ಗುಲಾಂ ನಬಿ ಆಜಾದ್  ಸ್ಪರ್ಧೆ ಇಲ್ಲ
x

ಗುಲಾಂ ನಬಿ ಆಜಾದ್ ಸ್ಪರ್ಧೆ ಇಲ್ಲ


ಶ್ರೀನಗರ, ಏಪ್ರಿಲ್‌ 17- ಡೆಮಾಕ್ರಟಿಕ್ ಪ್ರೋಗ್ರೆಸಿವ್ ಆಜಾದ್ ಪಾರ್ಟಿ (ಡಿಪಿಎಪಿ) ಅಧ್ಯಕ್ಷ ಗುಲಾಂ ನಬಿ ಆಜಾದ್ ಅವರು ಜಮ್ಮು ಮತ್ತು ಕಾಶ್ಮೀರದ ಅನಂತನಾಗ್-ರಜೌರಿ ಕ್ಷೇತ್ರದಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಪಕ್ಷ ತಿಳಿಸಿದೆ.

ಮೊಹಮ್ಮದ್ ಸಲೀಮ್ ಪರ್ರೆ ಅವರು ಕಣಕ್ಕೆ ಇಳಿಯಲಿದ್ದಾರೆ ಎಂದು ಡಿಪಿಎಪಿಯ ಪ್ರಾಂತೀಯ ಅಧ್ಯಕ್ಷ ಮೊಹಮ್ಮದ್ ಅಮೀನ್ ಭಟ್ ಹೇಳಿದರು. ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಹಿರಿಯ ನಾಯಕ ಮಿಯಾನ್ ಅಲ್ತಾಫ್ ಈ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.

ಅನಂತನಾಗ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಭಟ್, ʻಆಜಾದ್ ಅವರು ಅನಂತನಾಗ್-ರಾಜೌರಿ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ. ಅವರು ಸ್ಪರ್ಧಿಸದೆ ಇರಲು ಕೆಲವು ಕಾರಣಗಳಿವೆ. ಅವರು ಸಭೆಯಲ್ಲಿ ಕಾರಣಗಳನ್ನುತಿಳಿಸಿದರು. ಆನಂತರ ಪರ್ರೆ ಅವರನ್ನುಕಣಕ್ಕಿಳಿಸಲು ನಿರ್ಧರಿಸಲಾಯಿತುʼ ಎಂದು ಹೇಳಿದರು.

Read More
Next Story