ಲೋಕಸಭೆ ಚುನಾವಣೆ: 3ನೇ ಹಂತದ ಒಟ್ಟು ಮತದಾನ ಪ್ರಮಾಣ ಶೇ.65.68
x

ಲೋಕಸಭೆ ಚುನಾವಣೆ: 3ನೇ ಹಂತದ ಒಟ್ಟು ಮತದಾನ ಪ್ರಮಾಣ ಶೇ.65.68

ಎರಡನೇ ಹಂತದಲ್ಲಿ ಕರ್ನಾಟಕದ 14 ಕ್ಷೇತ್ರಗಳಲ್ಲಿ ಶೇ.71.84ರಷ್ಟು ಮತದಾನ. ಚಿಕ್ಕೋಡಿ ಗರಿಷ್ಠ ಶೇ.78.66, ಗುಲ್ಬರ್ಗದಲ್ಲಿ ಕನಿಷ್ಠ ಶೇ.62.25 ಮತದಾನ.


ಲೋಕಸಭೆ ಚುನಾವಣೆಯ ಮೂರನೇ ಹಂತದ ನವೀಕರಿಸಿದ ಮತ ಚಲಾವಣೆ ಪ್ರಮಾಣ ಶೇ.65.68 ಎಂದು ಚುನಾವಣೆ ಆಯೋಗ ಬುಧವಾರ ತಿಳಿಸಿದೆ. ಬುಧವಾರ ರಾತ್ರಿ 10 ಗಂಟೆಗೆ ಅಂಕಿಅಂಶ ಪಡೆಯಲಾಗಿದೆ. ಕ್ಷೇತ್ರ ಮಟ್ಟದ ಅಧಿಕಾರಿಗಳು ದತ್ತಾಂಶ ನವೀಕರಣ ಮುಂದುವರಿಸುತ್ತಾರೆ ಎಂದು ಆಯೋಗ ತಿಳಿಸಿದೆ.

ಮೂರನೇ ಹಂತದ ಮತದಾನ ಮಂಗಳವಾರ 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 93 ಕ್ಷೇತ್ರಗಳಲ್ಲಿ ಹಿಂಸಾಚಾರದ ಘಟನೆಯೊಂದಿಗೆ ನಡೆಯಿತು.

ಕರ್ನಾಟಕ ಶೇ.71.84: ಎರಡನೇ ಹಂತದಲ್ಲಿ ಕರ್ನಾಟಕದ 14 ಕ್ಷೇತ್ರಗಳಲ್ಲಿ ಶೇ.71.84ರಷ್ಟು ಮತದಾನವಾಗಿದೆ. ಚಿಕ್ಕೋಡಿಯಲ್ಲಿ ಗರಿಷ್ಠ ಶೇ.78.66, ಶಿವಮೊಗ್ಗದಲ್ಲಿ ಶೇ.78.33 ಹಾಗೂ ಗುಲ್ಬರ್ಗದಲ್ಲಿ ಕನಿಷ್ಠ ಶೇ.62.25ರಷ್ಟು ಮತದಾನವಾಗಿದೆ. 2019 ರಲ್ಲಿ ಈ 14 ಕ್ಷೇತ್ರಗಳಲ್ಲಿ ಶೇ.68.43 ಮತದಾನವಾಗಿತ್ತು. ಈ ಬಾರಿ ಕರ್ನಾಟಕದಲ್ಲಿ ಎರಡು ಹಂತಗಳಲ್ಲಿ ನಡೆದ ಒಟ್ಟು ಮತದಾನದ ಪ್ರಮಾಣ ಶೇ.70.64.

ಪಶ್ಚಿಮ ಬಂಗಾಳ ಶೇ.77.53: ಪಶ್ಚಿಮ ಬಂಗಾಳದ 4 ಕ್ಷೇತ್ರಗಳಲ್ಲಿ ಶೇ. 77.53 ಮಂದಿ ಹಕ್ಕು ಚಲಾಯಿಸಿದ್ದಾರೆ. ಮುರ್ಷಿದಾಬಾದ್‌ನಲ್ಲಿ ಶೇ.81.52, ಮಾಲ್ಡಾ ದಕ್ಷಿಣ ಶೇ. 76.69, ಮಾಲ್ಡಾ ಉತ್ತರ ಶೇ. 76.03 ಮತ್ತು ಜಂಗಿಪುರದ್ಲಿ ಶೇ. 75.72) ಮತದಾನವಾಗಿದೆ. ಭವನಬಂಗೋಲಾ ವಿಧಾನಸಭೆ ಉಪ ಚುನಾವಣೆಯಲ್ಲಿ ಶೇ.80.07ರಷ್ಟು ಮತದಾನವಾಗಿದೆ.

ಗುಜರಾತ್ ಶೇ.60.13: ಗುಜರಾತಿನ 25 ಲೋಕಸಭೆ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಶೇ.60.13 ರಷ್ಟು ಮತದಾನವಾಗಿದೆ. 2019ಕ್ಕಿಂತ ಶೇ.3.98 ರಷ್ಟು ಕುಸಿತ ದಾಖಲಿಸಿದೆ. 2019ರಲ್ಲಿ ಶೇ.64.11 ರಷ್ಟು ಮತದಾನವಾಗಿತ್ತು.

ದಕ್ಷಿಣ ಗುಜರಾತ್‌ನ ಬುಡಕಟ್ಟು ಮೀಸಲು ಕ್ಷೇತ್ರ ವಲ್ಸಾದ್ ನಲ್ಲಿ ಅತಿ ಹೆಚ್ಚು ಶೇ.72.71 ಮತ್ತು ಸೌರಾಷ್ಟ್ರ ಪ್ರದೇಶದ ಅಮ್ರೇಲಿ ಕ್ಷೇತ್ರದಲ್ಲಿ ಕನಿಷ್ಠ ಶೇ.50.29 ಮತದಾನ ನಡೆದಿದೆ. 2019ರಲ್ಲಿ ವಲ್ಸಾದ್ ಶೇ.75.22 ರಷ್ಟು ಮತಚಲಾವಣೆ ದಾಖಲಿಸಿ ಅಗ್ರ ಸ್ಥಾನದಲ್ಲಿತ್ತು. ಬಿಜೆಪಿ ಮತ್ತು ಇಂಡಿಯ ಒಕ್ಕೂಟದ ನಿಕಟ ಹೋರಾಟಕ್ಕೆ ಸಾಕ್ಷಿಯಾದ ಭರೂಚ್ ಮತ್ತು ಬನಸ್ಕಾಂತ ಕ್ಷೇತ್ರಗಳಲ್ಲಿ ಕ್ರಮವಾಗಿ ಶೇ.69.16 ಮತ್ತು ಶೇ.69.62ರಷ್ಟು ಮತದಾನವಾಗಿದೆ. ಇತರ ಮೂರು ಎಸ್‌ಟಿ ಮೀಸಲು ಕ್ಷೇತ್ರಗಳಾದ ಛೋಟಾ ಉದಯ್‌ಪುರ್ ಶೇ.69.15(ಶೇ.4.29 ಕಡಿಮೆ) ,ದಾಹೋದ್ ಶೇ. 59.31(ಶೇ.6.87 ಕಡಿಮೆ) ಮತ್ತು ಬಾರ್ಡೋಲಿಯಲ್ಲಿ ಶೇ.64.81ರಷ್ಟು(ಶೇ.8.77 ಕಡಿಮೆ) ಮತದಾನವಾಗಿದೆ.

ಅಸ್ಸಾಂ ಶೇ.81.56: ಅಸ್ಸಾಂನ 14 ಕ್ಷೇತ್ರಗಳ 2.45 ಕೋಟಿ ಮತದಾರರಲ್ಲಿ ಶೇ. 81.56 ಜನ ಮತ ಚಲಾವಣೆ ಮಾಡಿದ್ದಾರೆ. 2019 ರಲ್ಲಿ ಶೇ. 81.55 ರಷ್ಟು ಮತದಾನವಾಗಿತ್ತು. ಮಹಿಳಾ ಮತದಾರರು ಶೇ. 81.71 ಹಾಗೂ ಪುರುಷ ಮತದಾರರು ಶೇ.81.42. ಮೊದಲ ಹಂತದಲ್ಲಿ ಕಾಜಿರಂಗ, ಜೋರ್ಹತ್, ದಿಬ್ರುಗಢ, ಸೋನಿತ್‌ಪುರ ಮತ್ತು ಲಖಿಂಪುರ ಕ್ಷೇತ್ರಗಳಲ್ಲಿ ಶೇ.78.25 ರಷ್ಟು ಮತದಾರರು ಹಕ್ಕು ಚಲಾಯಿಸಿದ್ದರು.

ಏಪ್ರಿಲ್ 26 ರಂದು ನಡೆದ ಎರಡನೇ ಹಂತದಲ್ಲಿ ಶೇ. 81.17 ರಷ್ಟು ಮತದಾನ ನಡೆದಿದೆ. ಕರೀಮ್‌ಗಂಜ್, ಸಿಲ್ಚಾರ್ (ಎಸ್‌ಸಿ), ದಿಫು (ಎಸ್‌ಟಿ), ನಾಗಾಂವ್ ಮತ್ತು ದರ್ರಂಗ್-ಉದಲ್ಗುರಿ ಕ್ಷೇತ್ರದಲ್ಲಿ ಚುನಾವಣೆ ನಡೆದಿತ್ತು. ಮೇ 7 ರಂದು ಮೂರನೇ ಮತ್ತು ಅಂತಿಮ ಹಂತದಲ್ಲಿ ಧುಬ್ರಿ, ಬಾರ್ಪೇಟಾ, ಕೊಕ್ರಜಾರ್ (ಎಸ್‌ಟಿ) ಮತ್ತು ಗುವಾಹಟಿ ಕ್ಷೇತ್ರಗಳಲ್ಲಿ ಶೇ. 85.45 ರಷ್ಟು ಮತದಾನವಾಗಿತ್ತು.

ಬಿಹಾರದಲ್ಲಿ ಮರು ಮತದಾನ: ಬಿಹಾರದಲ್ಲಿ ಇವಿಎಂಗಳನ್ನು ಧ್ವಂಸಗೊಳಿಸಿದ ಖಗಾರಿಯಾ ಲೋಕಸಭೆ ಕ್ಷೇತ್ರದ ಎರಡು ಮತಗಟ್ಟೆಗಳಲ್ಲಿ ಮರುಮತದಾನಕ್ಕೆ ಆದೇಶಿಸಲಾಗಿದೆ ಎಂದು ಚುನಾವಣಾ ಆಯೋಗ ಬುಧವಾರ ತಿಳಿಸಿದೆ. ಮೇ 10 ರಂದು ಬೆಲ್ದೌರ್ ವಿಧಾನಸಭೆ ಕ್ಷೇತ್ರದ ಬೂತ್ ಸಂಖ್ಯೆ 182 ಮತ್ತು 183 ರಲ್ಲಿ ಮತದಾನ ನಡೆಯಲಿದೆ.

Read More
Next Story