ನಾಗಾಲ್ಯಾಂಡ್‌: ಆರು ಜಿಲ್ಲೆಗಳಲ್ಲಿ ಚುನಾವಣೆ ಬಹಿಷ್ಕಾರ
x

ನಾಗಾಲ್ಯಾಂಡ್‌: ಆರು ಜಿಲ್ಲೆಗಳಲ್ಲಿ ಚುನಾವಣೆ ಬಹಿಷ್ಕಾರ


ಪೂರ್ವ ನಾಗಾಲ್ಯಾಂಡ್ ಪೀಪಲ್ಸ್ ಆರ್ಗನೈಸೇಶನ್ (ಇಎನ್‌ಪಿಒ) ಚುನಾವಣೆಯನ್ನು ಬಹಿಷ್ಕರಿಸಲು ಕರೆ ನೀಡಿದ್ದರಿಂದ, ನಾಗಾಲ್ಯಾಂಡ್‌ನ ಆರು ಜಿಲ್ಲೆಗಳಲ್ಲಿ ಶುಕ್ರವಾರ ಮತದಾನ ನಡೆದಿಲ್ಲ.

ಪ್ರದೇಶಕ್ಕೆ ಹೆಚ್ಚಿನ ಆರ್ಥಿಕ ಸ್ವಾಯತ್ತೆಯೊಂದಿಗೆ ಪ್ರತ್ಯೇಕ ಆಡಳಿತವನ್ನು ಕೇಳುತ್ತಿರುವ ಏಳು ನಾಗಾ ಗುಂಪುಗಳ ಉನ್ನತ ಸಂಸ್ಥೆಯಾ ದ ಇಎನ್‌ಪಿಒ, ʻಸಾರ್ವಜನಿಕ ತುರ್ತುಸ್ಥಿತಿʼಯನ್ನು ಘೋಷಿಸಿದೆ ಮತ್ತು ಚುನಾವಣೆಯಿಂದ ದೂರವಿರಲು ಜನರಿಗೆ ತಿಳಿಸಿದೆ.

ಇಸಿ ನೋಟಿಸ್: ಪ್ರಾಂತ್ಯದ ಮುಖ್ಯ ಚುನಾವಣೆ ಅಧಿಕಾರಿ, ಇಎನ್‌ಪಿಒ ಚುನಾವಣೆ ಪ್ರಕ್ರಿಯೆಯನ್ನು ಅಡ್ಡಿಪಡಿಸುತ್ತಿದೆ ಎಂದು ಆರೋಪಿಸಿ, ನೋಟಿಸ್ ನೀಡಿದ್ದಾರೆ. ʻಮತ ಚಲಾಯಿಸಲು ಅಡ್ಡಿಪಡಿಸುವ ಮೂಲಕ ಅನಗತ್ಯ ಪ್ರಭಾವ ಬಳಸಲು ಪ್ರಯತ್ನಿಸಲಾಗಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 171ಸಿ ಅಡಿಯಲ್ಲಿ ಏಕೆ ಕ್ರಮ ತೆಗೆದುಕೊಳ್ಳಬಾರದು?ʼ ಎಂದು ಕೇಳಿದೆ.

ಪ್ರತಿಕ್ರಿಯಿಸಿರುವ ಇಎನ್‌ಪಿಒ, ಪೂರ್ವ ನಾಗಾಲ್ಯಾಂಡ್ ಪ್ರದೇಶದಲ್ಲಿ ಗಲಭೆ ಮತ್ತು ಸಮಾಜ ವಿರೋಧಿಗಳಿಂದ ಅಪಾಯವನ್ನು ಕಡಿಮೆ ಮಾಡುವುದು ತನ್ನ ಉದ್ದೇಶ ಎಂದು ಹೇಳಿದೆ. ಇದು ಜನರ ʻಸ್ವಯಂಪ್ರೇರಿತʼ ಕ್ರಮ. ಸೆಕ್ಷನ್ 171ಸಿ ಅನ್ವಯಿಸುವುದಿಲ್ಲ ಎಂದು ಸಮರ್ಥಿಸಿಕೊಂಡಿದೆ.

ಮಾರ್ಚ್ 8 ರಂದು ʻಸಾರ್ವಜನಿಕ ತುರ್ತುಸ್ಥಿತಿʼ ಘೋಷಿಸಲಾಗಿತ್ತು. ಆಗ ಇಎನ್‌ಪಿಒ ಮತ್ತು ಅದರ ಅಂಗ ಸಂಸ್ಥೆಗಳು ಚುನಾವಣೆ ಪ್ರಚಾರಕ್ಕೆ ಅನುಮತಿ ನೀಡಲಿಲ್ಲ. ಕಳೆದ ವರ್ಷದ ಅಸೆಂಬ್ಲಿ ಚುನಾವಣೆಯನ್ನೂ ಬಹಿಷ್ಕರಿಸಿತ್ತು. ಆದರೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಭರವಸೆ ನೀಡಿದ ನಂತರ ಕರೆಯನ್ನು ಹಿಂತೆಗೆದುಕೊಂಡಿತು.

ನಾಗಾಲ್ಯಾಂಡ್ ಒಂದು ಲೋಕಸಭೆ ಸ್ಥಾನ ಹೊಂದಿದ್ದು, ಬಿಜೆಪಿ ಮಿತ್ರ ಪಕ್ಷ ನ್ಯಾಷನಲಿಸ್ಟ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿ (ಎನ್‌ಡಿಪಿಪಿ) ಟೊಖೆನೊ ಯೆಪ್ಥೋಮಿ ಪ್ರತಿನಿಧಿಸಿದ್ದಾರೆ.

Read More
Next Story