ರಾಹುಲ್ ವಿರುದ್ಧ ಕೇರಳ ಸಿಎಂ ವಾಗ್ದಾಳಿಯಿಂದ ಬಿಜೆಪಿಗೆ ನೆರವು: ಕಾಂಗ್ರೆಸ್
x

ರಾಹುಲ್ ವಿರುದ್ಧ ಕೇರಳ ಸಿಎಂ ವಾಗ್ದಾಳಿಯಿಂದ ಬಿಜೆಪಿಗೆ ನೆರವು: ಕಾಂಗ್ರೆಸ್


ಕೊಚ್ಚಿ, ಏಪ್ರಿಲ್‌ 13 - ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ತಮ್ಮ ಸರ್ಕಾರದ ವೈಫಲ್ಯಗಳನ್ನು ಮರೆಮಾಚಲು ಮತ್ತು ಚುನಾವಣೆಯಲ್ಲಿ ಬಿಜೆಪಿಗೆ ಸಹಾಯ ಮಾಡಲು ಕಾಂಗ್ರೆಸ್‌ ಹಾಗೂ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ಶನಿವಾರ ಆರೋಪಿಸಿದೆ.

ವಿಧಾನಸಭೆ ವಿರೋಧ ಪಕ್ಷದ ನಾಯಕ ವಿ.ಡಿ.ಸತೀಶನ್ ಮಾತನಾಡಿ, ಕಳೆದ 30 ದಿನಗಳಿಂದ ವಿಜಯನ್ ಅವರು ಬಿಜೆಪಿ ಮತ್ತು ಪ್ರಧಾನಿ ಮೋದಿ ಅವರನ್ನು ಬಿಟ್ಟು, ಕಾಂಗ್ರೆಸ್ ಮತ್ತು ಗಾಂಧಿ ವಿರುದ್ಧ ವಾಗ್ದಾಳಿ ಮಾಡುತ್ತಿದ್ದಾರೆ. ಅವರನ್ನು ಕಾಂಗ್ರೆಸ್ ಒಂದೇ ಒಂದು ಪ್ರಶ್ನೆ ಕೇಳಲು ಬಯಸುತ್ತದೆ-ʻನಾವಿಲ್ಲದೆ ನೀವು ರಾಷ್ಟ್ರ ಮಟ್ಟದಲ್ಲಿ ಕೋಮುವಾದ ಮತ್ತು ಫ್ಯಾಸಿಸಂನ್ನು ಹೇಗೆ ಸೋಲಿಸುತ್ತೀರಿ?ʼ

ʻಕಾಂಗ್ರೆಸ್ ಇಂಡಿಯ ಒಕ್ಕೂಟವನ್ನು ಮುನ್ನಡೆಸುತ್ತಿದೆ. ಕಾಂಗ್ರೆಸ್ ನಾಶವಾದರೆ ಅಥವಾ ದುರ್ಬಲಗೊಂಡರೆ, ಅದು ಯಾರಿಗೆ ಸಹಾಯ ಮಾಡುತ್ತದೆ ಎನ್ನುವುದು ಪಿಣರಾಯಿ ವಿಜಯನ್‌ ಅವರಿಗೆ ನಮ್ಮ ಪ್ರಶ್ನೆ. ನೀವು ಬಿಜೆಪಿಗೆ ಸಹಾಯ ಮಾಡಲು ರಾಹುಲ್ ಗಾಂಧಿ- ಕಾಂಗ್ರೆಸ್ ವಿರುದ್ಧ ಮಾತನಾಡುತ್ತಿದ್ದೀರಿ. ಸಿಪಿಐ(ಎಂ) ನೇತೃತ್ವದ ರಾಜ್ಯ ಸರ್ಕಾರ ತನ್ನ ಆಡಳಿತ ವೈಫಲ್ಯ ಮತ್ತು ದುರಾಡಳಿತವನ್ನು ಮರೆಮಾಚಲು ಕಾಂಗ್ರೆಸ್ ಮೇಲೆ ದಾಳಿ ನಡೆಸುತ್ತಿದೆ‌ʼ ಎಂದು ಪರವೂರು ವಿಧಾನಸಭೆ ಕ್ಷೇತ್ರದ ಶಾಸಕ ಸತೀಶನ್ ಆರೋಪಿಸಿದ್ದಾರೆ.

ಕೆಫೋನ್‌ ಭ್ರಷ್ಟಾಚಾರ: 1,500 ಕೋಟಿ ರೂ.ಗಳ ಕೆಫೋನ್ ಯೋಜನೆ ಪ್ರಾರಂಭವಾಗಿ, ಏಳು ವರ್ಷ ಕಳೆದರೂ ಇನ್ನೂ ಪೂರ್ಣಗೊಂಡಿಲ್ಲದಿ ರುವುದು ಸಿಪಿಐ(ಎಂ)ದುರಾಡಳಿತ ಮತ್ತು ಭ್ರಷ್ಟಾಚಾರಕ್ಕೆ ಉದಾಹರಣೆ. ಕೆಫೋನ್‌ ಯೋಜನೆಯ ಸಿಬಿಐ ತನಿಖೆ ಆಗಬೇಕುʼ ಎಂದು ಒತ್ತಾಯಿಸಿದರು.

ರಾಜತಾಂತ್ರಿಕ ಕೈಚೀಲಗಳ ಮೂಲಕ ಚಿನ್ನದ ಕಳ್ಳಸಾಗಣೆ, ಕರುವನ್ನೂರ್ ಸಹಕಾರಿ ಬ್ಯಾಂಕ್ ಹಗರಣ ಇತ್ಯಾದಿ ಅವ್ಯವಹಾರಗಳಲ್ಲಿ ಪಕ್ಷದ ನಾಯಕರು ಭಾಗಿಯಾಗಿರುವುದರರಿಂದ, ವಿಜಯನ್ ಮತ್ತು ಸಿಪಿಐ(ಎಂ) ಬಿಜೆಪಿ ವಿರುದ್ಧ ಮಾತನಾಡಲು ಹೆದರುತ್ತಿದೆ. ಬಿಜೆಪಿ ತ್ರಿಶೂರ್ ಮತ್ತು ತಿರುವನಂತಪುರಂನಂಥ ಪ್ರಮುಖ ಕ್ಷೇತ್ರಗಳಲ್ಲಿ ಎಡ ಪಕ್ಷಗಳ ಮತಗಳನ್ನುಗಳಿಸಲು ಈ ಹಿಂಜರಿಕೆಯನ್ನು ಬಳಸಿಕೊಳ್ಳುತ್ತಿದೆʼ ಎಂದು ಸತೀಶನ್ ಆರೋಪಿಸಿದ್ದಾರೆ.

ಬಿಜೆಪಿ ಮತ್ತು ಸಿಪಿಐ(ಎಂ) ಏನೇ ಹೊಂದಾಣಿಕೆ ಮಾಡಿಕೊಂಡರೂ, ಕೇರಳದಲ್ಲಿ ಕೇಸರಿ ಪಕ್ಷಕ್ಕೆ ಒಂದೇ ಒಂದು ಸ್ಥಾನ ಪಡೆಯಲು ಕಾಂಗ್ರೆಸ್ ಮತ್ತು ಯುಡಿಎಫ್ ಬಿಡುವುದಿಲ್ಲʼ ಎಂದು ಅವರು ಹೇಳಿದರು.

Read More
Next Story