
ಆದಿವಾಸಿಗಳ ಭೂಮಿ ಉದ್ಯಮಿಗಳಿಗೆ ನೀಡಲಿರುವ ಬಿಜೆಪಿ: ರಾಹುಲ್ ಗಾಂಧಿ
ಚೈಬಾಸಾ (ಜಾರ್ಖಂಡ್), ಮೇ 7- ಪ್ರಧಾನಿ ನರೇಂದ್ರ ಮೋದಿ ಅವರು ಆದಿವಾಸಿಗಳಿಗೆ ಸೇರಿದ 'ನೀರು, ಕಾಡು, ಭೂಮಿ' ಯನ್ನು ಉದ್ಯಮಿಗಳಿಗೆ ಹಸ್ತಾಂತರಿಸಲು ಬಯಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ದೂರಿದ್ದಾರೆ.
ಜಾರ್ಖಂಡ್‌ನ ಚೈಬಾಸಾದಲ್ಲಿ ಮಾತನಾಡಿ, ಅಧಿಕಾರಕ್ಕೆ ಬಂದರೆ ಕೋಟ್ಯಂತರ ಜನರನ್ನು 'ಲಕ್ಷಪತಿ' ಮಾಡುವುದಾಗಿ ಭರವಸೆ ನೀಡಿದರು. ʻಈ ಲೋಕಸಭೆ ಚುನಾವಣೆ ಸಂವಿಧಾನ, ಆದಿವಾಸಿಗಳು, ಬಡವರು ಮತ್ತು ಹಿಂದುಳಿದವರ ಹಕ್ಕುಗಳನ್ನು ಉಳಿಸುವುದಕ್ಕಾಗಿ ನಡೆಯುತ್ತಿದೆ. ಇಂಡಿಯ ಒಕ್ದಕೂಟದ ನಾಯಕರು ಸಂವಿಧಾನವನ್ನು ಉಳಿಸಲು ಪ್ರಾಣ ತ್ಯಾಗ ಮಾಡಲು ಸಿದ್ಧರಾಗಿದ್ದಾರೆʼ ಎಂದು ಹೇಳಿದರು.
ʻ14-15 ಕೈಗಾರಿಕೋದ್ಯಮಿಗಳಿಗೆ ಆದಿವಾಸಿಗಳ 'ಜಲ, ಜಂಗಲ್, ಜಮೀನ್' ಹಸ್ತಾಂತರಿಸಲು ಪ್ರಧಾನಿ ಬಯಸಿದ್ದಾರೆ. 10 ವರ್ಷ ಅಧಿಕಾರಾ ವಧಿಯಲ್ಲಿ 22 ಜನರನ್ನು ಕೋಟ್ಯಧಿಪತಿಗಳನ್ನಾಗಿ ಮಾಡಿದ್ದಾರೆ. ಕಾಂಗ್ರೆಸ್ ಗೆ ಮತ ಹಾಕಿದರೆ ಕೋಟ್ಯಂತರ ಮಂದಿಯನ್ನು ಲಕ್ಷಪತಿಗಳನ್ನಾಗಿ ಮಾಡುತ್ತೇವೆ,ʼ ಎಂದು ಭರವಸೆ ನೀಡಿದರು. ʻಬಡ ಮಹಿಳೆಯರಿಗೆ ವಾರ್ಷಿಕ 1 ಲಕ್ಷ ರೂ. ಹಾಗೂ ನಿರುದ್ಯೋಗಿ ಡಿಪ್ಲೊಮಾ- ಪದವೀಧರರಿಗೆ ಒಂದು ವರ್ಷ ಶಿಷ್ಯವೇತನ ನೀಡಲಾಗುತ್ತದೆʼ ಎಂದು ಹೇಳಿದರು.