ಪ್ರಧಾನಿಯಿಂದ ಆಂಧ್ರಕ್ಕೆ ವಂಚನೆ; ವೈ.ಎಸ್. ಶರ್ಮಿಳಾ
x

ಪ್ರಧಾನಿಯಿಂದ ಆಂಧ್ರಕ್ಕೆ ವಂಚನೆ; ವೈ.ಎಸ್. ಶರ್ಮಿಳಾ


ಮೇ 8-ಪ್ರಧಾನಿ ಕಳೆದ ಹತ್ತು ವರ್ಷದಿಂದ ರಾಜ್ಯಕ್ಕೆ ಮೋಸ ಮಾಡಿದ್ದು, ಅವರು ರಾಜ್ಯಕ್ಕೆ ಪ್ರವೇಶಿಸಲು ಅನರ್ಹರು ಎಂ ದು ಆಂಧ್ರಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ವೈ.ಎಸ್. ಶರ್ಮಿಳಾ ಅವರು ಪ್ರಧಾನಿಯನ್ನು ಟೀಕಿಸಿದ್ದಾರೆ.

ʻ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಅವರು ಆಂಧ್ರಕ್ಕಾಗಿ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ನೀವು ರಾಜ್ಯ ಪ್ರವೇಶಿಸಲು ಅನರ್ಹರು. ಮೊದಲು ಆಂಧ್ರಪ್ರದೇಶದ ಜನರ ಕ್ಷಮೆ ಕೇಳಿ. 10 ವರ್ಷಗಳಿಂದ ರಾಜ್ಯಕ್ಕೆ ಮೋಸ ಮಾಡಿದ್ದೀರಿ,ʼ ಎಂದು ಬುಧವಾರ ಕಡಪಾದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ತೆಲುಗರ 'ಮನ್ ಕಿ ಬಾತ್': ರೇಡಿಯೊ ಪ್ರದರ್ಶಿಸಿದ ಅವರು, ʻತೆಲುಗು ಜನರ 'ಮನ್ ಕಿ ಬಾತ್' ಕೇಳಲು ಪ್ರಧಾನಿಗೆ ಉಡುಗೊರೆಯಾಗಿ ರೇಡಿಯೋ ಕಳುಹಿಸುತ್ತಿದ್ದೇವೆ. ಅವರು ಚುನಾವಣೆ ಕಾರಣದಿಂದ ಬರುತ್ತಿದ್ದಾರೆಯೇ ಹೊರತು ರಾಜ್ಯದ ಅಭಿವೃದ್ಧಿಗಾಗಿ ಅಲ್ಲʼ ಎಂದು ಹೇಳಿದರು. ಆಂಧ್ರಪ್ರದೇಶಕ್ಕೆ ನೀಡಿರುವ ಭರವಸೆಗಳನ್ನು ಈಡೇರಿಸುವಂತೆ ಪ್ರಧಾನಿಗೆ ಸವಾಲು ಹಾಕಿದ ಅವರು, ಈ ಸಂಬಂಧ ಅಫಿಡವಿಟ್ ನೀಡುವಂತೆ ಒತ್ತಾಯಿಸಿದರು ಮತ್ತು ಪ್ರಶ್ನೆಗಳ ಸರಮಾಲೆಯನ್ನು ಮುಂದಿಟ್ಟರು.

ವಿಶೇಷ ಸ್ಥಾನಮಾನ ಸ್ಥಿತಿ: ಸಂಸತ್ತಿನಲ್ಲಿ ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನದ ಭರವಸೆ ನೀಡಿದ ನಂತರವೂ ಆಂಧ್ರಪ್ರದೇಶಕ್ಕೆ ಏಕೆ ವಂಚಿಸಲಾಗಿದೆ? ಪೊಲಾವರಂ ಯೋಜನೆಯ ಎತ್ತರವನ್ನು ಕಡಿಮೆ ಮಾಡುವ ಮೂಲಕ ಅದನ್ನುನಿರರ್ಥಕಗೊಳಿಸಿರುವುದು ಸೇರಿದಂತೆ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರ ಹಿಮ್ಮುಖ ನಡೆಯನ್ನು ಏಕೆ ತಡೆಯಲಿಲ್ಲ? ಮೋದಿಯವರು ಅಡಿಪಾಯ ಹಾಕಿದ ಅಮರಾವತಿ ರಾಜಧಾನಿ 10 ವರ್ಷಗಳು ಕಳೆದರೂ ಏಕೆ ಸಾಕಾರಗೊಂಡಿಲ್ಲ? ವಿಶಾಖಪಟ್ಟಣಂ ರೈಲ್ವೇ ವಲಯದ ವಿಭಜನೆ ಭರವಸೆ ಏಕೆ ಸಾಕಾರಗೊಂಡಿಲ್ಲ ಎಂದು ಪ್ರಶ್ನಿಸಿದರು.

ಕಡಪ ಲೋಕಸಭೆ ಕ್ಷೇತ್ರದಲ್ಲಿ ಶರ್ಮಿಳಾ ಅವರು ವೈಎಸ್‌ಆರ್‌ಸಿಪಿಯ ಅಭ್ಯರ್ಥಿ, ತಮ್ಮ ಸೋದರ ಸಂಬಂಧಿ ವೈ.ಎಸ್ .ಅವಿನಾಶ್ ರೆಡ್ಡಿ ವಿರುದ್ಧ ಸ್ಪರ್ಧಿಸಿದ್ದಾರೆ. ಇಂಡಿಯ ಒಕ್ಕೂಟದಲ್ಲಿ ಸಿಪಿಐ, ಕಾಂಗ್ರೆಸ್ ಮತ್ತು ಸಿಪಿಐ (ಎಂ) ಇವೆ. 175 ಸದಸ್ಯ ಬಲದ ವಿಧಾನಸಭೆ ಮತ್ತು 25 ಲೋಕಸಭೆ ಸ್ಥಾನಗಳಿಗೆ ಮೇ 13ರಂದು ಚುನಾವಣೆ ನಡೆಯಲಿದೆ.

Read More
Next Story