ಸಾರ್ವಜನಿಕ ವಲಯದ ಕುರುಡು ಖಾಸಗೀಕರಣದಿಂದ ಮೀಸಲಿಗೆ ಧಕ್ಕೆ: ರಾಹುಲ್
x

ಸಾರ್ವಜನಿಕ ವಲಯದ ಕುರುಡು ಖಾಸಗೀಕರಣದಿಂದ ಮೀಸಲಿಗೆ ಧಕ್ಕೆ: ರಾಹುಲ್


ʻಬಿಜೆಪಿ ಖಾಸಗೀಕರಣದ ವಿವೇಚನಾರಹಿತ ಖಾಸಗೀಕರಣದಿಂದ ದಲಿತರು, ಆದಿವಾಸಿಗಳು ಮತ್ತು ಹಿಂದುಳಿದ ವರ್ಗಗಳ ಮೀಸಲನ್ನು ರಹಸ್ಯವಾಗಿ ಕಸಿದುಕೊಳ್ಳುತ್ತಿದೆʼ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಗುರುವಾರ ದೂರಿದರು.

ಎಕ್ಸ್‌ ನ ಪೋಸ್ಟ್‌ ನಲ್ಲಿ ʻಕಾಂಗ್ರೆಸ್‌ ಸಾರ್ವಜನಿಕ ವಲಯದ ಉದ್ಯಮಗಳನ್ನು ಬಲಪಡಿಸಲು ಮತ್ತು ಉದ್ಯೋಗಾವಕಾಶ ಸೃಷ್ಟಿಸಲು ಪ್ರತಿಜ್ಞೆ ಮಾಡುತ್ತದೆʼ ಎಂದು ಹೇಳಿದ್ದಾರೆ.

ʻಮೀಸಲು ತೆಗೆದುಹಾಕುವ ನರೇಂದ್ರ ಮೋದಿಯವರ ಅಭಿಯಾನದ ಮಂತ್ರ -- 'ನಾ ರಹೇಗಾ ಬಾನ್ಸ್, ನಾ ಬಜೇಗಿ ಬಾನ್ಸುರಿ', ಅಂದರೆ ಸರ್ಕಾರಿ ಉದ್ಯೋಗಗಳು ಇರುವುದಿಲ್ಲ ಇಲ್ಲವೇ ಯಾವುದೇ ಮೀಸಲು ಲಭ್ಯವಿರುವುದಿಲ್ಲ.2013ರಲ್ಲಿ ಸಾರ್ವಜನಿಕ ವಲಯದಲ್ಲಿ 14 ಲಕ್ಷ ಖಾಯಂ ಹುದ್ದೆಗಳಿದ್ದವು. 2023ರ ವೇಳೆಗೆ 8.4 ಲಕ್ಷಕ್ಕೆ ಕುಸಿದಿದೆ. ಬಿಎಸ್‌ ಎನ್‌ ಎಲ್‌, ಸೇಲ್(ಸ್ಟೀಲ್‌ ಅಥಾರಿಟಿ), ಬಿಎಚ್‌ಇಎಲ್‌ ನಂಥ ಉನ್ನತ ಪಿಎಸ್‌ಯುಗಳನ್ನು ಹಾಳುಗೆಡವುವ ಮೂಲಕ, ಸುಮಾರು 6 ಲಕ್ಷ ಖಾಯಂ ಉದ್ಯೋಗಗಳನ್ನು ಸಾರ್ವಜನಿಕ ವಲಯದಿಂದ ತೆಗೆದುಹಾಕಲಾಗಿದೆ. ಇವು ಮೀಸಲು ಸೌಲಭ್ಯ ನೀಡುವಂತಹ ಹುದ್ದೆಗಳುʼ ಎಂದು ರಾಹುಲ್ ಹೇಳಿದರು.

ʻರೈಲ್ವೆಯಂತಹ ಸಂಸ್ಥೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಸರ್ಕಾರಿ ಕೆಲಸ ನೀಡಿ, ಹಿಂಬಾಗಿಲ ಮೂಲಕ ತೆಗೆದುಹಾಕುತ್ತಿರುವ ಉದ್ಯೋಗಗಳಿಗೆ ಲೆಕ್ಕವಿಲ್ಲ. ಮೋದಿ ಮಾದರಿಯ ಖಾಸಗೀಕರಣದಿಂದ ದೇಶದ ಸಂಪನ್ಮೂಲಗಳ ಲೂಟಿಯಾಗಿದೆ. ವಂಚಿತರ ಮೀಸಲು ಕಿತ್ತುಕೊಳ್ಳಲಾಗುತ್ತಿದೆ,ʼ ಎಂದು ಆರೋಪಿಸಿದರು.

ʻ ಖಾಲಿ ಇರುವ 30 ಲಕ್ಷ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವ ಮೂಲಕ ಸಾರ್ವಜನಿಕ ವಲಯದ ಉದ್ಯಮಗಳನ್ನು ಬಲಪಡಿಸಲಾಗುತ್ತದೆ. ಸಮಾಜದ ಪ್ರತಿಯೊಂದು ವರ್ಗಕ್ಕೂ ಉದ್ಯೋಗದ ಬಾಗಿಲು ತೆರೆಯುತ್ತೇವೆʼ ಎಂದು ಭರವಸೆ ನೀಡಿದರು.

Read More
Next Story