ನೇಪಾಳದ ಹೊಸ ಪ್ರಧಾನಿಯಾಗಿ ಕೆ.ಪಿ. ಶರ್ಮಾ ಒಲಿ ಆಯ್ಕೆ
x
ಕೆಪಿ ಶರ್ಮಾ ಒಲಿ

ನೇಪಾಳದ ಹೊಸ ಪ್ರಧಾನಿಯಾಗಿ ಕೆ.ಪಿ. ಶರ್ಮಾ ಒಲಿ ಆಯ್ಕೆ

ದೇಶದಲ್ಲಿ ರಾಜಕೀಯ ಸ್ಥಿರತೆಯನ್ನು ಒದಗಿಸುವ ಕಠಿಣ ಸವಾಲನ್ನು ಎದುರಿಸುತ್ತಿರುವ ಹೊಸ ಸಮ್ಮಿಶ್ರ ಸರ್ಕಾರವನ್ನು ಮುನ್ನಡೆಸಲು ಕೆಪಿ ಶರ್ಮಾ ಒಲಿ ಅವರನ್ನು ನೇಪಾಳದ ಪ್ರಧಾನಿಯಾಗಿ ಮೂರನೇ ಬಾರಿಗೆ ಭಾನುವಾರ ನೇಮಿಸಲಾಗಿದೆ.


Click the Play button to hear this message in audio format

ಕಠ್ಮಂಡು: ದೇಶದಲ್ಲಿ ರಾಜಕೀಯ ಸ್ಥಿರತೆಯನ್ನು ಒದಗಿಸುವ ಕಠಿಣ ಸವಾಲನ್ನು ಎದುರಿಸುತ್ತಿರುವ ಹೊಸ ಸಮ್ಮಿಶ್ರ ಸರ್ಕಾರವನ್ನು ಮುನ್ನಡೆಸಲು ಕೆ.ಪಿ. ಶರ್ಮಾ ಒಲಿ ಅವರನ್ನು ನೇಪಾಳದ ಪ್ರಧಾನಿಯಾಗಿ ಮೂರನೇ ಬಾರಿಗೆ ಭಾನುವಾರ ನೇಮಿಸಲಾಗಿದೆ.

ಶುಕ್ರವಾರ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ವಿಶ್ವಾಸ ಮತವನ್ನು ಕಳೆದುಕೊಂಡ ಪುಷ್ಪ ಕಮಲ್ ದಹಲ್ ಪ್ರಚಂಡ ಅವರ ನಂತರ 72 ವರ್ಷದ ಓಲಿ ಅವರು ಸಂವಿಧಾನದ 76 (2) ರ ಪ್ರಕಾರ ಹೊಸ ಸರ್ಕಾರ ರಚನೆಗೆ ಕಾರಣರಾದರು.

ನೇಪಾಳದ ಕಮ್ಯುನಿಸ್ಟ್ ಪಾರ್ಟಿ-ಯುನಿಫೈಡ್ ಮಾರ್ಕ್ಸ್‌ವಾದಿ ಲೆನಿನಿಸ್ಟ್ (CPN-UML)-ನೇಪಾಳಿ ಕಾಂಗ್ರೆಸ್ (NC) ಒಕ್ಕೂಟದ ಹೊಸ ಪ್ರಧಾನ ಮಂತ್ರಿಯಾಗಿ ಒಲಿ ಅವರನ್ನು ಅಧ್ಯಕ್ಷ ರಾಮ್ ಚಂದ್ರ ಪೌಡೆಲ್ ನೇಮಕ ಮಾಡಿದರು.

ಒಲಿ ಹಾಗೂ ನೂತನ ಸಚಿವ ಸಂಪುಟ ಸೋಮವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಶುಕ್ರವಾರ ತಡರಾತ್ರಿ ಒಲಿ ಅವರು NC ಅಧ್ಯಕ್ಷ ಶೇರ್ ಬಹದ್ದೂರ್ ದೇವುಬಾ ಅವರ ಬೆಂಬಲದೊಂದಿಗೆ ಮುಂದಿನ ಪ್ರಧಾನಿಯಾಗಲು ಹಕ್ಕನ್ನು ಹಾಕಿದರು. 165 ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ (HoR) ಸದಸ್ಯರ ಸಹಿಗಳನ್ನು ಸಲ್ಲಿಸಿದರು. ಈ ಸದಸ್ಯರಲ್ಲಿ ಅವರ ಪಕ್ಷದಿಂದ 77 ಮತ್ತು ನೇಪಾಳಿ ಕಾಂಗ್ರೆಸ್ ನಿಂದ ೮೮ ಸಹಿಗಳನ್ನು ಪಡೆಯಲಾಗಿದೆ.

ಒಲಿ ನೇಪಾಳದ ಪ್ರಧಾನಿಯಾಗಿ ಅಕ್ಟೋಬರ್ 11, 2015 ರಿಂದ ಆಗಸ್ಟ್ 3, 2016 ರವರೆಗೆ ಮತ್ತು ನಂತರ ಫೆಬ್ರವರಿ 5, 2018 ರಿಂದ ಜುಲೈ 13, 2021 ರವರೆಗೆ ಸೇವೆ ಸಲ್ಲಿಸಿದರು.

Read More
Next Story