ಜಾರ್ಖಂಡ್: ಸಚಿವರ ಗೃಹ ಸಹಾಯಕನ ಮನೆಯಲ್ಲಿ ಕೋಟಿಗಟ್ಟಲೆ ನಗದು ಪತ್ತೆ
x

ಜಾರ್ಖಂಡ್: ಸಚಿವರ ಗೃಹ ಸಹಾಯಕನ ಮನೆಯಲ್ಲಿ ಕೋಟಿಗಟ್ಟಲೆ ನಗದು ಪತ್ತೆ


ಜಾರ್ಖಂಡ್‌ನ ಗ್ರಾಮೀಣಾಭಿವೃದ್ಧಿ ಸಚಿವ ಅಲಂಗೀರ್‌ ಆಲಂ ಅವರ ಕಾರ್ಯದರ್ಶಿ ಜೊತೆಗೆ ಸಂಬಂಧವಿರುವ ಗೃಹ ಸಹಾಯಕನ ಮನೆ ಆವರಣದಲ್ಲಿ ಅಪಾರ ಪ್ರಮಾಣದ ʻಲೆಕ್ಕರಹಿತʼ ನಗದು ಪತ್ತೆಯಾಗಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿಕೊಂಡಿದೆ.

20-30 ಕೋಟಿ ರೂ.ಇರಬಹುದು. ನಿಖರವಾದ ಮೊತ್ತವನ್ನು ಕಂಡುಹಿಡಿಯಲು ನೋಟು ಎಣಿಕೆ ಯಂತ್ರಗಳನ್ನು ಬಳಸಲಾಗುತ್ತಿದೆ. 500 ರೂ. ಮುಖಬೆಲೆಯ ನೋಟುಗಳು ಹೆಚ್ಚು ಇವೆ ಮತ್ತು ಕೆಲವು ಆಭರಣಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಇಡಿ ಹೇಳಿದೆ. ರಾಂಚಿಯ ಗಾಡಿಖಾನಾ ಚೌಕ್‌ನಲ್ಲಿರುವ ಕಟ್ಟಡದಲ್ಲಿರುವ ಕೊಠಡಿಯಿಂದ ದೊಡ್ಡ ಚೀಲಗಳಿಂದ ಕರೆನ್ಸಿ ನೋಟುಗಳನ್ನು ಹೊರತೆಗೆಯುವುದನ್ನು ತೋರಿಸುತ್ತಿರುವ ವಿಡಿಯೋ-ಫೊಟೋ ಆನ್‌ಲೈನ್‌ ನಲ್ಲಿ ಹಂಚಿಕೊಳ್ಳಲಾಗಿದೆ.

ಮಾಹಿತಿ ಇಲ್ಲ: ʻಯಾವುದೇ ಅಧಿಕೃತ ಮಾಹಿತಿ ಇಲ್ಲ. ನಾನು ಟಿವಿ ನೋಡುತ್ತಿದ್ದೇನೆ. ಆವರಣ ನನಗೆ ಸರ್ಕಾರ ಒದಗಿಸಿದ ಅಧಿಕೃತ ಖಾಸಗಿ ಕಾರ್ಯದರ್ಶಿಗೆ ಸಂಬಂಧಿಸಿದೆ,ʼ ಎಂದು ಆಲಂ(70) ಹೇಳಿದರು. ಕಾಂಗ್ರೆಸ್‌ ನ ಆಲಂ, ಜಾರ್ಖಂಡ ಅಸೆಂಬ್ಲಿಯಲ್ಲಿ ಪಾಕುರ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಆಲಂ ಅವರ ಆಪ್ತ ಕಾರ್ಯದರ್ಶಿ ಸಂಜೀವ್ ಲಾಲ್ ಅವರೊಂದಿಗೆ ಮನೆ ಸಹಾಯಕ ಸಂಪರ್ಕ ಹೊಂದಿದ್ದಾರೆ ಎಂದು ವರದಿಯಾಗಿದೆ.

ಹಣ ವರ್ಗಾವಣೆ ಪ್ರಕರಣ: ಕಳೆದ ವರ್ಷ ಇಡಿಯಿಂದ ಬಂಧನಕ್ಕೊಳಗಾಗಿದ್ದ ಗ್ರಾಮೀಣಾಭಿವೃದ್ಧಿ ಇಲಾಖೆ ಮಾಜಿ ಮುಖ್ಯ ಇಂಜಿನಿಯರ್ ವೀರೇಂದ್ರ ಕುಮಾರ್ ರಾಮ್ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಈ ಹುಡುಕಾಟಗಳು ಸಂಬಂಧಿಸಿವೆ. ರಾಂಚಿಯ ಗ್ರಾಮೀಣ ಕಾಮಗಾರಿ ಇಲಾಖೆಯಲ್ಲಿ ಮುಖ್ಯ ಇಂಜಿನಿಯರ್ ವೀರೇಂದ್ರ ಕುಮಾರ್ ರಾಮ್, ಕಮಿಷನ್ ರೂಪದಲ್ಲಿ ಅಪಾರ ಆದಾಯ ಗಳಿಸಿದ್ದಾರೆ ಎಂದಿದ್ದಇಡಿ, ಅಧಿಕಾರಿಯ 39 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿಕೊಂಡಿತ್ತು.

Read More
Next Story