ಎನ್‌ಡಿಎ  ಅಂದರೆ ನಿತೀಶ್-ನಾಯ್ಡು ಡೆಮಾಕ್ರಟಿಕ್‌ ಅಲೈನ್ಸ್‌: ಕಾಂಗ್ರೆಸ್
x
ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು (ಮಧ್ಯ) ಮತ್ತು ಬಿಹಾರ ಸಿಎಂ ಮತ್ತು ಜೆಡಿಯು ನಾಯಕ ನಿತೀಶ್ ಕುಮಾರ್ (ಬಲ) ಅವರೊಂದಿಗೆ ಪಿಎಂ ನರೇಂದ್ರ ಮೋದಿ.

ಎನ್‌ಡಿಎ ಅಂದರೆ ನಿತೀಶ್-ನಾಯ್ಡು ಡೆಮಾಕ್ರಟಿಕ್‌ ಅಲೈನ್ಸ್‌: ಕಾಂಗ್ರೆಸ್

ಕಾಂಗ್ರೆಸ್ ನಾಯಕ ಪವನ್ ಖೇರಾ ಅವರು ಎನ್‌ಡಿಎ ಮೈತ್ರಿಕೂಟವನ್ನು 'ನಿತೀಶ್-ನಾಯ್ಡು ಅವಲಂಬಿತ ಮೈತ್ರಿ' ಎಂದು ಬಣ್ಣಿಸಿದ್ದಾರೆ.


Click the Play button to hear this message in audio format

ಶುಕ್ರವಾರ ನಡೆದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ ಒಂದು ಗಂಟೆ ಭಾಷಣದಲ್ಲಿ ಎನ್‌ಡಿಎಯನ್ನು ಪ್ರಸ್ತಾಪಿಸಿದಷ್ಟು ಕಳೆದ 10 ವರ್ಷಗಳಲ್ಲಿ ಹೀಗೆ ಪ್ರಸ್ತಾಪಿಸಿಲ್ಲ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

ಕಾಂಗ್ರೆಸ್ ನಾಯಕ ಪವನ್ ಖೇರಾ ಅವರು ಎನ್‌ಡಿಎ ಮೈತ್ರಿಕೂಟವನ್ನು 'ನಿತೀಶ್-ನಾಯ್ಡು ಅವಲಂಬಿತ ಮೈತ್ರಿ' ಎಂದು ಬಣ್ಣಿಸಿದ್ದಾರೆ. " ನರೇಂದ್ರ ಮೋದಿ ಇಂದಿನ ಭಾಷಣಲ್ಲಿ ಅಧಿಕ ಬಾರಿ ಎನ್‌ಡಿಎ ಬಗ್ಗೆ ಉಲ್ಲೇಖ ಮಾಡಿರುವಷ್ಟು ಕಳೆದ ಹತ್ತು ವರ್ಷಗಳಲ್ಲಿ ಮಾಡಿಲ್ಲ. ಎನ್‌ಡಿಎಯ ಪೂರ್ಣ ರೂಪ ನಿತೀಶ್ - ನಾಯ್ಡು ಅವಲಂಬಿತ ಮೈತ್ರಿಯಾಗಿದೆ ಎಂದು ನೀವು ಮತ್ತು ನಾನು ಅರ್ಥಮಾಡಿಕೊಂಡಿದ್ದೇವೆ. ಆದರೆ ಈ ವ್ಯಕ್ತಿಯ ಗ್ಯಾರಂಟಿಯನ್ನು ಯಾರೂ ನಂಬುವುದಿಲ್ಲ ಎಂದು ಇವರಿಬ್ಬರಿಗೂ (ನಿತೀಶ್ ಮತ್ತು ನಾಯ್ಡು) ತಿಳಿದಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಸಂಸತ್ತಿನ ಸಂಕೀರ್ಣದಲ್ಲಿರುವ ರಾಷ್ಟ್ರೀಯ ಐಕಾನ್‌ಗಳ ಪ್ರತಿಮೆಗಳನ್ನು ತೆಗೆದುಹಾಕುವ ಬಗ್ಗೆ ಮೋದಿ ಸರ್ಕಾರವು ಜನರಿಗೆ ವಿವರಣೆಯನ್ನು ನೀಡಬೇಕಿದೆ. ಮಹಾತ್ಮ ಗಾಂಧಿ, ಬಿಆರ್ ಅಂಬೇಡ್ಕರ್ ಮತ್ತು ಛತ್ರಪತಿ ಶಿವಾಜಿ ಸೇರಿದಂತೆ ಇತರರ ಪ್ರತಿಮೆಗಳನ್ನು ಭೂದೃಶ್ಯದ ಭಾಗವಾಗಿ ಸಂಸತ್ತಿನ ಆವರಣದಲ್ಲಿ ಸ್ಥಳಾಂತರಿಸಲಾಗಿದೆ. ಈ ಕ್ರಮವನ್ನು ಕಾಂಗ್ರೆಸ್ ಕಟುವಾಗಿ ಟೀಕಿಸಿದ್ದು, ಸಂಸತ್ ಭವನದ ಮುಂಭಾಗದಲ್ಲಿರುವ ತಮ್ಮ ಪ್ರಾಮುಖ್ಯತೆಯ ಸ್ಥಳಗಳಿಂದ ಆ ಪ್ರತಿಮೆಗಳನ್ನು ಸ್ಥಳಾಂತರಿಸಲಾಗಿದೆ ಎಂದು ಆರೋಪಿಸಿದರು.

ಬಿಜೆಪಿ ಹತಾಶೆಯಿಂದ ಕೂಡಿದ್ದು, ಸ್ವಂತವಾಗಿ ಬಹುಮತ ಗಳಿಸದಿರುವ ಕೋಪವನ್ನು ಹೊರಹಾಕುವ ಪ್ರಯತ್ನದಲ್ಲಿ ಸರ್ಕಾರವು ರಾಷ್ಟ್ರೀಯ ಐಕಾನ್‌ಗಳ ಪ್ರತಿಮೆಗಳನ್ನು ತೆಗೆದುಹಾಕಿದೆ. ಸಂಸತ್ತಿನ ಸಂಕೀರ್ಣದಲ್ಲಿ ರಾಷ್ಟ್ರೀಯ ನಾಯಕರು ಮತ್ತು ಸಂಸದರ ಭಾವಚಿತ್ರ ಮತ್ತು ಪ್ರತಿಮೆಗಳನ್ನು ಸ್ಥಾಪಿಸುವ ಸಮಿತಿ ಮತ್ತು ಸಂಸತ್ ಭವನ ಸಂಕೀರ್ಣದ ಪಾರಂಪರಿಕ ಪಾತ್ರಗಳ ನಿರ್ವಹಣೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ಜಂಟಿ ಸಂಸದೀಯ ಸಮಿತಿಯ ನಿರ್ಧಾರವಿಲ್ಲದೆ ಪ್ರತಿಮೆಗಳನ್ನು ತೆಗೆದುಹಾಕಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಸೇಡು ತೀರಿಸಿಕೊಂಡ ಬಿಜೆಪಿ

ಭಾವಚಿತ್ರಗಳು ಮತ್ತು ಪ್ರತಿಮೆಗಳ ಕುರಿತು ಈ ಸಮಿತಿಗಳ ಕೊನೆಯ ಸಭೆಯು ಡಿಸೆಂಬರ್ 18, 2018 ರಂದು ನಡೆದಿದೆ ಎಂದು ಮೋದಿ ತಿಳಿಸಿದ್ದು, ಇಂತಹ ಪರಿಸ್ಥಿತಿಯಲ್ಲಿ, ರಾಷ್ಟ್ರೀಯ ನಾಯಕರ ಪ್ರತಿಮೆಗಳನ್ನು ತೆಗೆದುಹಾಕುವ ಉದ್ದೇಶವೇನು ಎಂಬುವುದರ ಬಗ್ಗೆ ದೇಶವು ವಿವರಣೆಯನ್ನು ಬಯಸುತ್ತದೆ ಎಂದು ಅವರು ತಿಳಿಸಿದರು.

ಮಹಾರಾಷ್ಟ್ರದಲ್ಲಿನ ತನ್ನ ಸೋಲಿಗೆ ಬಿಜೆಪಿಯು ಶಿವಾಜಿ ಪ್ರತಿಮೆಯನ್ನು ಸಂಸತ್ತಿನ ಹೊರಗೆ ಸ್ಥಳಾಂತರಿಸುವ ಮೂಲಕ ಸೇಡು ತೀರಿಸಿಕೊಳ್ಳುತ್ತಿದೆ. ಏಕೆಂದರೆ ಶಿವಸೇನೆಯವರು ಅಯೋಧ್ಯೆಯಲ್ಲಿ ಬಿಜೆಪಿ ಯಾವುದೇ ಸ್ಥಾನವನ್ನು ಗೆಲ್ಲದಿರುವ ರಾಮನ ಭಕ್ತರನ್ನು ನಿಂದಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.

ಪ್ರತಿಪಕ್ಷಗಳಾದ ಕಾಂಗ್ರೆಸ್, ಶಿವಸೇನೆ (ಯುಬಿಟಿ), ಮತ್ತು ಎನ್‌ಸಿಪಿ (ಶರದ್‌ಚಂದ್ರ ಪವಾರ್)ನ ಮಹಾ ವಿಕಾಸ್ ಅಘಾಡಿ ಮಹಾರಾಷ್ಟ್ರದ 48 ಸ್ಥಾನಗಳಲ್ಲಿ 31 ಸ್ಥಾನಗಳನ್ನು ಜೇಬಿಗಿಳಿಸಿಕೊಂಡಿದ್ದರೆ, ಬಿಜೆಪಿ ನೇತೃತ್ವದ ಎನ್‌ಡಿಎ ರಾಜ್ಯದಲ್ಲಿ 45 ಪ್ಲಸ್ ಸೀಟುಗಳನ್ನು ಗಳಿಸುತ್ತೇವೆ ಎಂದು ಹೇಳಿಕೊಂಡು ಬಂದಿದ್ದು, ಕೇವಲ 17 ಸ್ಥಾನಗಳನ್ನು ಗಳಿಸಿದೆ.

ಸಂವಿಧಾನದ ಪ್ರತಿಯ ಮುಂದೆ ಮೋದಿ ನಮನ

ಈ ಮಧ್ಯೆ ಎನ್‌ಡಿಎ ಮೈತ್ರಿಕೂಟದ ಸಭೆಗಾಗಿ ಮೋದಿ ಸೆಂಟ್ರಲ್ ಹಾಲ್‌ಗೆ ಪ್ರವೇಶಿಸಿದ ತಕ್ಷಣ ಮೋದಿ ಅಲ್ಲಿ ಇರಿಸಲಾಗಿದ್ದ ಸಂವಿಧಾನದ ಪ್ರತಿಯ ಮುಂದೆ ನಮಸ್ಕರಿಸಿ ಗೌರವಯುತವಾಗಿ ತಮ್ಮ ಹಣೆಗೆ ಎತ್ತಿ ನಮಸ್ಕರಿಸಿದರು.

ಶುಕ್ರವಾರ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಸಂಸದೀಯ ಪಕ್ಷದ ನಾಯಕರಾಗಿ ಮೋದಿಯನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಬಳಿ ಎನ್‌ಡಿಎ ಸರ್ಕಾರ ರಚನೆಗಾಗಿ ಹಕ್ಕು ಸಾಧಿಸಿತು. ಅದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮೋದಿ ಅವರನ್ನು ನಿಯೋಜಿತ ಪ್ರಧಾನಿಯಾಗಿ ನೇಮಿಸಿದರು. ಎನ್‌ಡಿಎ ಸಭೆಯಲ್ಲಿ ತಮ್ಮ ಭಾಷಣದ ವೇಳೆ, ಮುಂದಿನ ಸರ್ಕಾರವನ್ನು ನಡೆಸುವಲ್ಲಿ ಒಮ್ಮತವನ್ನು ಖಚಿತಪಡಿಸಿಕೊಳ್ಳಲು ಶ್ರಮಿಸುವುದಾಗಿ ಮೋದಿ ಹೇಳಿದರು. ಎನ್‌ಡಿಎ ಅಧಿಕಾರವನ್ನು ಪಡೆಯಲು ಕೆಲವು ಪಕ್ಷಗಳ ಸಂಯೋಜನೆಯಲ್ಲ, ಆದರೆ 'ದೇಶ ಮೊದಲು' ಎಂಬ ತತ್ವಕ್ಕೆ ಬದ್ಧವಾಗಿರುವ ಸಾವಯವ ಮೈತ್ರಿಯಾಗಿದೆ ಎಂದು ಅವರು ಪ್ರತಿಪಾದಿಸಿದರು.

Read More
Next Story