ಕೇರಳದಲ್ಲಿ ಯುಡಿಎಫ್ ಪರ ಅಲೆ:ಕಾಂಗ್ರೆಸ್‌
x

ಕೇರಳದಲ್ಲಿ ಯುಡಿಎಫ್ ಪರ ಅಲೆ:ಕಾಂಗ್ರೆಸ್‌

ಸಿಪಿಐ(ಎಂ)ನಿಂದ ಚುನಾವಣೆ ಸಾಧನಗಳ ಅಪಹರಣ ಆರೋಪ


ತಿರುವನಂತಪುರಂ, ಏ. 27- ಮತದಾರರಿಗೆ ಕಿರುಕುಳ ನೀಡಲಾಗಿದೆ ಮತ್ತು ಮತದಾನದ ಶೇಕಡಾವಾರು ಪ್ರಮಾಣವನ್ನು ಕಡಿಮೆ ಮಾಡಲು ಚುನಾವಣೆ ಯಂತ್ರಗಳನ್ನು ಆಡಳಿತಾರೂಢ ಸಿಪಿಐ(ಎಂ) ಅಪಹರಿಸಿದೆ ಎಂದು ಕಾಂಗ್ರೆಸ್ ಶನಿವಾರ ಆರೋಪಿಸಿದೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಮಾತನಾಡಿ, ಚುನಾವಣೆ ಯಂತ್ರದ ಅಪಹರಣದಿಂದ 2019ರ ಲೋಕಸಭೆ ಚುನಾವಣೆಗೆ ಹೋಲಿಸಿದರೆ ಈ ವರ್ಷ ಮತದಾನದ ಶೇಕಡಾವಾರು ಇಳಿಕೆಯಾಗಿದೆʼ ಎಂದು ಹೇಳಿದರು.

ಕೇರಳದ 20 ಲೋಕಸಭೆ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಮತ ಚಲಾವಣೆ ಪ್ರಮಾಣ ಶೇ. 70.22 ಇದೆ. 2019ರಲ್ಲಿ ಶೇ. 77.84 ರಷ್ಟು ಮತ ಚಲಾವಣೆ ಆಗಿತ್ತು. ರಾಜ್ಯದ ಶೇ. 3-5 ಮತಗಟ್ಟೆಗಳಲ್ಲಿ ವಿದ್ಯುನ್ಮಾನ ಮತಯಂತ್ರ (ಇವಿಎಂ) ಗಳಲ್ಲಿ ದೋಷಗಳಿದ್ದು, ಚುನಾವಣೆ ಪ್ರಕ್ರಿಯೆಯಲ್ಲಿ ದೀರ್ಘ ವಿಳಂಬ ಆಗುತ್ತದೆ. ತೀವ್ರವಾದ ಬಿಸಿಲಿನಲ್ಲಿ ಗಂಟೆಗಳ ಕಾಲ ನಿಲ್ಲಬೇಕಾದ್ದರಿಂದ, ಮತದಾರರಿಗೆ ತೊಂದರೆಯಾಯಿತು. ಯುಡಿಎಫ್ ಪ್ರಬಲವಾಗಿರುವ ಬೂತ್‌ಗಳಲ್ಲಿನ ಶೇ.90 ರಷ್ಟು ಇವಿಎಂಗಳಲ್ಲಿ ದೋಷಗಳು ಸಂಭವಿಸಿವೆʼ ಎಂದು ಆರೋಪಿಸಿದರು.

‘ಇವಿಎಂ ದೋಷದಿಂದ ಮತದಾನ ಮಾಡಲು ಗಂಟೆಗಟ್ಟಲೆ ಕಾದು ಕುಳಿತಿದ್ದ ಬೂತ್‌ಗಳಲ್ಲಿ ಕುಡಿಯುವ ನೀರು, ಕುಳಿತುಕೊಳ್ಳಲು, ಬೆಳಕಿನ ವ್ಯವಸ್ಥೆ ಇರಲಿಲ್ಲ. ಮತ ಚಲಾವಣೆ ಪ್ರಮಾಣವನ್ನು ತಗ್ಗಿಸುವ ಉದ್ದೇಶದಿಂದ ಸಿಪಿಐ(ಎಂ) ಚುನಾವಣಾ ಯಂತ್ರವನ್ನು ಸಂಪೂರ್ಣವಾಗಿ ಅಪಹರಿಸಿದೆʼ ಎಂದು ಆರೋಪಿಸಿದರು.

ʻಎಡ ಪಕ್ಷಗಳ ಇಂತಹ ನಡೆಗಳ ಹೊರತಾಗಿಯೂ, ಯುಡಿಎಫ್ ಪರ ಅಲೆ ಮತ್ತು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ಆಡಳಿತ ವಿರೋಧಿ ಭಾವನೆಯಿಂದ ಎಲ್‌ಡಿಎಫ್ ಮತ್ತು ಬಿಜೆಪಿ ನೇತೃತ್ವದ ಎನ್‌ಡಿಎ ಯಾವುದೇ ಸ್ಥಾನ ಗೆಲ್ಲದಂತೆ ನೋಡಿಕೊಳ್ಳುತ್ತದೆ. ಫಲಿತಾಂಶ ಆಧರಿಸಿ ಅಗತ್ಯವಾದ ಕಾನೂನು ಕ್ರಮಗಳನ್ನು ಪ್ರಾರಂಭಿಸಲಾಗುವುದುʼ ಎಂದು ಹೇಳಿದರು.

Read More
Next Story