ಹಿರಿಯ ನಾಗರಿಕರು, ವಿಶೇಷಚೇತನ ಮತದಾರರಿಗೆ ರಾಪಿಡೊ ಉಚಿತ ಸವಾರಿ
x

ಹಿರಿಯ ನಾಗರಿಕರು, ವಿಶೇಷಚೇತನ ಮತದಾರರಿಗೆ ರಾಪಿಡೊ ಉಚಿತ ಸವಾರಿ


ಹೊಸದಿಲ್ಲಿ, ಏ. 24- ರಾಪಿಡೊ ತನ್ನ ʻಸವಾರಿಜಿಮ್ಮೇದಾರಿಕಿʼ ಉಪಕ್ರಮದಡಿ ಕರ್ನಾಟಕದಲ್ಲಿ ವಿಶೇಷಚೇತನರು ಮತ್ತು ಹಿರಿಯ ನಾಗರಿಕ ಮತದಾರರಿಗೆ ಉಚಿತ ಬೈಕ್ ಟ್ಯಾಕ್ಸಿ, ಆಟೋ ಮತ್ತು ಕ್ಯಾಬ್ ಸವಾರಿ ನೀಡಲಿದೆ.

ಬೆಂಗಳೂರು, ಮೈಸೂರು ಮತ್ತು ಮಂಗಳೂರಿನ ಮತದಾರರು ಏಪ್ರಿಲ್ 26 ರಂದು 'VOTENOW' ಕೋಡ್ ಬಳಸಿಕೊಂಡು ಮತದಾನದ ಪಾಯಿಂಟ್‌ಗಳಿಗೆ ಉಚಿತ ಸವಾರಿ ಪಡೆಯಬಹುದು.

ʻಚುನಾವಣೆ ಆಯೋಗ (ಇಸಿಐ) ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಹಯೋಗದಲ್ಲಿ ಬೆಂಗಳೂರಿನಲ್ಲಿರುವ ವಿಶೇಷಚೇತನರು ಮತ್ತು ಹಿರಿಯ ನಾಗರಿಕ ಮತದಾರರಿಗೆ ಉಚಿತ ಆಟೋ ಮತ್ತು ಕ್ಯಾಬ್ ಸವಾರಿ ನೀಡಲಾಗುತ್ತದೆ ,ʼ ಎಂದು ರಾಪಿಡೊ ಹೇಳಿಕೆ ತಿಳಿಸಿದೆ. ʻವಿಶೇಷಚೇತನರು ಮತ್ತು ಹಿರಿಯ ನಾಗರಿಕ ಮತದಾರರಿಗೆ ಪ್ರಜಾಸತ್ತಾತ್ಮಕ ಹಕ್ಕು ಚಲಾಯಿಸಲು ಸಮಾನಾವಕಾಶ ನೀಡಲು ಈ ಉಪಕ್ರಮವನ್ನು ಕೈಗೊಳ್ಳಲಾಗಿದೆʼ ಎಂದು ರಾಪಿಡೋದ ಸಹ ಸಂಸ್ಥಾಪಕ ಪವನ್ ಗುಂಟುಪಲ್ಲಿ ಹೇಳಿದ್ದಾರೆ.

Read More
Next Story