ಅಸ್ಸಾಂನಲ್ಲಿ ಮಾಫಿಯಾ ರಾಜ್: ಪ್ರಿಯಾಂಕಾ ಗಾಂಧಿ ವಾದ್ರಾ ಆರೋಪ
x

ಅಸ್ಸಾಂನಲ್ಲಿ 'ಮಾಫಿಯಾ ರಾಜ್': ಪ್ರಿಯಾಂಕಾ ಗಾಂಧಿ ವಾದ್ರಾ ಆರೋಪ


ಧುಬ್ರಿ, ಮೇ 1- ಅಸ್ಸಾಂನಲ್ಲಿ ʻಮಾಫಿಯಾ ರಾಜ್ʼ ನಡೆಯುತ್ತಿದೆ. ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಅನೇಕ ಹಗರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಬುಧವಾರ ದೂರಿದ್ದಾರೆ.

ಧುಬ್ರಿಯಲ್ಲಿ ಚುನಾವಣೆ ಸಭೆಯಲ್ಲಿ ಮಾತನಾಡಿ, ʻತೆಲಂಗಾಣದಲ್ಲಿ ಅಸ್ಸಾದುದ್ದೀನ್ ಓವೈಸಿಯೊಂದಿಗೆ ಬಿಜೆಪಿ ಹೊಂದಾಣಿಕೆ ಮಾಡಿ ಕೊಂಡಿರುವಂತೆ ಎಐಯುಡಿಎಫ್‌ನ ಬದ್ರುದ್ದೀನ್ ಅಜ್ಮಲ್ ಅವರೊಂದಿಗೆ ಶರ್ಮಾ ʻರಹಸ್ಯ ಒಪ್ಪಂದʼ ಮಾಡಿಕೊಂಡಿದ್ದಾರೆ. ಎರಡೂ ಕಾಂಗ್ರೆಸ್ ಅನ್ನು ಸೋಲಿಸುವ ಗುರಿಯನ್ನು ಹೊಂದಿವೆʼ ಎಂದರು.

ಕರ್ನಾಟಕ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ಕಿರುಕುಳ ಆರೋಪದ ಬಗ್ಗೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿ, ʻಪ್ರಧಾನಿ ಅವರು ಸಂಸದನ ಪರವಾಗಿ ಮತ ಕೇಳಿದರು. ಆನಂತರ ಆತ ದೇಶ ತೊರೆಯುವುದನ್ನು ತಡೆಯಲಿಲ್ಲʼ ಎಂದು ದೂರಿದರು.

ಚುನಾವಣೆ ಬಾಂಡ್ ಕುರಿತು ವಾಗ್ದಾಳಿ ನಡೆಸಿ,ʻಕೇವಲ 10 ವರ್ಷಗಳಲ್ಲಿ ಬಿಜೆಪಿ ವಿಶ್ವದ ಅತ್ಯಂತ ಶ್ರೀಮಂತ ಪಕ್ಷವಾಯಿತು. ಆದರೆ, ಕಾಂಗ್ರೆಸ್ 70 ವರ್ಷಗಳಲ್ಲೂ ಇಷ್ಟು ಹಣ ಗಳಿಸಲಿಲ್ಲ.ಪ್ರಧಾನಿ ಜನಸಾಮಾನ್ಯರಿಂದ ದೂರವಿದ್ದಾರೆ. ಅವರು ಅಹಂಕಾರಿ ಆಗಿರುವುದರಿಂದ ಜನರ ದುಃಖಗಳ ಬಗ್ಗೆ ಯಾವುದೇ ತಿಳಿವಳಿಕೆ ಇಲ್ಲʼ ಎಂದು ಹೇಳಿದರು.

ʻಅಸ್ಸಾಂನಲ್ಲಿ ನಿರುದ್ಯೋಗ ಹೆಚ್ಚಳ ಪ್ರಮುಖ ಸಮಸ್ಯೆಯಾಗಿದೆ. ಆದರೆ, ಸಿಎಂ ಮತ್ತು ಸಂಪುಟದ ಮಂತ್ರಿಗಳು ತಮ್ಮ ಹಿತಾಸಕ್ತಿ ಬಗ್ಗೆ ಮಾತ್ರ ಕಾಳಜಿ ವಹಿಸುತ್ತಾರೆʼ ಎಂದು ಆರೋಪಿಸಿದ್ದಾರೆ.

Read More
Next Story