ನು ನಿತೀಶ್‌ ನಿರ್ಧರಿಸುತ್ತಿದ್ದರು; ಎಲ್‌.ಕೆ. ಆಡ್ವಾಣಿ, ಅರುಣ್ ಜೇಟ್ಲಿ, ರಾಜನಾಥ್ ಸಿಂಗ್, ಶತ್ರುಘ್ನ ಸಿನ್ಹಾ ಮತ್ತು ಹೇಮಾ ಮಾಲಿನಿ ಅವರಂತಹವರಿಗೆ ಮಾತ್ರ ಪ್ರಚಾರಕ್ಕೆ ಅವಕಾಶ ನೀಡಿದ್ದರು. ಮುಸ್ಲಿಮರನ್ನು ಒಲಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ಅವರು, 2009 ರ ಲೋಕಸಭೆ ಮತ್ತು 2010 ರ ವಿಧಾನಸಭೆ ಚುನಾವಣೆಗಳಿಗೆ ನರೇಂದ್ರ ಮೋದಿಯವರ ಬಿಹಾರ ಭೇಟಿಯನ್ನು ವಿರೋಧಿಸಿದ್ದರು. ಮೋದಿಯವರ ಹಿಂದುತ್ವ ಅಜೆಂಡಾ ಮುಸ್ಲಿಂ ಮತದಾರರ ಮೇಲೆ 'ನಕಾರಾತ್ಮಕ ಪರಿಣಾಮ' ಬೀರಬಹುದು ಎಂದು ಬಿಜೆಪಿ ನಾಯಕತ್ವಕ್ಕೆ ಸ್ಪಷ್ಟವಾಗಿ ಹೇಳಿದ್ದರು. ಆಗಲೂ ಮೋದಿ ಅವರು ಬಿಜೆಪಿಯ ಅತ್ಯಂತ ಬೇಡಿಕೆಯ ಪ್ರಚಾರಕರಾಗಿದ್ದರು ಮತ್ತು ಗುಜರಾತ್ ಹೊರತುಪಡಿಸಿ, ದೇಶಾದ್ಯಂತ 86 ಲೋಕಸಭೆ ಕ್ಷೇತ್ರಗಳಲ್ಲಿ ಪ್ರವಾಸ ಮಾಡಿದ್ದರು.

2002 ರ ಗೋಧ್ರಾ ಗಲಭೆ ನಂತರ ಮತ್ತು 2014 ರ ಲೋಕಸಭೆ ಚುನಾವಣೆಗೆ ಮುನ್ನ ಯಾವುದೇ ಚುನಾವಣೆಯಲ್ಲಿ ಮೋದಿ ಅವರು ಬಿಜೆಪಿ ಅಥವಾ ಎನ್‌ಡಿಎ ಪರ ಪ್ರಚಾರ ಮಾಡಲಿಲ್ಲ.

ಪ್ರಧಾನಿ ಸ್ಥಾನದ ಗುರಿ: ಪ್ರಧಾನಿ ಹುದ್ದೆಯ ಆಕಾಂಕ್ಷೆ ಬೆಳೆಸಿಕೊಂಡ ಅವರು, ತಾವು ಮೋದಿಗಿಂತ ಶ್ರೇಷ್ಠ ಎಂದುಕೊಂಡಿದ್ದರು. 2009 ರಲ್ಲಿ ಲುಧಿಯಾನದಲ್ಲಿ ನಡೆದ ಸಭೆಯಲ್ಲಿ ತೆಗೆದ 5 ಕೋಟಿ ರೂ. ಪ್ರವಾಹ ಪರಿಹಾರ ನೀಡಿದ ಮೋದಿಯವರಿಗೆ ನಿತೀಶ್‌ ಧನ್ಯವಾದ ಸಲ್ಲಿಸುತ್ತಿ ರುವಂತೆ ಕಾಣಿಸುತ್ತಿದ್ದ ಪೋಟೋ, ಆನಂತರ ವಿವಾದಕ್ಕೆ ಕಾರಣವಾಯಿತು. 2010ರಲ್ಲಿ ಈ ಪೋಟೋ ಪಾಟ್ನಾದಲ್ಲಿ ನಡೆದ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ವೇಳೆ ಬಿಹಾರದ ದಿನಪತ್ರಿಕೆಗಳ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿತು. ಕೆರಳಿದ ನಿತೀಶ್, ಬಿಜೆಪಿ ನಾಯಕರಿಗೆ ನೀಡಲು ಉದ್ದೇಶಿಸಿದ್ದ ಔತಣಕೂಟವನ್ನು ರದ್ದುಪಡಿಸಿ ಸಹಾಯಧನವನ್ನು ಹಿಂದಿರುಗಿಸಿದರು. 2010 ರಲ್ಲಿ ವಿಧಾನಸಭೆ ಚುನಾವಣೆ ವೇಳೆ ಬಿಹಾರದಲ್ಲಿ ವರುಣ್ ಗಾಂಧಿ ಪ್ರಚಾರ ಮಾಡದಂತೆ ತಡೆದಿದ್ದರು. 2013 ರಲ್ಲಿ ನಿತೀಶ್ ಎನ್‌ಡಿಎಯಿಂದ ದೂರವಾದ ನಂತರವಷ್ಟೇ 2014 ರ ಲೋಕಸಭೆ ಚುನಾವಣೆ ಪ್ರಚಾರಕ್ಕೆ ಮೋದಿ ಅವರು ಬಿಹಾರಕ್ಕೆ ಕಾಲಿಟ್ಟರು.

ಸ್ಟಾರ್ ಪ್ರಚಾರಕರಾದ ಅವರ ವಿಷಯ ನಿರೂಪಣೆ, ಖಚಿತ ಭರವಸೆಗಳು ಮತ್ತು ಕ್ರಮಗಳು ಸ್ಪಷ್ಟವಾಗಿದ್ದವು. ಅವರು ಬಿಹಾರದ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿದ್ದಾರೆ ಎಂಬ ಅಂಶ ಪ್ರತಿಬಿಂಬಿಸಲ್ಪಟ್ಟಿತು.

ಕಳಪೆ ಪ್ರಚಾರ: ಈಗ, ನಿತೀಶ್ ಅವರ ಚುನಾವಣೆ ಭಾಷಣಗಳು ಬಹುಮಟ್ಟಿಗೆ ಅಸಂಬದ್ಧ ಮತ್ತು ನೀರಸವಾಗಿರುತ್ತವೆ. ಏಕೆ ಮತಗಳನ್ನು ಕೇಳುತ್ತಿದ್ದಾರೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ನುಡಿಗಟ್ಟುಗಳು ಅಸ್ಪಷ್ಟ ಮತ್ತು ಪುನರಾವರ್ತಿತವಾಗಿರುತ್ತವೆ. ಪ್ರತಿಸ್ಪರ್ಧಿಗಳ ಮೇಲೆ ಕಟು ದಾಳಿಗಳು ಕಾಣೆಯಾಗಿವೆ. ʻಹಿಂದೆ ಏನೂ ಆಗಿರಲಿಲ್ಲ ... ನಾನು ಬಹಳಷ್ಟು ಕೆಲಸ ಮಾಡಿದ್ದೇನೆ,ʼ ಇದು ಈಗಿನ ಸಾಮಾನ್ಯ ಪಲ್ಲವಿ. ಅವರ ಆರೋಗ್ಯ ಕೈಕೊಡುತ್ತಿದೆಯೇ? ಗೊತ್ತಿಲ್ಲ. ಆದರೆ, ಅವರ ಮಾತಿನ ತೀಕ್ಷ್ಣತೆ, ವಾಗ್ದಾಳಿ ಮಾಯವಾಗಿವೆ. ಅವರ ಮಾತುಗಳು ಜನರನ್ನು ಸ್ಪರ್ಶಿಸುವುದಿಲ್ಲ ಮತ್ತು ಪ್ರಮಾದ ಎಸಗಿದಾಗ ಸರಿಪಡಿಸಬೇಕಾಗುತ್ತದೆ.

ನವಾಡದಲ್ಲಿ ನಡೆದ ರ‍್ಯಾಲಿಯಲ್ಲಿ ಪ್ರಧಾನಿ ಅವರೊಂದಿಗೆ ವೇದಿಕೆ ಹಂಚಿಕೊಂಡ ಅವರು, '4,000 ಲೋಕಸಭೆ ಸ್ಥಾನಗಳಲ್ಲಿ ಎನ್‌ಡಿಎ ಗೆಲುವು ಖಚಿತಪಡಿಸುʼವಂತೆ ಜನರನ್ನು ಹುರಿದುಂಬಿಸಿದರು. ʻಚಾರ್ ಲಾಕ್‌ ' ಎಂದು ತಡವರಿಸಿದರು; 'ಚಾರ್ ಹಜಾರ್ ಸೇ ಭಿ ಜ್ಯಾದಾʼ (4,000 ಕ್ಕಿಂತ ಹೆಚ್ಚು)' ಎಂದಿದ್ದು ಕೇಳಿಬಂತು. ಇದು ಪ್ರಧಾನಿಯವರ ಇರಿಸುಮುರುಸಿಗೆ ಕಾರಣವಾಯಿತು.

ಆನಂತರ, ನಿತೀಶ್ ಅವರು ಮೋದಿಯವರ ಪಾದ ಸ್ಪರ್ಶಕ್ಕೆ ಮುಂದಾದರು: ಆನಂತರ ಕೈ ಮುಗಿದು ಸ್ವಾಗತಿಸಿದರು. ಇತ್ತೀಚಿನ ಛಾಯಾಚಿತ್ರದಲ್ಲಿ ಅವರು ಲಾಲು ಪ್ರಸಾದ್ ಅವರ ಪಕ್ಷದಿಂದ ಟಿಕೆಟ್ ನಿರಾಕರಿಸಲ್ಪಟ್ಟ ಕತಿಹಾರ್ ಸಂಸದ ಅಶ್ಫಾಕ್ ಕರೀಮ್ ಅವರ ಮೊಣಕಾಲುಗಳ ಕಡೆಗೆ ಬಾಗುತ್ತಿರುವುದನ್ನು ಕಾಣಬಹುದು.

ಅಸಮಂಜಸ ನಡವಳಿಕೆ: ಸಾರ್ವಜನಿಕ ಸಭೆಗಳಲ್ಲಿ ಅವರ ಅಸಮರ್ಪಕ ವರ್ತನೆ ಜನರ ಗಮನಕ್ಕೆ ಬಂದಿದೆ. ವಿರೋಧಿಗಳಿಂದ ಟೀಕೆಗೆ ಕಾರಣವಾಗಿದೆ. 'ಸೂಕ್ತ ಮಾನಸಿಕ ಆರೋಗ್ಯ' ಹೊಂದಿಲ್ಲ ಎಂಬ ಅನುಮಾನವಿದೆ. ನಿತೀಶ್ ಈಗ ಹೊರೆಯಾಗಿದ್ದಾರೆ ಎಂದು ಹಲವು ಬಿಜೆಪಿ ನಾಯಕರು ಭಾವಿಸಿದ್ದಾರೆ.

ವಾಸ್ತವವಾಗಿ, ಜನವರಿಯಲ್ಲಿ ಅವರು ಬಿಜೆಪಿಯೊಂದಿಗೆ ಕೈಜೋಡಿಸುವುದಕ್ಕಿಂತ ಮುಂಚೆಯೇ ಅಸಂಗತ ನಡವಳಿಕೆ ಮತ್ತು ಅಸಮಂಜಸತೆ ಸ್ಪಷ್ಟವಾಗಿ ಕಂಡುಬರುತ್ತಿತ್ತು. ವಿಧಾನಮಂಡಲದ ಉಭಯ ಸದನಗಳಲ್ಲಿ ಹಲವು ಬಾರಿ ಬಾಯಿ ತಪ್ಪಿ ಮಾತು ಬಂದಿದೆ. ಜನಸಂಖ್ಯೆ ನಿಯಂತ್ರಿಸಲು ಸುರಕ್ಷಿತ ಲೈಂಗಿಕತೆಯ ಅಗತ್ಯ ಕುರಿತು ಮಾತನಾಡುವಾಗ ಅವರ ಹಾವಭಾವ ಟೀಕೆಗೆ ಗುರಿಯಾಯಿತು. ವಿಧಾನಸಭೆಯಲ್ಲಿ ನಡೆದ ಚರ್ಚೆ ವೇಳೆ ತಾಳ್ಮೆ ಕಳೆದುಕೊಂಡು, ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ವಿರುದ್ಧ ಅವಹೇಳನಕಾರಿ ಪದ ಬಳಸಿದರು. ಕಾಂಗ್ರೆಸ್ ಮತ್ತು ಆರ್‌ಜೆಡಿ ಜೊತೆಗಿನ ಮಹಾಘಟಬಂಧನ್ ಭಾಗವಾಗಿದ್ದಾಗ, ತಮ್ಮನ್ನು 'ಮಾಜಿ ಕೇಂದ್ರ ಗೃಹ ಸಚಿವ' ಎಂದು ಹೇಳಿಕೊಂಡಿದ್ದರು. ಇದು ಬಿಜೆಪಿ ನಾಯಕರನ್ನು ದಿಗ್ಭ್ರಮೆಗೊಳಿಸಿತ್ತು.

ರೋಡ್ ಶೋಗಳತ್ತ ಲಕ್ಷ್ಯ: ಜೆಡಿಯು ಈಗ ಪ್ರಚಾರದ ವಿಧಾನವನ್ನು ಮಾರ್ಪಡಿಸಿದೆ ಎಂದು ವರದಿಯಾಗಿದೆ. ನಿತೀಶ್ ಸಾರ್ವಜನಿಕ ಸಭೆಗಳ‌ಲ್ಲಿ ಮತ್ತು ರೋಡ್‌ಶೋ ಮೂಲಕ ಪ್ರಚಾರ ಮಾಡುತ್ತಾರೆ. ಸಾರ್ವಜನಿಕ ಸಭೆಯಲ್ಲಿ ಲಿಖಿತ ಭಾಷಣ ಓದುತ್ತಾರೆ. 'ಚಾಣಕ್ಯ' ಎಂದು ಹೆಸರಾದ ನಿತೀಶ್, ಹಲವು ಚುನಾವಣೆಗಳನ್ನು ಗೆದ್ದಿದ್ದಾರೆ. ಪ್ರಾಯೋಗಿಕ ರಾಜಕೀಯದೊಂದಿಗೆ ಜಾತ್ಯತೀತತೆಯನ್ನು ಮಿಶ್ರ ಮಾಡಿದ್ದಾರೆ. ನಿಗರ್ವಿ ವ್ಯಕ್ತಿತ್ವ ಮತ್ತು ಘನತೆಯ ವರ್ತನೆ ಬೇರೆ ರಾಜಕಾರಣಿಗಳಿಂದ ಅವರನ್ನು ಪ್ರತ್ಯೇಕಿಸುತ್ತದೆ. ಆದರೆ, ಲೋಕಸಭೆ ಚುನಾವಣೆಯಲ್ಲಿ 2019 ರ ಸಾಧನೆಯನ್ನು ಪುನರಾವರ್ತಿಸಲು ವಿಫಲವಾದರೆ, ಅವರ ಇಮೇಜ್ ಕಳೆದುಹೋಗುತ್ತದೆ.

Read More
Next Story